ಹತ್ರಾಸ್‌ನಲ್ಲಿ (Hathras) ಇತ್ತೀಚೆಗೆ (Stampede Tips and Tricks) ಬಾಬಾ ಭೋಲೆ (Baba Bhole) ಅವರ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾಗಿ 121 ಮಂದಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದರು. ಇಂತಹ ಕಾಲ್ತುಳಿತ ಸಂದರ್ಭಗಳಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Viral Video) ಶೇರ್ ಆಗುತ್ತಿದೆ.
ಉತ್ತರ ಪ್ರದೇಶದ ಹತ್ರಾಸ್ ಸತ್ಸಂಗದ (satsang) ಮುಖ್ಯ ಭಾಷಣಕಾರರಾಗಿ ಭೋಲೆ ಬಾಬಾ ಆಗಮಿಸಿದ್ದರು. ಭೋಲೆ ಬಾಬಾ ಅವರು ಅವರು ಅಲ್ಲಿಗೆ ಆಗಮಿಸಿದಾಗ ಭಕ್ತರು ಆ ಪ್ರದೇಶದ ಮಣ್ಣನ್ನು ಸಂಗ್ರಹಿಸಲು ಪ್ರಾರಂಭಿಸಲು ತೊಡಗಿದಾಗ ಕಾಲ್ತುಳಿತ ಉಂಟಾಗಿತ್ತು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಜನರು ಕಾಲ್ತುಳಿತದಿಂದ ಹೇಗೆ ಬದುಕಬಹುದು ಎಂಬುದನ್ನು ವಿವರಿಸಲು ತಜ್ಞರು ಸ್ವಯಂಸೇವಕರ ಗುಂಪಿನ ಸಹಾಯವನ್ನು ಬಳಸಿದ್ದಾರೆ.
ಜನರು ಕಾಲ್ತುಳಿತದಲ್ಲಿ ಹೇಗೆ ಸಿಲುಕಿಕೊಂಡರು ಎಂಬುದನ್ನು ಪ್ರದರ್ಶಿಸುವ ದೃಶ್ಯವೂ ಇದರಲ್ಲಿದೆ. ಇದಲ್ಲದೆ ಇಂತಹ ಸಂದರ್ಭಗಳು ಜನಸಮೂಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನೂ ವಿವರಿಸಲಾಗಿದೆ.
Surviving a Stampede… pic.twitter.com/lX7zBeHozi
— Crack the Civils(UPSC) (@Crackthecivils) July 4, 2024
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಜನರು ಎಂದಾದರೂ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ ಬದುಕುಳಿಯಬಹುದು ಎಂಬುದನ್ನು ತಜ್ಞರು ವಿವರಿಸಿದ್ದಾರೆ. ಇದಕ್ಕಾಗಿ ಪರಿಣಿತರು ಸಹಾಯಕವಾದ ಸಲಹೆಗಳು ಮತ್ತು ಭಂಗಿಗಳನ್ನು ಹೇಳಿದ್ದಾರೆ. ಇಂಥ ಕಾಲ್ತುಳಿತ ಸಂದರ್ಭದಲ್ಲಿ ಅಡ್ಡಲಾಗಿ ಮಲಗುವ ಮೂಲಕ ಮತ್ತು ಎರಡೂ ಕೈಗಳಿಂದ ತಲೆ ಮತ್ತು ಮುಖವನ್ನು ರಕ್ಷಿಸಿಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ವಿಡಿಯೊದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗಿದೆ.
ಕಾಲ್ತುಳಿತದಲ್ಲಿ ಸಿಲುಕಿಕೊಳ್ಳುವ ಜನರು ವಿವಿಧ ಕಡೆಯಿಂದ ಒಂದೇ ಬಾರಿಗೆ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಆಗ ಉಸಿರು ಕಟ್ಟುತ್ತದೆ. ಪಕ್ಕೆಲುಬುಗಳು, ಹೃದಯ ಮತ್ತು ಪ್ರಮುಖ ಅಂಗಗಳಿಗೆ ಹಾನಿಯುಂಟಾಗುತ್ತದೆ. ಈ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವ ಭಂಗಿಯನ್ನು ತಜ್ಞರು ವಿವರಿಸಿದ್ದಾರೆ.
ಹತ್ರಾಸ್‌ನಲ್ಲಿ ಏನಾಗಿತ್ತು?
ಹತ್ರಾಸ್ ಜಿಲ್ಲೆಯ ಸಿಕಂದರಾ ರಾವು ಪ್ರದೇಶದ ರಾತಿ ಭಾನ್‌ಪುರ್ ಗ್ರಾಮದಲ್ಲಿ ಇತ್ತೀಚೆಗೆ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಪ್ರಚಾರಕರು ಆಯೋಜಿಸಿದ್ದ ‘ಸತ್ಸಂಗ’ದಲ್ಲಿ ಲಕ್ಷಾಂತರ ಜನರು ಜಮಾಯಿಸಿದಾಗ ಕಾಲ್ತುಳಿತ ಸಂಭವಿಸಿತ್ತು. ಧಾರ್ಮಿಕ ಸಭೆ ಮುಗಿದ ಅನಂತರ ಕಾಲ್ತುಳಿತ ಉಂಟಾಗಿತ್ತು.
VIDEO | Hathras stampede: CCTV footage shows self-styled preacher Baba Narayan Hari alias Saakar Vishwa Hari 'Bhole Baba' leaving from the village (Phulrai) with his private convoy just after the incident. pic.twitter.com/t3yoTzVa74
— Press Trust of India (@PTI_News) July 4, 2024
ಘಟನೆಯ ಬಳಿಕ ಸ್ವಯಂ ಘೋಷಿತ ಬೋಧಕ ಬಾಬಾ ನಾರಾಯಣ ಹರಿ ಅಲಿಯಾಸ್ ಸಾಕರ್ ವಿಶ್ವ ಹರಿ ‘ಭೋಲೆ ಬಾಬಾ’ ಅವರು ಬೆಂಗಾವಲು ಪಡೆಯೊಂದಿಗೆ ಗ್ರಾಮವನ್ನು ತೊರೆದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ‘ಸೇವಕ್’ ಎಂದೂ ಕರೆಯಲ್ಪಡುವ ಹಲವಾರು ಸ್ವಯಂಸೇವಕರು ಭೋಲೆ ಬಾಬಾ ಅವರ ಬೆಂಗಾವಲು ಪಡೆ ವಾಹನ ರಸ್ತೆ ದಾಟುವಾಗ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದರು.
ಈ ಕುರಿತು ಮಾಹಿತಿ ನೀಡಿರುವ ಪ್ರತ್ಯಕ್ಷದರ್ಶಿ ಗೋಪಾಲ್ ಕುಮಾರ್, ಬಾಬಾ ಅವರು ಬೈಪಾಸ್ ಮಾಡುವ ಮೂಲಕ ಗೊತ್ತುಪಡಿಸಿದ ಮಾರ್ಗದಿಂದ ಆಗಮಿಸಿ, ನಿರ್ಗಮಿಸಿದರು. ಅವರ ಸುತ್ತಲೂ ವಾಹನಗಳಿದ್ದವು ಮತ್ತು ಹೆದ್ದಾರಿಯ ಒಂದು ಭಾಗವು ಭಕ್ತರು ಮತ್ತು ವಾಹನಗಳಿಂದ ತುಂಬಿ ಬಹುತೇಕ ಜಾಮ್ ಆಗಿತ್ತು ಎಂದು ಹೇಳಿದರು.
ಬಾಬಾ ಅವರ ವಾಹನವು ಹೆದ್ದಾರಿಯನ್ನು ತಲುಪುತ್ತಿದ್ದಂತೆ ನೂರಾರು ಭಕ್ತರು ಅವರ ಪಾದದ ಅಡಿಯ ಮಣ್ಣು ಪಡೆಯಲು ಅವರ ಕಾರಿನ ಕಡೆಗೆ ಧಾವಿಸಿದರು. ಇದರಲ್ಲಿ ಕೆಲವರು ಬಿದ್ದರು. ಬೃಹತ್ ಜನಸಮೂಹವು ಹೆದ್ದಾರಿಯತ್ತ ಧಾವಿಸಿದ್ದು, ಬಿದ್ದವರಲ್ಲಿ ಕೆಲವರಿಗೆ ಮೇಲಕ್ಕೆ ಎಳಲೂ ಸಾಧ್ಯವಾಗಲಿಲ್ಲ. ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಅವರಲ್ಲಿ ಕೆಲವರು ಸತ್ತರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಆರು ಜನರು ಸೇರಿ ಎಲ್ಲಾ ಸೇವಾದಾರರನ್ನು ಬಂಧಿಸಿದ್ದರೆ ಎಂದು ತಿಳಿಸಿದರು.
ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಪೊಲೀಸರು ಬಂಧಿಸಿದ್ದಾರೆ. ಭೋಲೆ ಬಾಬಾ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳದ ಕಾರಣ ಎಫ್‌ಐಆರ್‌ನಲ್ಲಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಐಜಿ (ಅಲಿಗಢ ರೇಂಜ್) ಶಲಭ್ ಮಾಥುರ್ ತಿಳಿಸಿದ್ದಾರೆ.