Site icon Vistara News

Guinness World Record : ಹುಡುಗಿಯರಿಗಿಂತಲೂ ದೊಡ್ಡ ಜಡೆ ಬೆಳೆಸಿದ 15ರ ಹುಡುಗನ ವಿಶ್ವ ದಾಖಲೆ!

Long Hair

ಲಖನೌ: ಉತ್ತರ ಪ್ರದೇಶದ 15 ವರ್ಷದ ಸಿಖ್ ಬಾಲಕ ಸಿದಕ್​ದೀಪ್​ ಸಿಂಗ್ ಚಹಲ್ ತನ್ನ ಜೀವನದಲ್ಲಿ ಎಂದಿಗೂ ಕೂದಲು ಕ್ಷೌರ ಮಾಡಿಸಿಕೊಂಡಿಲ್ಲ. ಹೀಗಾಗಿ ಆತನ ಕೂದಲು ಉದ್ದವಾಗಿ ಬೆಳೆದಿದೆ. ಆ ಕೂದಲು ಆತನನ್ನು ಗಿನ್ನಿಸ್​ ವಿಶ್ವ ದಾಖಲೆಯ (Guinness World Record) ಪುಸ್ತಕಕ್ಕೆ ಸೇರಿಸಿದೆ. ಆತನೀಗ ಅತಿ ಉದ್ದದ ಕೂದಲು ಹೊಂದಿರುವ ಹದಿಹರೆಯದ ಬಾಲಕ ಎಂಬ ಖ್ಯಾತಿ ಪಡೆದುಕೊಂಡಿದ್ದಾನೆ. ಕೂದಲು 130 ಸೆಂ.ಮೀ ಅಥವಾ ಕೇವಲ ನಾಲ್ಕು ಅಡಿ ಮತ್ತು ಮೂರು ಇಂಚುಗಳಷ್ಟಿದ್ದು, ಇಷ್ಟು ಉದ್ದದ ಕೂದಲು ಹೊಂದಿರುವ ವಿಶ್ವದ ಹದಿಹರೆಯದ ಹುಡುಗ ಎಂಬ ಗರಿಮೆಯನ್ನು ಹೊಂದಿದ್ದಾರೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (Guinness World Record) ಸೆಪ್ಟೆಂಬರ್ 14ರಂದು ಚಾಹಲ್ ಅವರ ವೀಡಿಯೊವನ್ನು ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ. “ನನ್ನ ಕೂದಲು ತುಂಬಾ ಉದ್ದವಾಗಿದೆ, ತುಂಬಾ ದಪ್ಪವಾಗಿದೆ ಎಂದು ಜನರು ಹೇಳುತ್ತಾರೆ. ಅವು ಉತ್ತಮವಾಗಿವೆ. ಎಲ್ಲರೂ ಈ ರೀತಿಯ ಕೂದಲನ್ನು ಹೊಂದಬೇಕೆಂದು ಬಯಸುತ್ತಾರೆ. ನನ್ನ ಕೂದಲು 130 ಸೆಂ.ಮೀ ಅಥವಾ ಕೇವಲ ನಾಲ್ಕು ಅಡಿ ಮತ್ತು ಮೂರು ಇಂಚುಗಳಷ್ಟಿದೆ” ಎಂದು ಚಹಲ್​ ವೀಡಿಯೊದಲ್ಲಿ ಹೇಳಿದ್ದಾರೆ.

ಸಿಖ್​ ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ಚಹಲ್ ಅವರ ಪೋಷಕರು ಎಂದಿಗೂ ಆತನ ಕೂದಲನ್ನು ಕತ್ತರಿಸಲಿಲ್ಲ, ಈಗಲೂ ಅದನ್ನು ಅನುಸರಿಸುತ್ತಾರೆ. ನಾನು ಸಿಖ್ ಧರ್ಮವನ್ನು ಆಚರಿಸುತ್ತೇನೆ ಮತ್ತು ನಮ್ಮ ಧರ್ಮದಲ್ಲಿ ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ಸಿದಕ್​ದೀಪ್ ಹೇಳಿದ್ದಾರೆ . ಸಿಖ್ ಧರ್ಮದ ಪ್ರಮುಖ ತತ್ವವೆಂದರೆ ಒಬ್ಬರ ಕೂದಲನ್ನು ಎಂದಿಗೂ ಕತ್ತರಿಸಬಾರದು. ಏಕೆಂದರೆ ಅದು ದೇವರ ಕೊಡುಗೆ. ಚಹಲ್ ಸಾಮಾನ್ಯವಾಗಿ ತನ್ನ ಕೂದಲನ್ನು ಸಿಖ್ಖರ ಸಂಪ್ರದಾಯದಂತೆ ದಸ್ತಾರ್​ನಿಂದ (ಪೇಟ) ಮುಚ್ಚುತ್ತಾರೆ.

ಕೂದಲಿನ ಆರೈಕೆಗೆ ಒಂದು ಗಂಟೆ

ಕೂದಲನ್ನು ತೊಳೆಯಲು ಸುಮಾರು 20 ನಿಮಿಷಗಳು ಬೇಕಾಗುತ್ತದೆ. ಒಣಗಲು ಇನ್ನೂ ಅರ್ಧ ಗಂಟೆ ಬೇಕಾಗುತ್ತದೆ ಎಂದು ಚಹಲ್​ ಹೇಳಿದ್ದಾರೆ. ಕೂದಲು ಬಾಚಲು 10 ರಿಂದ 15 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಹದಿಹರೆಯದ ಚಹಲ್​ ಹೇಳಿದ್ದಾರೆ. “ಇಷ್ಟು ಉದ್ದವಾದ ಕೂದಲನ್ನು ನಿಭಾಯಿಸುವುದು ಕಷ್ಟವಾಗಿರುವುದರಿಂದ ಈ ವಿಷಯದಲ್ಲಿ ನನ್ನ ತಾಯಿ ನನಗೆ ಸಹಾಯ ಮಾಡುತ್ತಾರೆ. ನನ್ನ ತಾಯಿ ಇಲ್ಲದಿದ್ದರೆ, ನಾನು ಈ ದಾಖಲೆಯನ್ನು ಹೊಂದುತ್ತಿರಲಿಲ್ಲ”ಎಂದು ಚಾಹಲ್ ಅಭಿಪ್ರಾಯಪಟ್ಟಿದ್ದಾರೆ.

ಸದಕ್​ದೀಫ್​ ಕೂದಲು ಬಾಲ್ಯದಿಂದಲೂ ಉದ್ದವಾಗಿತ್ತು. ಅವನು ಸುಮಾರು ಮೂರು ಅಥವಾ ನಾಲ್ಕು ವರ್ಷದವನಿದ್ದಾಗ ಅದು ಅವನ ಭುಜಗಳನ್ನು ತಲುಪಿತ್ತು. ಜಾನಿ ಡೆಪ್ ಅವರ ಭುಜವನ್ನು ಹೋಲುತ್ತಿತ್ತು ಎಂದು ಪೋಷಕರು ಹೇಳಿದ್ದಾರೆ.

ಚಾಹಲ್ ಅವರು ಬಾಲ್ಯದಲ್ಲಿ ತಮ್ಮ ಕೂದಲನ್ನು ಹೊರಗೆ ಒಣಗಿಸಲು ಹೋದಾಗಲೆಲ್ಲಾ ಅವರ ಸ್ನೇಹಿತರು ಗೇಲಿ ಮಾಡುತ್ತಿದ್ದರು. ಅದು ಅವರಿಗೆ ಇಷ್ಟವಾಗುತ್ತಿರಲಿಲ್ಲ ಎಂದು ಹೇಳಿದರು. ಅವನು ಕೋಪಗೊಂಡು ತನ್ನ ಕೂದಲನ್ನು ಕತ್ತರಿಸಲು ಅವಕಾಶ ನೀಡುವಂತೆ ಬೇಡಿಕೊಂಡಿದ್ದ. ಈಗ ಅವನು ತನ್ನ ಕೂದಲಿನ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ಕೂದಲನ್ನು ಉಳಿಸಿಕೊಳ್ಳಲು ಯೋಚಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ದಾಖಲೆಯ ಬಗ್ಗೆ ಹೆಮ್ಮೆ

ಉದ್ದ ಕೂದಲಿನ ದಾಖಲೆ ಹೊಂದಿರುವ ವ್ಯಕ್ತಿಯಾಗಿ ಗುರುತಿಸಲ್ಪಟ್ಟ ಬಗ್ಗೆ ಚಹಲ್​ ಸಂತೋಷ ವ್ಯಕ್ತಪಡಿಸಿದ್ದಾರೆ ಇದು ಅವರು ಮಾಡುತ್ತಿರುವ ಎಲ್ಲಾ ಕೆಲಸಗಳಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ “ನಾನು ನನ್ನ ದಾಖಲೆಯ ಬಗ್ಗೆ ಜನರಿಗೆ ಹೇಳಿದಾಗ, ಅವರಲ್ಲಿ ಹೆಚ್ಚಿನವರು ಖುಷಿ ಪಟ್ಟರು. ಅವರು ನನಗಾಗಿ ಸಂತೋಷಪಟ್ಟರು. ಕೆಲವರು ನಕ್ಕರು. ಆದರೆ ದಿನದ ಕೊನೆಯಲ್ಲಿ, ವಿಶ್ವ ದಾಖಲೆಯನ್ನು ನನ್ನ ಹೆಸರಿಗೆ ಬಂತು , “ಎಂದು ಚಹಲ್ ಹೇಳಿದ್ದಾರೆ.

Exit mobile version