Site icon Vistara News

Soldier Lynched | ಮಗಳ ಆಕ್ಷೇಪಾರ್ಹ ವಿಡಿಯೊ ಪೋಸ್ಟ್‌ ಮಾಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಕ್ಕೇ ಯೋಧನ ಹತ್ಯೆ

Soldier Lynched In Gujarat

ಗಾಂಧಿನಗರ: ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವ, ಅವರ ತ್ಯಾಗವನ್ನು ಸ್ಮರಿಸುವ ದೇಶ ನಮ್ಮದು. ಆದರೆ, ಗುಜರಾತ್‌ನಲ್ಲಿ ಮಾತ್ರ ತಮ್ಮ ಮಗಳ ಆಕ್ಷೇಪಾರ್ಹ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಕ್ಕೇ ಗಡಿ ಭದ್ರತಾ ಪಡೆಯ (BSF) ಯೋಧರೊಬ್ಬರನ್ನು ಹತ್ಯೆ (Soldier Lynched) ಮಾಡಲಾಗಿದೆ.

ನದಿಯಾಡ್‌ನ ಚಕ್ಲಾಸಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಬಿಎಸ್‌ಎಫ್‌ ಯೋಧರೊಬ್ಬರ 15 ವರ್ಷದ ಮಗಳ ಆಕ್ಷೇಪಾರ್ಹ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನು ತಿಳಿದ ಯೋಧ ಗ್ರಾಮಕ್ಕೆ ಆಗಮಿಸಿದ್ದಾರೆ. ಆಗ, 15 ವರ್ಷದ ಬಾಲಕನು ವಿಡಿಯೊದಲ್ಲಿದ್ದಾನೆ ಹಾಗೂ ಆತನೇ ವಿಡಿಯೊ ಪೋಸ್ಟ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದ ಯೋಧ, ಬಾಲಕನ ಮನೆಗೆ ತೆರಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ಕೆರಳಿದ ಬಾಲಕನ ಕುಟುಂಬಸ್ಥರು ಕೊಡಲಿ ಹಾಗೂ ದೊಣ್ಣೆಗಳಿಂದ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಯೋಧನು ಕುಟುಂಬಸ್ಥರ ಜತೆ ತೆರಳಿದ್ದು, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಯೋಧ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕ ಹಾಗೂ ಬಾಲಕಿ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ | ರೈಲಿನಿಂದ ಬಿದ್ದು ಗಾಯಗೊಂಡಿದ್ದ ಯೋಧ ಸಾವು; ಆರೋಪಿ ಟಿಟಿಇಗಾಗಿ ಪೊಲೀಸ್ ಶೋಧ ​

Exit mobile version