Site icon Vistara News

Farmers Protest: ಕೇಂದ್ರ ಸರ್ಕಾರದ 5 ವರ್ಷಗಳ ಎಂಎಸ್‌ಪಿ ಆಫರ್ ತಿರಸ್ಕರಿಸಿದ ರೈತ ಸಂಘಟನೆ

Farmers Protest

Kisan Mazdoor Mahapanchayat: 30K Punjab farmers in 800 trucks, buses, trains to reach Delhi today

ನವದೆಹಲಿ: ಐದು ವರ್ಷಗಳ ಎಂಎಸ್‌ಪಿ ಆಫರ್‌ (5-year MSP Contract Offer) ಸಂಬಂಧ ಸರ್ಕಾರ ಮತ್ತು ಪ್ರತಿಭಟನಾ ರೈತರ ನಡುವೆ ಭಾನುವಾರ ರಾತ್ರಿ ನಾಲ್ಕನೇ ಸುತ್ತಿನ ಮಾತುಕತೆ ಮುಕ್ತಾಯವಾಯಿತು. ಇದರ ಬೆನ್ನಲ್ಲೇ, ದಿಲ್ಲಿ ಚಲೋ (Delhi Chalo) ಪ್ರತಿಭಟನೆಗೆ ನೇರವಾಗಿ ಸಂಬಂಧ ಹೊಂದಿರದ ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ(SKM), ಕೇಂದ್ರ ಸರ್ಕಾರ (Central Government) 5 ವರ್ಷದ ಎಂಎಸ್‌ಪಿ ಒಪ್ಪಂದದ ಆಫರ್ ಅನ್ನು ತಿರಸ್ಕರಿಸಿದೆ. ಈ ಮಧ್ಯೆ, ದಿಲ್ಲಿ ಚಲೋಗೆ ಕರೆ ನೀಡಿದ ಸಂಘಟನೆಗಳು, ಸರ್ಕಾರ ಪ್ರಸ್ತಾಪದ ಬಗ್ಗೆ ಎರಡು ದಿನಗಳ ಕಾಲ ಚರ್ಚಿಸಿದ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ.

ಭಾನುವಾರ ತಡರಾತ್ರಿ ರೈತ ಮುಖಂಡರೊಂದಿಗಿನ ಸಭೆಯಿಂದ ನಿರ್ಗಮಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರೊಂದಿಗೆ ಮೂವರು ಕೇಂದ್ರ ಸಚಿವರ ಸಮಿತಿಯು ಐದು ವರ್ಷಗಳ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಹೇಳಿದರು. ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವುದು ಇದರಲ್ಲಿ ಸೇರಿದೆ.

ಸೋಮವಾರ ಸಂಜೆ ಎಸ್‌ಕೆಎಂ ಕೇಂದ್ರ ಸ್ರರ್ಕಾರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ ಎಂದು ಹೇಳಿದೆ. ರೈತರ ಮೂಲಭೂತ ಬೇಡಿಕೆಗಳನ್ನು ಬೇರೆಡೆಗೆ ತಿರುಗಿಸುವುದು ಈ ಆಫರ್‌ ಹಿಂದಿರುವ ಉದ್ದೇಶವಾಗಿದೆ ಎಂದು ಟೀಕಿಸಿದೆ. ಎಲ್ಲಾ ಬೆಳೆಗಳನ್ನು ಖರೀದಿಗೆ ಖಾತರಿಪಡಿಸಿದ ಸಂಗ್ರಹಣೆ ಗಿಂತ ಕಡಿಮೆಯಿಲ್ಲದೇ ಖರೀದಿಸಬೇಕು. 2014ರ ಪ್ರಣಾಳಿಕೆಯಲ್ಲಿ ತಿಳಿಸಲಾದ ಬೇಡಿಕೆಯನ್ನು ಈಡೇರಿಸಬೇಕು ಎಂದು ಒಕ್ಕೂಟವು ಹೇಳಿದೆ.

ಈ ಖರೀದಿಯು ಸ್ವಾಮಿನಾಥನ್ ಆಯೋಗದ C2+50% MSP ಸೂತ್ರವನ್ನು ಆಧರಿಸಿರಬೇಕು ಮತ್ತು ಅಸ್ತಿತ್ವದಲ್ಲಿರುವ A2+FL+50% ವಿಧಾನಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಎಸ್‌ಕಿಎಂ ಒಕ್ಕೂಟವು ಹೇಳಿದೆ. ಇದುವರೆಗೆ ನಡೆದ ಮಾತುಕತೆಯ ಸಂಬಂಧ ಕೇಂದ್ರ ಸರ್ಕಾರವು ಪಾರದರ್ಶಕತೆಯನ್ನು ಪ್ರದರ್ಶಿಸಿಲ್ಲ ಎಂದು ರೈತ ಒಕ್ಕೂಟವು ಟೀಕಿಸಿದೆ.

ಏತನ್ಮಧ್ಯೆ, ಭಾನುವಾರ ರಾತ್ರಿ ಕೇಂದ್ರ ಸರ್ಕಾರದ ಸಮಿತಿಯೊಂದಿಗೆ ಸಭೆ ನಡೆಸಿದ ರೈತ ಮುಖಂಡರು, ಸರ್ಕಾರದ ಪ್ರಸ್ತಾವನೆಯನ್ನು ಮುಂದಿನ ಎರಡು ದಿನಗಳಲ್ಲಿ ತಮ್ಮ ವೇದಿಕೆಗಳಲ್ಲಿ ಚರ್ಚಿಸಿ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಎಂಎಸ್‌ಪಿ ಮೇಲಿನ ಕಾನೂನು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳು ಮತ್ತು ಸಾಲ ಮನ್ನಾ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆದವು ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ತಿಳಿಸಿದರು. ನಾವು ಫೆಬ್ರವರಿ 19-20 ರಂದು ನಮ್ಮ ವೇದಿಕೆಗಳಲ್ಲಿ ಚರ್ಚಿಸುತ್ತೇವೆ ಮತ್ತು ಅದರ ಬಗ್ಗೆ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದರ ಪ್ರಕಾರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮತ್ತೊಬ್ಬ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Farmers Protest: ರೈತರ ಪ್ರತಿಭಟನೆ ಹಿನ್ನೆಲೆ; ಫೆ. 24ರವರೆಗೆ ಇಂಟರ್‌ನೆಟ್‌ ಸೇವೆ ಸ್ಥಗಿತ

Exit mobile version