Site icon Vistara News

Sonia Gandhi: ಸೋನಿಯಾ ನಿವೃತ್ತಿ ಹೊಂದಲ್ಲ, ಇನಿಂಗ್ಸ್‌ ಅಂತ್ಯ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ ವಕ್ತಾರೆ ಸ್ಪಷ್ಟನೆ

Sonia Gandhi Is Not Retiring, Says Congress Leader After Innings End Remark

ಸೋನಿಯಾ ಗಾಂಧಿ

ರಾಯ್‌ಪುರ: ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ಇನಿಂಗ್ಸ್‌ ಮುಕ್ತಾಯವಾಗಬಹುದು ಎಂದು ಸೋನಿಯಾ ಗಾಂಧಿ (Sonia Gandhi) ಅವರು ಹೇಳಿದ ಬೆನ್ನಲ್ಲೇ ಅವರ ರಾಜಕೀಯ ನಿವೃತ್ತಿ ಕುರಿತು ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆಯೇ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಬಗ್ಗೆ ಕಾಂಗ್ರೆಸ್‌ ವಕ್ತಾರೆ ಅಲ್ಕಾ ಲಾಂಬಾ ಸ್ಪಷ್ಟನೆ ನೀಡಿದ್ದಾರೆ. “ಸೋನಿಯಾ ಗಾಂಧಿ ಎಂದಿಗೂ ನಿವೃತ್ತರಾಗುವುದಿಲ್ಲ” ಎಂದು ಹೇಳಿದ್ದಾರೆ.

“ಸೋನಿಯಾ ಗಾಂಧಿ ಮಾತನಾಡಿರುವ ಅಂಶಗಳನ್ನು ಮಾಧ್ಯಮಗಳು ಬೇರೆ ರೀತಿ ಬಿಂಬಿಸಬಾರದು. ಯಾವುದೇ ಕಾರಣಕ್ಕೂ ಸೋನಿಯಾ ಗಾಂಧಿ ಅವರು ನಿವೃತ್ತಿಯಾಗುವುದಿಲ್ಲ. ಹಾಗಂತ ಅವರೇ ಹೇಳಿದ್ದಾರೆ. ಹಾಗಾಗಿ ಮಾಧ್ಯಮಗಳು ನಿವೃತ್ತಿಯಾಗುತ್ತಾರೆ ಎಂಬುದಾಗಿ ಬಿಂಬಿಸಬಾರದು” ಎಂದು ರಾಯ್‌ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಮಹಾ ಅಧಿವೇಶನದಲ್ಲಿ ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆ ಕುರಿತು ಪ್ರಿಯಾಂಕಾ ವಾದ್ರಾ ಸಂದೇಶ

ಲೋಕಸಭೆ ಚುನಾವಣೆಗೆ ಒಂದೇ ವರ್ಷವಿರುವ ಕಾರಣ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಪಕ್ಷದ ಮುಖಂಡರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕರೆ ನೀಡಿದ್ದಾರೆ. “ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳೂ ನಿಂತಿವೆ. ಹಾಗಾಗಿ, ಕಾಂಗ್ರೆಸ್‌ನಿಂದ ಹೆಚ್ಚಿನ ನಿರೀಕ್ಷೆ ಇದೆ. ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ಪುತ್ರಿ ಪ್ರಿಯಾಂಕಾಗಾಗಿ ಇನಿಂಗ್ಸ್ ಮುಗಿಸುತ್ತಿದ್ದಾರಾ ಸೋನಿಯಾ ಗಾಂಧಿ?; 2024ರಲ್ಲಿ ಅಮ್ಮನ ಕ್ಷೇತ್ರದಿಂದ ಮಗಳ ಸ್ಪರ್ಧೆ?

Exit mobile version