Site icon Vistara News

Special Status: ಬಿಹಾರಕ್ಕೆ ಇಲ್ಲ ವಿಶೇಷ ಸ್ಥಾನಮಾನ; ನಿತೀಶ್‌ ಕುಮಾರ್‌ ರಾಜೀನಾಮೆಗೆ ಆರ್‌ಜೆಡಿ ಆಗ್ರಹ

Special Status

Centre Reiterates No Special Status For Bihar, RJD Says Nitish Kumar Should Resign

ಹೊಸದಿಲ್ಲಿ: ಈ ಬಾರಿ ಹಲವು ನಿರೀಕ್ಷೆಗಳೊಂದಿಗೆ ಮತ್ತೆ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ನಿತೀಶ್‌ ಕುಮಾರ್‌(Nithish Kumar) ನೇತೃತ್ವದ ಜೆಡಿ(ಯು)(JDU)ಗೆ ಆರಂಭದಲ್ಲಿ ಶಾಕ್‌ ಎದುರಾಗಿದ್ದು, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇತ್ತೀಚೆಗಷ್ಟೇ ಜೆಡಿಯು ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ದಶಕದ ಬೇಡಿಕೆಯಾಗಿರುವ ಬಿಹಾರಕ್ಕೆ ವಿಶೇಷ ಸ್ಥಾನಮಾನದ(Special Status) ನಿರ್ಣಯವನ್ನು ಅಂಗೀಕಾರ ಮಾಡಲಾಗಿತ್ತು. ಆದರೆ ದಶಕದ ಬೇಡಿಕೆಗೆ ಕೇಂದ್ರದಿಂದ ಈ ಬಾರಿಯೂ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ.

ಇನ್ನು ಈ ಬಗ್ಗೆ ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ ಕೇಂದ್ರ ಸಚಿವ ಪಂಕಜ್‌ ಚೌಧರಿ, ಎಲ್ಲಾ ಅಂಶಗಳ ಸಮಗ್ರ ಪರಿಗಣನೆ ಮತ್ತು ರಾಜ್ಯದ ವಿಲಕ್ಷಣ ಪರಿಸ್ಥಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು, ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರದ ವಿನಂತಿಯನ್ನು ಅಂತರ್-ಸಚಿವಾಲಯ ಗುಂಪು (IMG) ಪರಿಗಣಿಸಿತ್ತು, ಅದು ಮಾರ್ಚ್ 30, 2012 ರಂದು ತನ್ನ ವರದಿಯನ್ನು ಸಲ್ಲಿಸಿತು. NDC ಮಾನದಂಡಗಳನ್ನು ಪರಿಗಣಿಸಿ ಬಿಹಾರಕ್ಕೆ ಸ್ಥಾನಮಾನ ನೀಡಲಾಗುವುದಿಲ್ಲ ಎಂದಿದ್ದಾರೆ.

ಜೆಡಿಯು ಸದಸ್ಯ ರಾಮಪ್ರೀತ್ ಮಂಡಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೌಧರಿ, ಪ್ರಸ್ತುತ ಮಾನದಂಡಗಳಲ್ಲಿ ಗುಡ್ಡಗಾಡು ಮತ್ತು ಕಷ್ಟಕರವಾದ ಭೂಪ್ರದೇಶ, ಕಡಿಮೆ ಜನಸಂಖ್ಯಾ ಸಾಂದ್ರತೆ ಅಥವಾ ಬುಡಕಟ್ಟು ಜನಸಂಖ್ಯೆ ಗಮನಾರ್ಹವಾಗಿದೆ. ಮೇಲೆ ಪಟ್ಟಿ ಮಾಡಲಾದ ಎಲ್ಲಾ ಅಂಶಗಳ ಸಮಗ್ರ ಪರಿಗಣನೆ ಮತ್ತು ರಾಜ್ಯದ ವಿಚಿತ್ರ ಪರಿಸ್ಥಿತಿಯ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ, ಈ ಹಿಂದೆ, 14 ನೇ ಹಣಕಾಸು ಆಯೋಗದ ವರದಿಯು ಯಾವುದೇ ರಾಜ್ಯಗಳಿಗೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದೆ ಎಂದು ಸರ್ಕಾರ ವಾದಿಸಿದೆ. ವಿಶೇಷ ಸ್ಥಾನಮಾನದಲ್ಲಿ ತೆರಿಗೆ ವಿನಾಯಿತಿ ಮತ್ತು ಫಲಾನುಭವಿ ರಾಜ್ಯಗಳಿಗೆ ಹೆಚ್ಚಿನ ಕೇಂದ್ರ ಧನಸಹಾಯ ಸೇರಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಕೇಂದ್ರ ಬಜೆಟ್ ಮಂಡಿಸಲಿರುವ ಅಧಿವೇಶನದ ಆರಂಭಕ್ಕೆ ಒಂದು ದಿನ ಮೊದಲು, ಜೆಡಿಯು, ವೈಎಸ್‌ಆರ್‌ಸಿಪಿ ಮತ್ತು ಬಿಜೆಡಿ ಬಿಹಾರ, ಆಂಧ್ರಪ್ರದೇಶ ಮತ್ತು ಒಡಿಶಾಗೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಒತ್ತಾಯಿಸಿದವು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆದಿದ್ದು, ಜೆಡಿಯು(JD(U), ವೈಎಸ್‌ಆರ್‌ಪಿ(YSRCP) ಮತ್ತು ಬಿಜೆಡಿ(BJD) ಬಿಹಾರ ಆಂಧ್ರಪ್ರದೇಶ ಮತ್ತು ಒಡಿಶಾಗೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿವೆ.

ಸರ್ವಪಕ್ಷಗಳ ಸಭೆಯಲ್ಲಿ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯು ಆಡಳಿತಾರೂಢ ಎನ್‌ಡಿಎ(NDA) ಮತ್ತು ಐಎನ್‌ಡಿಐಎ(INDIA)ಯ ಮಿತ್ರಪಕ್ಷಗಳು ಬೇಡಿಕೆ ಇಟ್ಟಿವೆ. ಬಿಹಾರದ ವಿಶೇಷ ಸ್ಥಾನಮಾನದ ಬಗ್ಗೆ ಜೆಡಿಯುನ ಸಂಜಯ್‌ ಝಾ ಮತ್ತು ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಕೂಡ ಬ್ಯಾಟಿಂಗ್‌ ನಡೆಸಿದ್ದಾರೆ. ಅದರಿಗೆ ಆರ್‌ಜೆಡಿಗೆ ಬೆಂಬಲ ಸೂಚಿಸಿತ್ತು. ಒಂದು ವೇಳೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದೇ ಇದ್ದಲ್ಲಿ ವಿಶೇಷ ಹಣಕಾಸು ನೆರವು ನೀಡಬಹುದು ಎಂದು ಝಾ ಹೇಳಿದ್ದಾರೆ.

ಇದನ್ನೂ ಓದಿ:Special Status: ಬಜೆಟ್‌ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ; ವಿಶೇಷ ಸ್ಥಾನಮಾನಕ್ಕೆ ರಾಜ್ಯಗಳ ಬೇಡಿಕೆ

Exit mobile version