Site icon Vistara News

Viral Video: ತಂದೆ-ತಾಯಿಯನ್ನು ವಿಮಾನಕ್ಕೆ ಸ್ವಾಗತಿಸಿದ ಗಗನಸಖಿ; ಯುವತಿ ಕಣ್ಣಲ್ಲಿ ಪನ್ನೀರು

Spicejet Viral Video

SpiceJet Air Hostess Welcoming Her Parents Onboard; Adorable Video Goes Viral

ನವದೆಹಲಿ: ನಾವು ಕಲಿತ ಶಾಲೆಗೆ ಶಿಕ್ಷಕ ಅಥವಾ ಶಿಕ್ಷಕಿಯಾಗಿ ಹೋಗುವುದು, ತಂದೆ ಅಥವಾ ತಾಯಿ ಶಿಕ್ಷಕಿಯಾಗಿರುವ ಶಾಲೆಗೇ ನಾವೂ ಶಿಕ್ಷಕ ಅಥವಾ ಶಿಕ್ಷಕಿಯಾಗಿ ಹೋಗುವುದು, ಗಗನಸಖಿಯಾಗಿ ಕೆಲಸ ಮಾಡುವ ವಿಮಾನಕ್ಕೇ ತಂದೆ-ತಾಯಿಯನ್ನು ಸ್ವಾಗತಿಸುವುದು ಯಾರಿಗೇ ಆಗಲಿ ಸಾರ್ಥಕ್ಯದ ಕ್ಷಣ. ಇಂತಹ ಸಾರ್ಥಕ್ಯದ ಕ್ಷಣವನ್ನು ಸ್ಪೈಸ್‌ಜೆಟ್‌ ಗಗನಸಖಿಯೊಬ್ಬರು (SpiceJet Air Hostess) ಅನುಭವಿಸಿದ್ದಾರೆ. ತಂದೆ-ತಾಯಿಯನ್ನು ವಿಮಾನಕ್ಕೆ ಸ್ವಾಗತಿಸಿ, ಅವರ ಆಸನದಲ್ಲಿ ಕೂರಿಸುವ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಹೌದು, ಅಸ್ಮಿತಾ ಎಂಬ ಗಗನಸಖಿಯು ತಾನು ಕಾರ್ಯನಿರ್ವಹಿಸುವ ವಿಮಾನಕ್ಕೆ ತಂದೆ-ತಾಯಿಯನ್ನು ಸ್ವಾಗತಿಸಿದ್ದಾರೆ. ಅವರ ಫ್ಲೈಟ್‌ ಟಿಕೆಟ್‌ ಚೆಕ್‌ ಮಾಡಿ, ಸರಿಯಾದ ಆಸನದಲ್ಲಿ ಕೂರುವಂತೆ ಮಾರ್ಗದರ್ಶನ ಮಾಡಿದ್ದಾರೆ. ಬಳಿಕ ಗಗನಸಖಿಯ ತಂದೆ-ತಾಯಿಯು ತಮ್ಮ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ.

ವೈರಲ್‌ ಆದ ವಿಡಿಯೊ

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅವರು ಪೋಸ್ಟ್‌ ಹಂಚಿಕೊಂಡಿದ್ದು, “ವಿಐಪಿ ಪ್ಯಾಕ್ಸ್‌ ವಿಮಾನ ಹತ್ತಿದ್ದಾರೆ. ವಿಶೇಷ ಅನುಭವ” ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ತಂದೆ-ತಾಯಿಯನ್ನು ವಿಮಾನಕ್ಕೆ ಸ್ವಾಗತಿಸಿದ ಖುಷಿಯು ಮಗಳದ್ದಾದರೆ, ಮಗಳು ಗಗನಸಖಿಯಾಗಿರುವ ವಿಮಾನದಲ್ಲೇ ಪ್ರಯಾಣಿಸಿದ ಸಂತಸ ಅವರ ತಂದೆ-ತಾಯಿಯದ್ದಾಗಿದೆ.

ಇದನ್ನೂ ಓದಿ: Viral Video: ವಯಸ್ಸು 68, ಮನಸ್ಸು 18, ಜಿಮ್‌ನಲ್ಲಿ ಭರ್ಜರಿ ವರ್ಕೌಟು; ಇದು Thursday ಮೋಟಿವೇಷನಲ್‌ ವಿಡಿಯೊ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊವನ್ನು 1.4 ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ಹಾಗೆಯೇ, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. “ಪ್ರತಿಯೊಂದು ವೃತ್ತಿಯೂ ಅದರದ್ದೇ ಆದ ಘನತೆ ಹೊಂದಿರುತ್ತದೆ. ಯುವತಿಯ ಕಣ್ಣಲ್ಲಿ ಖುಷಿ ನೋಡಿ ನನಗೂ ಸಂತಸವಾಯಿತು” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿ, “ಮಗಳ ಕಣ್ಣಿನಲ್ಲಿ ಖುಷಿ ಹಾಗೂ ಸಾರ್ಥಕ ಭಾವ ಮೂಡಿದೆ. ಅವರ ತಂದೆಗೂ ಮಗಳ ಬಗ್ಗೆ ಹೆಮ್ಮೆ ಎನಿಸಿರಲಿಕ್ಕೂ ಸಾಕು” ಎಂದು ಹೇಳಿದ್ದಾರೆ.

Exit mobile version