Site icon Vistara News

Congress Plenary Session: ಕಾಂಗ್ರೆಸ್ ಮಹಾಧಿವೇಶನದ ಮೊದಲ ದಿನ ಸೋನಿಯಾ, ರಾಹುಲ್, ಪ್ರಿಯಾಂಕಾ ಗೈರು

Delhi High Court The High Court rejected the petition of Sonia Gandhi's family in the tax case, what is the case?

ನವದೆಹಲಿ: ಛತ್ತೀಸ್‌ಗಢ ರಾಜಧಾನಿ ರಾಯಪುರದಲ್ಲಿ ಕಾಂಗ್ರೆಸ್‌ನ ಮಹಾಧಿವೇಶನ (Congress Plenary Session) ಶುಕ್ರವಾರದಿಂದ ಆರಂಭವಾಗಿದೆ. ಆದರೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi), ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಮೊದಲನೇ ದಿನ ಗೈರು ಹಾಜರಾಗಿದ್ದಾರೆ. ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ (Mallikarjun Kharge) ಅವರು ಪಕ್ಷದ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.

ಹಲವು ಸೋಲು, ಅನೇಕ ನಾಯಕರ ನಿರ್ಗಮನ, ಆಂತರಿಕ ಕಚ್ಚಾಟದಿಂದ ನಲುಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಆಯ್ಕೆಯಾದರು. ಖರ್ಗೆ ಅವರು ಸೋನಿಯಾ ಅವರ ನಿಷ್ಠ ಎಂದೇ ಗುರುತಿಸಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಚಾಲನೆ

ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನ (Congress Plenary Session)ಇಂದಿನಿಂದ ಮೂರು ದಿನಗಳ ಕಾಲ ಛತ್ತೀಸ್​ಗಢ್​ನ ರಾಯ್ಪುರದಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಮೊದಲಿಗೆ ಪಕ್ಷದ ಸಂಚಾಲಕ ಸಮಿತಿ ಸಭೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್​​​ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಗೆ ಚುನಾವಣೆ ನಡೆಸುವ ಸಂಬಂಧ ನಿರ್ಣಾಯಕ ನಿರ್ಧಾರ ಹೊರಬೀಳಲಿದೆ.

Congress Plenary Session ಕುರಿತು ಮಾಹಿತಿ ನೀಡಿದ ಜೈರಾಮ್ ರಮೇಶ್

ಇತ್ತೀಚೆಗಷ್ಟೇ ಭಾರತ್​ ಜೋಡೋ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಾಂಗ್ರೆಸ್ ಇದೀಗ ಮೂರು ದಿನಗಳ ಸರ್ವಸದಸ್ಯರ ಸಭೆ ನಡೆಸುತ್ತಿದ್ದು, 2024ರ ಲೋಕಸಭಾ ಚುನಾವಣೆ ಎದುರಿಸಲು ಅಗತ್ಯವಿರುವ ಕಾರ್ಯತಂತ್ರ ರೂಪಿಸುವುದು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ, ಉಳಿದ ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಈ ಸಭೆಯಲ್ಲಿ ಯೋಜನೆ ರೂಪಿಸಲಿದೆ.

ಇದನ್ನೂ ಓದಿ: Pawan Khera: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಬೇಲ್

ಇಂದು ಬೆಳಗ್ಗೆ ಕಾಂಗ್ರೆಸ್​ ಸಂಚಾಲನಾ ಸಮಿತಿಯ ಸಭೆ ನಡೆಯುವುದರೊಂದಿಗೆ ಸರ್ವಸದಸ್ಯರ ಸಮಾವೇಶ ಪ್ರಾರಂಭಗೊಳ್ಳುವುದು. ಸಂಜೆ 4ಗಂಟೆಗೆ ನಡೆಯಲಿರುವ ಸಭೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಯುವಕರು, ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ಆರು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಆ ನಿರ್ಣಯಗಳ ಬಗ್ಗೆ ಫೆ25 ಮತ್ತು 26ರಂದು ವ್ಯಾಪಕ ಚರ್ಚೆ ನಡೆಯಲಿದೆ. ಕೊನೇ ದಿನ ಅಂದರೆ ಫೆ.26ರಂದು ಮಧ್ಯಾಹ್ನ 2ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಭಾಷಣ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್​ ರಮೇಶ್​ ತಿಳಿಸಿದ್ದಾರೆ.

Exit mobile version