ನವ ದೆಹಲಿ: ಇಬ್ಬರು ರಾಜ್ಯಸಭೆ ಸದಸ್ಯರ ರಾಜೀನಾಮೆ ಹಿನ್ನೆಲೆಯಲ್ಲಿ ಕೇಂದ್ರ ಖಾತೆಗಳ ಮರುಹಂಚಿಕೆ ಮಾಡಲಾಗಿದೆ.
ಸ್ಮೃತಿ ಇರಾನಿ ಅವರಲ್ಲಿ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಣೆಯ ಜತೆಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ನೀಡಲಾಗಿದೆ. ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ವಿಮಾನಯಾನ ಖಾತೆಯ ಜತೆಗೆ ಉಕ್ಕು ಸಚಿವಾಲಯ ಹೊಣೆಯನ್ನೂ ನೀಡಲಾಗಿದೆ.
ಮುಖ್ತರ್ ಅಬ್ಬಾಸ್ ನಖ್ವಿ ಹಾಗೂ ಜೆಡಿಯುವಿನ ಆರ್.ಸಿ.ಪಿ. ಸಿಂಗ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈ ಖಾತೆ ಮರುಹಂಚಿಕೆ ಮಾಡಲಾಗಿದೆ. ಇವರಿಬ್ಬರ ರಾಜ್ಯಸಭೆ ಸದಸ್ಯತ್ವ ಅವಧಿ ಗುರುವಾರ (ಜು.7) ಮುಕ್ತಾಯವಾಗುತ್ತಿದೆ. ನಖ್ವಿ ಅಲ್ಪಸಂಖ್ಯಾತ ಖಾತೆ ಹಾಗೂ ಸಿಂಗ್ ಉಕ್ಕು ಖಾತೆಯ ಸಚಿವರಾಗಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಖ್ವಿ ಹಾಗೂ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ ಅವರು ನೀಡಿದ ಕೊಡುಗೆಯನ್ನು ಮೋದಿ ಶ್ಲಾಘಿಸಿದ್ದಾರೆ. ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಗೆ ಡಾ.ವೀರೇಂದ್ರ ಹೆಗ್ಗಡೆ, ಪಿ.ಟಿ ಉಷಾ, ಇಳಯರಾಜ, ವಿಜಯೇಂದ್ರ ಪ್ರಸಾದ್ ನೇಮಕ