ನವದೆಹಲಿ: ಫೆಬ್ರವರಿ 12ರಿಂದ 16ರವರೆಗೆ ಕೇಂದ್ರ ವಿತ್ತ ಸಚಿವಾಲಯವು (Finance Ministry) ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು (Sovereign Gold Bonds) ವಿತರಿಸಲಿದ್ದು, ಫೆ.21 ಸೆಟಲ್‌ಮೆಂಟ್ ದಿನವಾಗಿದೆ. ಪ್ರತಿ ಗ್ರಾಮ್‌ಗೆ 6,263 ರೂಪಾಯಿಯಂತೆ ಭಾರತೀಯ ರಿಸರ್ವ್ ಬ್ಯಾಂಕ್ (Reserve bank of India) ಗೋಲ್ಡ್ ಬಾಂಡ್ ವಿತರಣೆ ಮಾಡಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚನೆ ನಡೆಸಿದ ಸರ್ಕಾರವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಸಾವರಿನ್ ಗೋಲ್ಡ್ ಬಾಂಡ್‌ಗಳ ವಿತರಣೆಯ ಬೆಲೆಯಿಂದ ಪ್ರತಿ ಗ್ರಾಂಗೆ 50 ರೂ ರಿಯಾಯಿತಿ ನೀಡಲು ನಿರ್ಧರಿಸಿದೆ. ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ. ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 6, 213 ರೂ. ಇರಲಿದೆ.
ಬಾಂಡ್‌ಗಳಿಗೆ ಪಾವತಿಯು ನಗದು ಪಾವತಿ (ಗರಿಷ್ಠ ರೂ 20,000/- ವರೆಗೆ) ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ಮಾಡಬೇಕಾಗುತ್ತದೆ.
ನಿಗದಿತ ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SHCIL), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (CCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE), ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಸೇರಿದಂತೆ ವಿವಿಧ ಚಾನಲ್‌ಗಳ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಲಭ್ಯವಿರುತ್ತವೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Money Guide : Sovereign Gold Bond : ಸಾವರಿನ್ ಗೋಲ್ಡ್ ಬಾಂಡ್ ಮಾರಾಟ ಇಂದಿನಿಂದ ಶುರು