Site icon Vistara News

Sree Narayana Guru: ಶ್ರೀ ನಾರಾಯಣ ಗುರು ಬೋಧನೆಗಳ ಡಿಜಿಟಲೀಕರಣ!

Shri Narayan Guru rare works and teachings are being digitized

ನವದೆಹಲಿ: ಶ್ರೀ ನಾರಾಯಣಗುರು (Sree Narayana Guru) ಅವರ ಕಾರ್ಯಗಳನ್ನು ಡಿಜಿಟಲ್‌ನಲ್ಲಿ (Digital Store) ಸೆರೆ ಹಿಡಿಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಾಂಬೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(IIT Bombay) ಮತ್ತು ಚೆಂಬುರ್ ಶ್ರೀ ನಾರಾಯಣ ಗುರು ಕಾಲೇಜ್ ಆಫ್ ಕಾಮರ್ಸ್‌ (Sree Narayana Guru College of Commerce) ಜಂಟಿಯಾಗಿ, ಭಾರತೀಯ ತತ್ವಜ್ಞಾನಿ (Indian Philosopher) ಮತ್ತು ವಿಚಾರವಾದಿ ಶ್ರೀ ನಾರಾಯಣ ಗುರು ಅವರ ಕುರಿತಾದ ಈವರೊಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದೆ.

19ನೇ ಶತಮಾನದ ಕೊನೆಯಲ್ಲಿ ತಿರುವಾಂಕೂರು, ಕೊಚ್ಚಿ ಮತ್ತು ಮಲಬಾರ್‌ನಲ್ಲಿ ಜಾತಿ ಶ್ರೇಣಿ ವಿರುದ್ಧ ನಾರಾಯಣಗುರು ಅವರು ಹೋರಾಡಿದರು. ಸಾರ್ವತ್ರಿಕ ಮತ್ತು ಮಾನವೀಯ ದೃಷ್ಟಿಕೋನದ ನಾರಾಯಣ ಗುರು ಅವರು ಆಧುನಿಕ ಭಾರತದಲ್ಲಿ ತುಳಿತಕ್ಕೊಳಗಾದ, ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾದವರ ಪರವಾಗಿ ಕೆಲಸ ಮಾಡಿದರು. ಒಂದೇ ಜಾತಿ, ಒಂದೇ ಮತ ಮತ್ತು ಒಬ್ಬನೇ ದೇವರು… ಶ್ರೀ ನಾರಾಯಣ ಗುರುಗಳ ಒಟ್ಟು ಬೋಧನೆಯ ತಿರುಳಾಗಿದೆ.

ಈ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾದ ನಾರಾಯಣ ಗುರು ಡಿಜಿಟಲ್ ರಿಸರ್ಚ್ ರಿಸೋರ್ಸ್ ಪ್ಲಾಟ್‌ಫಾರ್ಮ್ ಎಂಬ ಯೋಜನೆಯು ಶಿವಗಿರಿಯಿಂದ ಪ್ರಕಟವಾದ ಮೂಲ ಧರ್ಮಂ ಮಲಯಾಳಂ ನಿಯತಕಾಲಿಕ ಸೇರಿದಂತೆ ನಾರಾಯಣ ಗುರುಗಳ ಜೀವನ ಮತ್ತು ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ಕೃತಿಗಳ ದಾಖಲೆಗಳ 160,000 ಪುಟಗಳನ್ನು ಡಿಜಿಟಲೀಕರಣಗೊಳಿಸಿದೆ. ನಾರಾಯಣ ಗುರುಗಳು 1928ರಲ್ಲಿ ಕ್ರೈಸ್ತ ಮಿಷನರಿಗಳೊಂದಿಗೆ ನಡೆಸಿದ ಕುತೂಹಲದ ಸಂಭಾಷಣೆಯನ್ನು ಇದರಲ್ಲಿ ಸೇರಿಸಲಾಗಿದೆ. ಖಾಸಗಿ ಸಂಗ್ರಹಗಳಲ್ಲಿ ನಾಶವಾಗುತ್ತಿರುವ ಅಪರೂಪದ ಪುಸ್ತಕಗಳು, ಡೈರಿಗಳು ಮತ್ತು ನಿಯತಕಾಲಿಕೆಗಳು ಅವರ ವ್ಯಕ್ತಿತ್ವದ ಇದುವರೆಗೆ ಅಪರಿಚಿತ ಅಂಶಗಳನ್ನು ಡಿಜಿಟಲ್ ಆಗಿ ಸ್ಟೋರ್ ಮಾಡಲಾಗುತ್ತಿದೆ.

ಎರಡು ವರ್ಷಗಳ ಯೋಜನೆಯು ಅದರ ಮೊದಲ ಕೆಲವು ತಿಂಗಳುಗಳಲ್ಲಿ ಭಾರೀ ಯಶಸ್ಸು ಕಂಡಿದೆ. ಡಿಜಿಟೈಸ್ ಮಾಡಿದ 160,000 ಪುಟಗಳಲ್ಲಿ ಮೂರನೇ ಒಂದು ಭಾಗವು, ನಾರಾಯಣ ಗುರುಗಳು 20 ನೇ ಶತಮಾನದ ಆರಂಭದಲ್ಲಿ ವಾಸಿಸಲು ಬಂದ ಶಿವಗಿರಿ ಬಳಿಯ ವರ್ಕಲಾದಲ್ಲಿನ ಖಾಸಗಿ ಸಂಗ್ರಹಣೆಯನ್ನು ಒಳಗೊಂಡಿದೆ.

ಈ ಸುದ್ದಿಯನ್ನೂ ಓದಿ: Narayanaguru Nigama : ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ; ಈಡೇರಿತು ಬಿಲ್ಲವ/ಈಡಿಗ ಸಮುದಾಯದ ಬಹುಕಾಲದ ಬೇಡಿಕೆ

ಯೋಜನೆಯ ಪ್ರಮುಖ ತನಿಖಾಧಿಕಾರಿಯೂ ಆಗಿರುವ ಐಐಟಿ ಬಾಂಬೆಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಪಕರಾಗಿರುವ ಸಿಬಿ ಕೆ ಜಾರ್ಜ್ ಅವರು ಕಾರ್ಯದ ಅತ್ಯಲ್ಪ ವಿಧಾನಗಳು ಮತ್ತು ಹೆಚ್ಚಿನ ಮಹತ್ವಾಕಾಂಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. “ನಾರಾಯಣ ಗುರುಗಳ ಸುತ್ತ ಸಾಹಿತ್ಯದ ಭಂಡಾರವನ್ನು ರಚಿಸುವುದು ಮತ್ತು ಸಾರ್ವಜನಿಕರಿಗೆ ಮತ್ತು ಸಂಶೋಧಕರಿಗೆ ತೆರೆದ ಮೂಲ ಆನ್‌ಲೈನ್ ವಸ್ತುವಾಗಿ ಲಭ್ಯವಾಗುವಂತೆ ಮಾಡುವುದು ಯೋಜನೆಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಧುನಿಕ ಭಾರತದ ಇತಿಹಾಸದಲ್ಲಿ ನಾರಾಯಣ ಗುರು ಅವರ ಚಳವಳಿಯು ಮೈಲುಗಲ್ಲಾಗಿದೆ. 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಸಮಾಜದಲ್ಲಿ ಆಧುನಿಕ ನ್ಯಾಯ ಪರಿಕಲ್ಪನೆಯನ್ನು ಅವರು ಬೆಳೆಸಿದರು. ಪ್ರತಿಯೊಬ್ಬ ಮನುಷ್ಯನೂ ವಿಭಿನ್ನ, ಸಂಪನ್ಮೂಲಗಳ ಸಮಾನ ಹಂಚಿಕೆ ಅಗತ್ಯ ಮತ್ತು ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು ಎಂಬುದು ಅವರ ಬೋಧನೆಯಾಗಿದೆ ಎಂದು ಜಾರ್ಜ್ ಅವರು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version