Site icon Vistara News

SIA Raids In Kashmir | ಉಗ್ರ ಸಂಘಟನೆಯ ಆಸ್ತಿ ಮೇಲೂ ಕಾರ್ಯಾಚರಣೆ, 4 ಜಿಲ್ಲೆಯಲ್ಲಿ ಜಮಾತ್‌ ಎ ಇಸ್ಲಾಮಿ ಆಸ್ತಿ ಜಪ್ತಿ

SIA Raids In Kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಹೊಡೆದುರುಳಿಸುವುದು ಮಾತ್ರವಲ್ಲ, ಅವರ ಆಸ್ತಿಪಾಸ್ತಿಯನ್ನೂ ಜಪ್ತಿ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಾಜ್ಯ ತನಿಖಾ ದಳ (SIA)ವು ಶನಿವಾರ ಕಾಶ್ಮೀರದ ಹಲವೆಡೆ ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಎ ಇಸ್ಲಾಮಿ (JeI)ಗೆ ಸೇರಿದ ಹಲವು ಆಸ್ತಿಗಳ ಮೇಲೆ ದಾಳಿ (SIA Raids In Kashmir) ನಡೆಸಿ, ಜಪ್ತಿ ಮಾಡಿದೆ.

ಉಗ್ರರಿಗೆ ಹಣಕಾಸು ನೆರವು, ಉಗ್ರರ ಪರವಾಗಿ ಕಾರ್ಯನಿರ್ವಹಣೆ ಸೇರಿ ಹಲವು ಆರೋಪದ ಹಿನ್ನೆಲೆಯಲ್ಲಿ ಬಾರಾಮುಲ್ಲಾ, ಬುದ್ಗಾಮ್‌, ಮಗಮ್‌, ಶ್ರೀನಗರ, ಪುಲ್ವಾಮ ಹಾಗೂ ಕುಲ್ಗಾಂನಲ್ಲಿ ಜಮಾತ್‌ ಎ ಇಸ್ಲಾಮಿಗೆ ಸೇರಿದ 19 ಕಟ್ಟಡಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಣಿವೆಯಲ್ಲಿ ಉಗ್ರ ಚಟುವಟಿಕೆಗಳಿಗೆ ನೆರವು, ಹಣಕಾಸು, ಮೂಲ ಸೌಕರ್ಯ ಒದಗಿಸುವುದು, ಗ್ರೌಂಡ್‌ ವರ್ಕರ್‌ಗಳಾಗಿ ಕಾರ್ಯನಿರ್ವಹಿಸಿದವರು, ಉಗ್ರರ ಸಂಘಟನೆಯ ಸದಸ್ಯರು, ಪಾಕಿಸ್ತಾನದ ಕಮಾಂಡೋಗಳ ಹೆಸರಿಟ್ಟುಕೊಟ್ಟು ಕೆಲಸ ಮಾಡುತ್ತಿರುವವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ | ಶೋಪಿಯಾನ್​ನಲ್ಲಿ ಮುಂಜಾನೆಯೇ ಉಗ್ರರ ವಿರುದ್ಧ ಕಾರ್ಯಾಚರಣೆ; ಮೂವರು ಭಯೋತ್ಪಾದಕರ ಹತ್ಯೆ

Exit mobile version