Site icon Vistara News

ರಾತ್ರಿ ಲೈಟ್‌ ಹಾಕಿಕೊಂಡೇ ಮಲಗೋ ಅಭ್ಯಾಸ ಇದ್ಯಾ? ನಿಮಗೆ ಕಾದಿದೆ ಶಾಕಿಂಗ್‌ ನ್ಯೂಸ್‌!

night light

ಬೆಂಗಳೂರು: ರಾತ್ರಿ ಸಮಯದಲ್ಲಿ ಲೈಟ್‌ ಹಾಕಿಕೊಂಡೇ ಮಲಗುವವರು ಈ ಸುದ್ದಿಯನ್ನು ಓದಲೇ ಬೇಕು. ನಿಮಗೇನಾದರೂ ನಿರಂತರವಾಗಿ ಬೆಳಕಿನಲ್ಲೇ ನಿದ್ದೆ ಮಾಡುವ ಅಭ್ಯಾಸವಿದ್ದರೆ, ಅದು ಮುಂದಿನ ದಿನಗಳಲ್ಲಿ  ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು!

ಸ್ಲೀಪ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ನಾರ್ಥ್​ ​ವೆಸ್ಟರ್ನ್ ಮೆಡಿಸಿನ್‌ ಅಧ್ಯಯನ ವರದಿಯಲ್ಲಿ ಕೆಲವು ಶಾಕಿಂಗ್‌ ಅಂಶಗಳನ್ನು ಹೇಳಲಾಗಿದೆ.

ಹೌದು ರಾತ್ರಿ ವೇಳೆ ವಿದ್ಯುತ್​ ಬೆಳಕಿನಲ್ಲಿ ನಿದ್ರಿಸುವವರಿಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಶಾಂಕಿಂಗ್ ವರದಿಯೊಂದನ್ನು ನೀಡಿದೆ. ವರದಿ ಬಹಿರಂಗ ಪಡಿಸಿದೆ. ಅದರಲ್ಲೂ 63 ರಿಂದ 84 ವರ್ಷದ ಆಸುಪಾಸಿನಲ್ಲಿರುವ ಪುರುಷ ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡಲಿದೆ.

ಅಧ್ಯಯನಕರಾರದ ಪೈಲಿಸ್​ ಜೀ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾತ್ರಿ ಮಲಗುವ ಸಂದರ್ಭದಲ್ಲಿ ವಿದ್ಯುತ್​ ದೀಪಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ ಇದರಿಂದ ಹಲವು ರೋಗಗಳಿಗೆ ತುತ್ತಾಗುವುದರಿಂದ ದೂರ ಇರಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ವಯಸ್ಸಾದವರು ಮೊದಲೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯದಲ್ಲಿ ಸಿಲುಕುತ್ತಾರೆ. ಅಂಥವರು ವಿದ್ಯುತ್‌ ದೀಪದ ಅಡಿಯಲ್ಲಿ ರಾತ್ರಿ ಇಡೀ ನಿರ್ಧರಿಸಿದರೆ ಸಮಸ್ಯೆ ಉಲ್ಬಣವಾಗುತ್ತದೆ. ನಿಜವೆಂದರೆ, ವಿದ್ಯುತ್‌ ಬೆಳಕೊಂದೇ ಅಲ್ಲ, ಮೊಬೈಲ್‌ ಬೆಳಕು, ಟಿವಿಯ ಬೆಳಕು ಕೂಡಾ ಇಷ್ಟೇ ಪ್ರಮಾಣದ ತೊಂದರೆಯನ್ನು ಉಂಟು ಮಾಡುತ್ತದೆ.

ಹಾಗಾಗಿ, ನಿದ್ರಿಸುವಾಗ ಕೃತಕ ವಿದ್ಯುತ್ ದೀಪಗಳ ಬಳಕೆ ಮಾಡುವುದನ್ನು ಕಡಿಮೆಗೊಳಿಸಿ. ಒಂದು ವೇಳೆ ಅಗತ್ಯವಿದ್ದರೆ ಕಡಿಮೆ ಬೆಳಕು ಬೀಳುವ ದೀಪಗಳನ್ನು ಬಳಸುವಂತೆ ಅಧ್ಯಯನ ವರದಿಯಲ್ಲಿ ಸೂಚಿಸಲಾಗಿದೆ. ಬಿಳಿ ಬಣ್ಣದ ದೀಪ ಹಾಗೂ ನೀಲಿ ಬಣ್ಣದ ದೀಪಗಳ ಬದಲು ಕೆಂಪು ಅಥವಾ ಕಿತ್ತಳೆ ಬಣ್ಣವುಳ್ಳ ಕಡಿಮೆ ಬೆಳಕಿನ ದೀಪಗಳನ್ನು ಬಳಸುವುದರಿಂದ ಇದು ಅಷ್ಟಾಗಿ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಅನಿರ್ವಾರ್ಯವಾಗಿ ಇಡೀ ರಾತ್ರಿ ಹೆಚ್ಚು ಪ್ರಕಾಶಮಾನವಾಗಿರುವ ದೀಪಗಳನ್ನು ಬಳಸುತ್ತಿದ್ದರೆ, ಮಲಗಿರುವ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಲಗುವುದು ಉತ್ತಮ. ಇದರಿಂದ ಸಮಸ್ಯೆ ಸ್ವಲ್ಪ ಕಡಿಮೆ ಆಗಬಹುದು ಅಷ್ಟೆ!

Exit mobile version