ನವದೆಹಲಿ: ಕಂಪನಿಗಳ ಜಾಹೀರಾತುಗಳಲ್ಲಿ ತೋರುವ ಸೃಜನಶೀಲನತೆಯು ಭಾರೀ ಜನಾಕರ್ಷಣೆಗೆ ಒಳಗಾಗುತ್ತವೆ. ಈ ಹಿಂದೆ ಅನೇಕ ಬಾರಿ ಇಂಥ ಜಾಹೀರಾತುಗಳನ್ನು ಕಂಡಿದ್ದೇವೆ. ಈಗ ಡ್ಯೂರೆಕ್ಸ್(Durex) ಕಾಂಡೋಮ್ ಕಂಪನಿಯ ಹೊಸ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ(Stock Market Crash). ಈ ಅವಕಾಶವನ್ನು ಬಳಸಿಕೊಂಡಿರುವ ಡ್ಯೂರೆಕ್ಸ್, ವಿನೂತನ ಜಾಹೀರಾತು ಪ್ರದರ್ಶಿಸಿದೆ. ವಿಶೇಷವಾಗಿ ಮ್ಯೂಚುಯಲ್ ಫಂಡ್ಸ್ ಆಧಾರವಾಗಿಟ್ಟುಕೊಂಡು ಜಾಹೀರಾತು ರೂಪಿಸಲಾಗಿದೆ. ‘ಮ್ಯೂಚುಯಲ್ ಫಂಡ್(Mutual Fund)’ ಎಂಬ ಪದವು ಅದರೊಂದಿಗೆ ಬರುವ ಅಪಾಯಗಳ ಡಿಸ್‌ಕ್ಲೇಮರ್ ಅನ್ನು ತಕ್ಷಣವೇ ನಿಮಗೆ ನೆನಪಿಸುತ್ತದೆ ಅಲ್ಲವೇ? ಅದನ್ನೇ ಡ್ಯೂರೆಕ್ಸ್ ತನ್ನ ಜಾಹೀರಾತಿಗೆ ಬಳಸಿಕೊಂಡಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್ ರೀಲ್ ವಿಡಿಯೋ ವೈರಲ್ ಆಗಿದೆ(viral video).
ಸಾಮಾನ್ಯವಾಗಿ ಮ್ಯೂಚುಯಲ್ ಫಂಡ್ ಜಾಹೀರಾತಿನ ಕೊನೆಗೆ, ಈ ಮ್ಯೂಚುಯಲ್ ಫಂಡ್‌ಗಳು ಅಪಾಯಕ್ಕೆ ಒಳಪಟ್ಟಿವೆ ಎಂಬ ಡಿಸ್‍ಕ್ಲೇಮರ್ ಕೇಳಿರುತ್ತೀರಿ ಅಲ್ಲವೇ. ಅದೇ ಡಿಸ್‌ಕ್ಲೇಮರ್ ಅನ್ನು ಡ್ಯೂರೆಕ್ಸ್ ತನ್ನ ಜಾಹೀರಾತಿಗೆ ಬಳಸಿಕೊಂಡು ಅದನ್ನು ಫನ್ ಮಾಡಿದೆ. ಮ್ಯೂಚುಯಲ್ ಫನ್ (Mutual Fun) ಎಂದು ಕರೆಯುವ ಮೂಲಕ ಅದಕ್ಕೆ ಸೆಕ್ಸಿ ಟ್ವಿಸ್ಟ್ ನೀಡಿದೆ.
ಏನಿದೆ ಜಾಹೀರಾತಿನಲ್ಲಿ?
ಡ್ಯೂರೆಕ್ಸ್ ತನ್ನ ಕಾಂಡೋಮ್‌ಗಳನ್ನು ಇನ್‌ಸ್ಟಾಗ್ರಾಮ್ ರೀಲ್ ಮೂಲಕ ಮ್ಯೂಚುಯಲ್ ಫಂಡ್‌ಗಳ ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ. ಸುರಕ್ಷಿತ ಲೈಂಗಿಕತೆ(ಸೇಫ್ ಸೆಕ್ಸ್)ಗಾಗಿ ಕಾಂಡೋಮ್ ಬಳಸಿ ಎನ್ನುವ ಅರ್ಥದ ಸಾಲುಗಳನ್ನು ಮ್ಯೂಚುಯಲ್ ಫಂಡ್‌ಗಳ ಡಿಸ್‌ಕ್ಲೇಮರ್ ರೀತಿ ಹೇಳಲಾಗಿದೆ. ಅಂದರೆ, ನೀವು ಸುರಕ್ಷಿತ ಲೈಂಗಿಕತೆಯಲ್ಲಿ ಹೂಡಿಕೆ ಮಾಡುವಾಗ ಪರಸ್ಪರ ಮೋಜಿನ ಲೈಂಗಿಕತೆ ಯಾವುದೇ ಅಪಾಯಕ್ಕೆ ಒಳಪಡುವುದಿಲ್ಲ, ದಯವಿಟ್ಟು ನಿಮ್ಮ ವೆರಿಯಂಟ್ ಅನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಿ ಎಂಬ ಜಾಹೀರಾತು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: Viral Video: ರೈಲುಗಳಲ್ಲಿ ಬದಲಾದ ಟಾಯ್ಲೆಟ್, ಕೇಂದ್ರ ಸಚಿವರ ಟ್ವೀಟ್ ವೈರಲ್
ಈ ವಿಡಿಯೋದಲ್ಲಿ ಕರಡಿ ಮತ್ತು ಗೂಳಿ ಚಿತ್ರಗಳನ್ನು ಬಳಸಲಾಗಿದ್ದು, ಹಿನ್ನೆಲೆಯಲ್ಲಿ ಹೃದಯದ ಸಂಕೇತಗಳನ್ನು ತೋರಿಸಲಾಗಿದೆ. ಡ್ಯೂರೆಕ್ಸ್ ಜಾಹೀರಾತಿನಲ್ಲಿ ಕೇಳಿದ ಧ್ವನಿಯು ಪ್ರತಿ ಮ್ಯೂಚುಯಲ್ ಫಂಡ್ ಜಾಹೀರಾತಿನ ಕೊನೆಯಲ್ಲಿ ಬಳಸಲಾದ ಡಿಸ್‌ಕ್ಲೇಮರ್ ಧ್ವನಿಗೆ ಧ್ವನಿಗೆ ಹೊಂದಿಕೆಯಾಗುತ್ತದೆ.