ನವ ದೆಹಲಿ: ಹರ್ಯಾಣದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ (Sonali Phogat) ಸಾವು ಪ್ರಕರಣ ಕೂಡ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರೀತಿಯಲ್ಲಿ ಬಗೆಹರಿಸಲಾದ ಕೇಸ್ ಉಳಿ ಯಬಹುದು ಎಂಬ ಅನುಮಾನಗಳು ಶುರುವಾಗಿವೆ. ಸ್ವತಃ ಸೋನಾಲಿ ಫೋಗಟ್ ಕುಟುಂಬದ ಸದಸ್ಯರೇ ಇಂಥದೊಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ರೀತಿಯಲ್ಲೇ ಸೋನಾಲಿ ಪ್ರಕರಣವೂ ನಡೆಯುವುದು ಬೇಡ ಎಂದು ನಾವು ಆಶಿಸುತ್ತೇವೆ ಎಂದು ಸೋನಾಲಿ ಅವರ ಸಹೋದರ ಕುಲ್ದೀಪ್ ಫೋಗಟ್ ಹೇಳಿದ್ದಾರೆ.
ಸುಶಾಂತ್ ಸಿಂಗ್ ಕೊಲೆಯಾಗಿದ್ದಾನೆ ಎಂದು ಅವರ ಕುಟುಂಬವು ಈಗಲೂ ನಂಬುತ್ತದೆ. ಆತನಿಗೆ ಡ್ರಗ್ ನೀಡಲಾಗಿತ್ತು. ಈ ಪ್ರಕರಣವು ಅಂತ್ಯವನ್ನು ಇನ್ನೂ ಕಂಡಿಲ್ಲ. ಡ್ರಗ್ ಸೇವನೆ ಅಥವಾ ಡ್ರಗ್ ನೀಡುವುದರ ಬಗೆಗಿನ ಕೇಸ್ ಇದಲ್ಲ. ಇದು ಕೊಲೆಗೆ ಸಂಬಂಧಿಸಿದ ಕೇಸ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋನಾಲಿ ಫೋಗಟ್ ಕೊಲೆಗಾರರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ನಾವು ಬಯಸುತ್ತೇವೆ. ಒಂದು ವೇಳೆ, ಅವಳ ಕೊಲೆಯಾಗಿಲ್ಲ ಎಂದು ಸಾಬೀತಾಗದಿದ್ದರೆ, ನಾವು ಸಿಬಿಐ ತನಿಖೆಗೆ ಹಾಗೂ ಸುಳ್ಳು ಪತ್ತೆಗೆ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಹಾರ್ಟ್ ಅಟ್ಯಾಕ್‌ನಿಂದ ಕೊಲೆಯವರೆಗೆ!
ಆಗಸ್ಟ್ 22ರಂದ ಸೋನಾಲಿ ಫೋಗಟ್ ಸಾವಿಗೀಡಾದಾಗ ಪೊಲೀಸರು ಸಹಿತ ಎಲ್ಲರೂ ಹೃದಯಾಘಾತವೇ ಕಾರಣ ಎಂದು ಭಾವಿಸಿದ್ದರು. ಆದರೆ, ಸೋನಾಲಿ ಸಹೋದರ ಕೊಲೆ ಎಂದು ಆರೋಪಿಸುತ್ತಿದ್ದಂತೆ ಅನುಮಾನಗಳು ಶುರುವಾದವು. ಪೋಸ್ಟ್ ಮಾರ್ಟ್ಂ ರಿಪೋರ್ಟ್ ಬಂದ ಮೇಲೆ, ಅದು ಖಚಿತವಾಗುವ ಸಾಧ್ಯತೆ ಸೃಷ್ಟಿಯಾದವು. ಯಾಕೆಂದರೆ, ಸೋನಾಲಿ ದೇಹದ ಮೇಲೆ ಗಾಯದ ಗುರುತುಗಳು, ದೇಹದೊಳಗೇ ಡ್ರಗ್ಸ್ ಸೇರಿದ್ದು ಪತ್ತೆಯಾಯಿತು. ಇಷ್ಟಾಗುತ್ತಿದ್ದಂತೆ ಗೋವಾ ಪೊಲೀಸರು ಸೋನಾಲಿಯ ಇಬ್ಬರು ಸಹಾಯಕರನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಸೋನಾಲಿಗೆ ಡ್ರಗ್ಸ್ ಒತ್ತಾಯವಾಗಿ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ. ಬಹುಶಃ ತನಿಖೆ ಮುಂದುವರಿದಂತೆ ಕೊಲೆಯ ಹಿಂದಿನ ಕಾರಣ ಬಹಿರಂಗವಾಗಬಹುದು.
ಇದನ್ನು ಓದಿ | Explainer | ಟಿಕ್‌ಟಾಕ್, ಬಿಗ್‌ಬಾಸ್, ಆ್ಯಕ್ಟಿಂಗ್, ಪಾಲಿಟಿಕ್ಸ್… ಕೊಲೆಯಾದ Sonali Phogat ಅವರ ಜೀವನದ ಕುತೂಹಲದ ಕತೆ!