ನವದೆಹಲಿ: ರಾಮ, ರಾವಣ ಮತ್ತು ಸೀತಾ ಕುರಿತು ರಾಜಸ್ಥಾನ ಸಚಿವರೊಬ್ಬರು (Rajasthan minister Rajendra Singh Gudha) ನೀಡಿದ ಹೇಳಿಕೆಯು ವಿವಾದವನ್ನು ಸೃಷ್ಟಿಸಿದೆ. ಜುಂಜುನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರು, ರಾಮ (Ram) ಮತ್ತು (Ravan) ರಾವಣ ಅವರು ಹುಚ್ಚರಂತೆ ಸೀತಾ (Sita) ಮಾತೆ ಹಿಂದೆ ಬಿದ್ದಿದ್ದರು. ಅದರರ್ಥ ಜನಕ ರಾಜನ ಪುತ್ರಿ ಸೀತಾ ಮಾತೆ ಅಷ್ಟೊಂದು ಸುಂದರಿಯಾಗಿದ್ದಳು ಎಂದು ಹೇಳಿದರು. ಸಚಿವರ ಮಾತನಾಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ ಆಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ(stokes controversy).
ಗುಢಾ ಅವರು ರಾಮ, ರಾವಣ ಮತ್ತು ಸೀತಾ ಅವರ ಬಗ್ಗೆ ಹೇಳುತ್ತಿದ್ದಂತೆ ನೆರೆದಿದ್ದ ಜನರು ಜೋರಾಗಿ ನಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಭಾರತೀಯ ಜನತಾ ಪಕ್ಷದ ನಾಯಕರು ತುಷ್ಟೀಕರಣ ರಾಜಕಾರಣದ ಪಿತಾಮಹರು. ಅವರು ಧರ್ಮ, ಜಾತಿ ಮತ್ತು ಭಾರತ-ಪಾಕಿಸ್ತಾನ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದ ಹೆಸರಿನಲ್ಲಿ ಮತ ಕೇಳುತ್ತಾರೆ ಎಂದು ಗುಢಾ ಅವರು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Shocking and absolutely unacceptable
— Shehzad Jai Hind (@Shehzad_Ind) July 11, 2023
ASHOK GEHLOT’s Minister says Prabhu Ram was “mad” behind Maa Sita’s beauty – ((Rajasthan Minister Rajendra Gudda))
Makes very objectionable comments on Maa Sita & Prabhu Ram
This is the true anti Hindu Face of Congress
Deny existence of… pic.twitter.com/HXGZy4GAKx
ರಾಮ ಮತ್ತು ಸೀತಾ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜಸ್ಥಾನ ಸಚಿವರ ವಿರುದ್ಧ ಬಿಜೆಪಿ ಕೆಂಡ ಕಾರಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಅವರು, ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಮುಖವಾಡ ಬಯಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಹಿಂದೆ ಪ್ರಭು ರಾಮನ ಅಸ್ತಿತ್ವವದ ಬಗ್ಗೆ ಪ್ರಶ್ನಿಸಿತ್ತು. ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದ ಕಾಂಗ್ರೆಸ್ ಗೀತಾ ಪ್ರೆಸ್ ಅನ್ನೂ ಟೀಕಿಸಿತ್ತು. ಅಷ್ಟೇ ಅಲ್ಲದೇ ಹಿಂದೂ ಭಯೋತ್ಪಾದನೆ ಎಂದು ಕರೆದಿತ್ತು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Adipurush Movie: ’ಆದಿಪುರುಷ’ನ ವಿವಾದದಲ್ಲಿ ಸಿಲುಕಿದ ಬಿಜೆಪಿ; ಹನುಮ ದೇವರಲ್ಲ ಎಂದಿದ್ದಕ್ಕೆ ಆಪ್, ಕಾಂಗ್ರೆಸ್ ಕಿಡಿ!
ರಾಜೇಂದ್ರ ಗುಢಾ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಾರೆ. ಈ ಹಿಂದೆಯೂ ಅವರ ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಬಹುಜನ ಸಮಾಜ ಪಕ್ಷದ ಟಿಕೆಟ್ ಮೂಲಕ ಆಯ್ಕೆಯಾಗಿದ್ದ ಗುಢಾ ಅವರು ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.