Site icon Vistara News

Sikkim Avalanche: ಸಿಕ್ಕಿಂ ಹಿಮಕುಸಿತಕ್ಕೆ 6 ಜನ ಬಲಿ, ಹಿಮದಲ್ಲಿ ಸಿಲುಕಿದ್ದಾರೆ ಇನ್ನೂ 150ಕ್ಕೂ ಅಧಿಕ ಪ್ರವಾಸಿಗರು!

Sikkim Avalanche and 6 people dead still 150 tourists are still stranded

ಗ್ಯಾಂಗ್ಟಕ್, ಸಿಕ್ಕಿಂ: ಗ್ಯಾಂಗ್ಟಕ್‌ನಿಂದ ನಾಥುಲಾ ಪಾಸ್‌ಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ರಸ್ತೆಯ 15ನೇ ಮೈಲಿನಲ್ಲಿ ಮಂಗಳವಾರ ಮಧ್ಯಾಹ್ನ ಹಿಮಕುಸಿತ ಸಂಭವಿಸಿದ್ದು, ಕನಿಷ್ಠ ಆರು ಪ್ರವಾಸಿಗರು ಮೃತಪಟ್ಟಿದ್ದಾರೆ. ಅಲ್ಲದೇ, ಇನ್ನೂ 150ಕ್ಕೂ ಹೆಚ್ಚು ಪ್ರವಾಸಿಗರು ಹಿಮದಲ್ಲಿ ಹೂತು ಹೋಗಿದ್ದಾರೆ. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ(Sikkim Avalanche).

ಈಗಾಗಲೇ ಹಿಮದಿಂದ ಹೊರ ತೆಗೆಯಲಾದ ಆರು ಜನರು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಮೃತಪಟ್ಟವರ ಪೈಕಿ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಹಾಗೂ ಮಗು ಇದೆ.

ಹಿಮದಡಿಯಲ್ಲಿ ಸಿಲುಕಿದ್ದ 30 ಪ್ರವಾಸಿಗರನ್ನು ರಕ್ಷಿಸಿ ಎಸ್‌ಟಿಎನ್‌ಎಂ ಆಸ್ಪತ್ರೆ ಮತ್ತು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 150ಕ್ಕೂ ಹೆಚ್ಚು ಪ್ರವಾಸಿಗರು 15ನೇ ಮೈಲಿ ಪ್ರದೇಶದಲ್ಲಿ ಹಿಮಪಾತದಲ್ಲಿ ಸಿಲುಕಿಕೊಂಡಿದ್ದಾರೆ. ಸಿಕ್ಕಿಂ ಪೊಲೀಸರು, ಸಿಕ್ಕಿಂ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಚಾಲಕರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಚೆಕ್‌ಪೋಸ್ಟ್‌ನ ಇನ್ಸ್‌ಪೆಕ್ಟರ್ ಜನರಲ್ ಸೋನಮ್ ತೇನ್ಸಿಂಗ್ ಭುಟಿಯಾ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಪಾಸ್‌ಗಳನ್ನು 13 ನೇ ಮೈಲಿಗೆ ಮಾತ್ರ ನೀಡಲಾಗುತ್ತದೆ, ಆದರೆ ಪ್ರವಾಸಿಗರು ಬಲವಂತವಾಗಿ 15 ನೇ ಮೈಲಿವರೆಗೂ ಹೋಗುತ್ತಿದ್ದಾರೆ. 15ನೇ ಮೈಲಿಯಲ್ಲಿ ಈ ದುರ್ಘಟನೆ ನಡೆದಿದೆ.

Exit mobile version