Site icon Vistara News

Sikkim Population | 3ನೇ ಮಗು ಹೆತ್ತರೆ ಡಬಲ್ ಇನ್‌ಕ್ರಿಮಂಟ್, ಐವಿಎಫ್ ಮೂಲಕ ಮಗು ಪಡೆದರೆ 3 ಲಕ್ಷ ರೂ. ಅನುದಾನ!

Prem Singh Tamang @ Sikkim

ನವದೆಹಲಿ: ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಲಾಭ ಎಷ್ಟಿದೆಯೋ ಅಷ್ಟೇ ನಷ್ಟವೂ ಇದೆ. ಹಾಗಾಗಿ, ಜನಸಂಖ್ಯೆ ನಿಯಂತ್ರಣಕ್ಕೆ ಭಾರತವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಹೀಗಿದ್ದಾಗ್ಯೂ, ಭಾರತದ ಸಿಕ್ಕಿಮ್ ರಾಜ್ಯದಲ್ಲಿ ಪರಿಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ. ಕನಿಷ್ಠ ಜನಸಂಖ್ಯೆಯನ್ನು ಹೊಂದಿರುವ ಸಿಕ್ಕಿಮ್‌ನಲ್ಲಿ ಫಲವತ್ತತೆ ದರ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಮಕ್ಕಳನ್ನು ಪಡೆಯಲು ಉತ್ತೇಜನಾಕಾರಿ ಕ್ರಮಗಳನ್ನು ಸರ್ಕಾರ ಘೋಷಿಸುತ್ತಿದೆ(Sikkim Population).

ಎರಡನೇ ಮಗುವನ್ನು ಹೆರುವ ಸರ್ಕಾರಿ ಉದ್ಯೋಗಿ ತಾಯಿಗೆ ವಿಶೇಷ ಇನ್‌ಕ್ರಿಮಂಟ್ ಹಾಗೂ ಮೂರನೇ ಮಗು ಹೆತ್ತರೆ ಎರಡು ಇನ್‌ಕ್ರಿಮಂಟ್ ನೀಡುವ ಯೋಜನೆಯನ್ನು ಅಸ್ಸಾಮ್ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಪ್ರಸ್ತಾಪಿಸಿದ್ದಾರೆ.

ಹೆಚ್ಚು ಮಕ್ಕಳನ್ನು ಪಡೆಯಲು ಪ್ರೇರೇಪಿಸುವ ಮೂಲಕ ನಾವು ಗಣನೀಯವಾಗಿ ಇಳಿಮುಖವಾಗುತ್ತಿರುವ ಫಲವತ್ತತೆಯ ದರವನ್ನು ತಡೆಯಬೇಕಾಗಿದೆ ಎಂದು ಮುಖ್ಯಮಂತ್ರಿ ತಮಾಂಗ್ ಅವರು ಹೇಳಇದ್ದಾರೆ. ದಕ್ಷಿಣ ಸಿಕ್ಕಿಮ್‌ನ ಜೋರೆಥಾಂಗ್ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮಾಘೆ ಸಂಕ್ರಾಂತಿ ಸಮಾರಂಭದಲ್ಲಿ ಈ ವಿಷಯವನ್ನು ಅವರು ತಿಳಿಸಿದರು.

ಕಳೆದ ವರ್ಷವಷ್ಟೇ, ಸರ್ಕಾರಿ ಮಹಿಳಾ ಉದ್ಯೋಗಿಗೆ ಒಂದು ವರ್ಷ ಹೆರಿಗೆ ರಜೆ ಮತ್ತು ಪುರುಷರಿಗೆ 30 ದಿನಗಳ ಪಿತೃತ್ವ ರಜೆ ನೀಡುವ ಬಗ್ಗೆ ಸಿಕ್ಕಿಮ್ ಸಚಿವ ಸಂಪುಟ ಘೋಷಣೆ ಮಾಡಿತ್ತು. ಸಮಾರಂಭದಲ್ಲಿ ಮಾತನಾಡುತ್ತಾ ತಮಾಂಗ್, ಸಿಕ್ಕಮ್‌ನ ಆಸ್ಪತ್ರೆಗಳಲ್ಲಿ ಐವಿಎಫ್ ಸೌಲಭ್ಯ ಕೂಡ ದೊರೆಯುವಂತೆ ಮಾಡಲಾಗಿದೆ. ಹಾಗೆಯೇ, ಐವಿಎಫ್ ಪದ್ಧತಿ ಮೂಲಕ ಮಕ್ಕಳನ್ನು ಪಡೆಯುವ ಮಹಿಳೆಯರಿಗೆ 3 ಲಕ್ಷ ರೂ. ಅನುದಾನ ಕೂಡ ಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | Population | ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕುಸಿತ | ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚು?

Exit mobile version