Site icon Vistara News

Ram Mandir: ‘ಜೈ ಶ್ರೀರಾಮ್’ ಎನ್ನುತ್ತಾ ಅಯೋಧ್ಯೆಯಲ್ಲಿ ಕಾಂಗ್ರೆಸ್ ಬಾವುಟ ಹರಿದು ಹಾಕಿದರು!

Some people vandalised the Congress flag in ayodhya temple

ನವದೆಹಲಿ: ಅಯೋಧ್ಯಾ (Ayodhya Temple) ದೇಗುಲ ಮುಂದಿದ್ದ ಕಾಂಗ್ರೆಸ್‌ ಪಕ್ಷದ ಬಾವುಟಗಳನ್ನು (Congress Flags Vandalized) ಕೆಲವು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಉತ್ತರ ಪ್ರದೇಶಗ ಕಾಂಗ್ರೆಸ್ ಅಧ್ಯಕ್ಷ(Uttar Pradesh Congress President), ಅಜಯ್ ರಾಯ್ ಮತ್ತು ದೀಪೇಂದ್ರ ಹೂಡಾ ಅವರು ಸೋಮವಾರ ಅಯೋಧ್ಯ ರಾಮ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರು ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ರಾಮ ಲಲ್ಲಾನ (Ram Lalla) ದರ್ಶನ ಪಡೆದುಕೊಂಡರು. ಈ ವೇಳೆ, ಕೆಲವರು ಜೈ ಶ್ರೀ ರಾಮ್ ಎಂದು ಕೂಗುತ್ತಾ ದೇಗುಲ ಮುಂದಿದ್ದ ಕಾಂಗ್ರೆಸ್ ಪಕ್ಷದ ಬಾವುಟಗಳನ್ನು ಹರಿದು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ(Viral Video).

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯೆ ಕಾಂಗ್ರೆಸ್ ಮಹಿಳಾ ಉಸ್ತುವಾರಿ ರೇಣು ರಾಯ್, ಕೆಲವು ಸಮಾಜ ವಿರೋಧಿಗಳು ಕಾಂಗ್ರೆಸ್ ಧ್ವಜವನ್ನು ಕಸಿದುಕೊಂಡಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರನ್ನು ನಿಂದಿಸಿದ್ದಾರೆ ಎಂದು ಹೇಳಿದ್ದಾರೆ

ಕೆಲವು ಸಮಾಜವಿರೋಧಿಗಳು ನಮ್ಮ ಪಕ್ಷದ ಧ್ವಜವನ್ನು ಕಸಿದುಕೊಂಡು ನಮ್ಮ ಪಕ್ಷದ ಕಾರ್ಯಕರ್ತರನ್ನು ನಿಂದಿಸಿದ್ದಾರೆ. ಇದು ನಾಚಿಕೆಗೇಡಿನ ಮತ್ತು ಖಂಡನೀಯ ಕೃತ್ಯವಾಗಿದೆ. ದೇವಸ್ಥಾನ (ರಾಮ ಮಂದಿರ) ಎಲ್ಲರಿಗೂ ಸೇರಿದ್ದು ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯು ಜನವರಿ 22 ರಂದು ನಡೆಯಲಿದ್ದು, ಇದಕ್ಕಾಗಿ ನೀಡಲಾಗಿದ್ದ ಆಹ್ವಾನವನ್ನು ಕಾಂಗ್ರೆಸ್ ವರಿಷ್ಠರು ತಿರಸ್ಕರಿಸಿದ್ದಾರೆ. ಹೀಗಿದ್ದೂ, ಪಕ್ಷದ ಉತ್ತರ ಪ್ರದೇಶ ಘಟಕವು “ಮಕರ ಸಂಕ್ರಾಂತಿ” ಯಂದು ನಗರಕ್ಕೆ ಭೇಟಿ ನೀಡುವ ಯೋಜನೆಗೆ ಅಂಟಿಕೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಧೀರಜ ಗುರ್ಜರ್ ಮತ್ತು ಅವಿನಾಶ್ ಪಾಂಡೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಕಳೆದ ವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸಿದ್ದರು. ತಮಗೆ ನೀಡಲಾದ ಆಹ್ವಾನವನ್ನು ಗೌರವಪೂರ್ವಕವಾಗಿ ತಿರಸ್ಕರಿಸುತ್ತಿದ್ದೇವೆ. ಚುನಾವಣಾ ರಾಜಕೀಯಕ್ಕಾಗಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಧಾರ್ಮಿಕ ಆಚರಣೆಯು ವೈಯಕ್ತಿಕ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Ram Mandir : ಧೋನಿಗೆ ಸಿಕ್ಕಿತು ರಾಮ ಮಂದಿರ ಉದ್ಘಾಟನೆಯ ಆಹ್ವಾನ

Exit mobile version