Site icon Vistara News

‘ಪಾಪಿ’ ಮೋದಿ ಪಂದ್ಯ ವೀಕ್ಷಿಸಲು ಬಂದಿದ್ದರಿಂದಲೇ ಭಾರತಕ್ಕೆ ಸೋಲು! ಮಮತಾ ದೀದಿ ಟೀಕೆ

Sinners attended final match india defeated Says mamata banerjee

ನವದೆಹಲಿ: ಐಸಿಸಿ ವರ್ಲ್ಡ್ ಕಪ್(ICC World Cup 2023) ಫೈನಲ್ ಪಂದ್ಯದಲ್ಲಿ (Final Match) ಭಾರತದ ಸೋಲು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಪಂದ್ಯ ನೋಡಲು ಹೋಗಿದ್ದ ಮೋದಿ ಅಪಶಕುನದಿಂದಲೇ ಭಾರತ ಸೋಲು ಕಂಡಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬರ್ತ್‌ಡೇ ದಿನ ಮ್ಯಾಚ್ ಇದ್ದಿದ್ದಕ್ಕೆ ಭಾರತ ಸೋತು ಹೋಯಿತು ಎಂದು ಬಿಜೆಪಿ ನಾಯಕ ಹಾಗೂ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta biswa sarma) ತಿರುಗೇಟು ನೀಡಿದ್ದರು. ಈ ಕೆಸರೆರಚಾಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಅವರು ಎಂಟ್ರಿ ಕೊಟ್ಟಿದ್ದಾರೆ. ಭಾರತೀಯ ತಂಡವು(Team India), ಐಸಿಸಿ ವರ್ಲ್ಡ್‌ ಕಪ್‌ನ ಎಲ್ಲ ಪಂದ್ಯಗಳನ್ನು ಗೆದ್ದರೂ ಫೈನಲ್‌ನಲ್ಲಿ ಸೋಲು ಅನುಭವಿಸಿತು. ಈ ಪಂದ್ಯವನ್ನು ‘ಪಾಪಿಗಳು’ (Sinners) ನೋಡಲು ಬಂದಿದ್ದರು. ಹಾಗಾಗಿ ಸೋತರು ಎಂದು ಹೇಳಿದ್ದಾರೆ.

ಕೋಲ್ಕೊತಾದ ನೇತಾಜಿ ಇಂಡೋರ್ ಸ್ಟೇಡಿಯಮ್‌ನಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಎಲ್ಲ ಪಂದ್ಯಗಳನ್ನು ಭಾರತೀಯ ತಂಡವು ಫೈನಲ್‌ನಲ್ಲಿ ಮಾತ್ರವೇ ಸೋಲು ಅವುಭವಿಸಿತು. ಒಂದು ವೇಳೆ ಈ ಪಂದ್ಯವನ್ನು ಕೋಲ್ಕೊತಾ ಅಥವಾ ಮುಂಬೈನಲ್ಲಿ ಆಯೋಜಿಸಿದ್ದರೆ ಭಾರತ ಸೋಲುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯವನ್ನು ಈಡನ್ (ಕೋಲ್ಕೊತಾದ ಗಾರ್ಡನ್ಸ್) ಅಥವಾ ವಾಂಖೆಡೆ (ಮುಂಬೈನ ಸ್ಟೇಡಿಯಂ) ನಲ್ಲಿ ನಡೆಯುತ್ತಿದ್ದರೆ, ನಾವು ಗೆಲ್ಲುತ್ತಿದ್ದೆವು ಎಂದು ನಾನು ನಿಮಗೆ ಹೇಳಬಲ್ಲೆ. ಅವರು (ಬಿಜೆಪಿ) ಆಟಗಾರರಿಗೆ ಕೇಸರಿ ಜರ್ಸಿಯನ್ನು ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದರು.

ಪಂದ್ಯದ ವೇಳೆ ಕೇಸರಿ ಜರ್ಸಿಗಳನ್ನು ಧರಿಸಲು ಆಟಗಾರರು ವಿರೋಧಿಸಿದ್ದರು ಮತ್ತು ಪಂದ್ಯದ ವೇಳೆ ಧರಿಸಲು ನಿರಾಕರಿಸಿದ್ದರು. ಟೀಂ ಇಂಡಿಯಾ ಮ್ಯಾಚ್ ಜರ್ಸಿ ಕಲರ್ ನೀಲಿ ಬಣ್ಣದ್ದೇ ಉಳಿಸಿಕೊಳ್ಳಲಾಯಿತು ಮತ್ತು ಅಭ್ಯಾಸದ ಸಮಯದಲ್ಲಿ ಕಿತ್ತಳೆ ಬಣ್ಣದ ಜರ್ಸಿಗಳನ್ನು ನೀಡಲಾಯಿತು ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು. ಎಲ್ಲ ಕ್ರೀಡೆಗಳ ಒಕ್ಕೂಡವನ್ನು ರಾಜಕಾರಣಿಗಳು ಆಕ್ರಮಿಸಿಕೊಂಡಿದ್ದಾರೆ. ಕ್ರಿಕೆಟ್‌ ಕೇಸರಿಕರಣವಾಗುತ್ತಿದೆ, ಕಬಡ್ಡಿಯೂ ಕೇಸರೀಕರಣವಾಗುತ್ತಿದೆ. ಕೇಸರಿ ಬಣ್ಣವು ತ್ಯಾಗಿಗಳನ್ನು ಪ್ರತಿನಿಧಿಸುತ್ತದೆ. ಆದರೆ ನೀವು(ಬಿಜೆಪಿ) ಭೋಗಿಗಳು ಎಂದು ಭಾರತೀಯ ಜನತಾ ಪಾರ್ಟಿಯ ವಿರುದ್ಧ ಕೆಂಡ ಕಾರಿದರು.

ರಾಹುಲ್ ಗಾಂಧಿ ಹೇಳಿದ್ದೇನು?

2023ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದರು. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್​ ಹೇಳಿದ್ದಾರೆ.

ಪನೌತಿ… ಪನೌತಿ… ಪನೌತಿ… (ಅಪ ಶಕುನ, ಅಪಶಕುನ, ಅಪಶಕುನ). ನಮ್ಮ ತಂಡದ ಆಟಗಾರರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು ಆದರೆ ಅಪಶಕಮು ಅವರನ್ನು ಸೋಲುವಂತೆ ಮಾಡಿದರು … ಈ ವಿಷಯ ದೇಶದ ಜನರಿಗೆ ತಿಳಿದಿದೆ” ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದೆ.

ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದೇನು?

ಕಳೆದ ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಕೂಟದುದ್ದಕ್ಕೂ ಗೆಲುವು ಸಾಧಿಸಿಕೊಂಡು ಬಂದಿದ್ದ ಭಾರತ ಕೊನೆಯ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿತ್ತು. ʼʼಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira gandhi) ಅವರ ಜನ್ಮದಿನದಂದು ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಸೋತಿದೆʼʼ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿ, ಕಾಂಗ್ರೆಸಿಗರನ್ನು ಕೆಣಕಿದ್ದಾರೆ.

“ನಾವು ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದೇವೆ, ಆದರೆ ಫೈನಲ್‌ನಲ್ಲಿ ಸೋತಿದ್ದೇವೆ. ನಾವು ಪಂದ್ಯವನ್ನು ಏಕೆ ಸೋತಿದ್ದೇವೆ ಎಂದು ನಾನು ಚಿಂತಿಸಿದೆ. ಇಂದಿರಾ ಗಾಂಧಿಯವರ ಜನ್ಮದಿನದಂದು ವಿಶ್ವಕಪ್ ಫೈನಲ್ ಆಡಲಾಗಿದೆ ಎಂದು ನಾನು ಅರಿತುಕೊಂಡೆ. ಇಂದಿರಾ ಗಾಂಧಿಯವರ ಜನ್ಮದಿನದಂದು ನಾವು ವಿಶ್ವಕಪ್ ಫೈನಲ್ ಆಡಿದ್ದೇವೆ. ಆದ್ದರಿಂದ ದೇಶ ಕಪ್ ಗೆಲ್ಲಲು ವಿಫಲವಾಗಿದೆʼʼ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ರಾಹುಲ್ ಗಾಂಧಿ ಮೂರ್ಖರ ಸರದಾರ! ಪಿಎಂ ನರೇಂದ್ರ ಮೋದಿ ವಾಗ್ದಾಳಿ

Exit mobile version