ಮುಂಬೈ: ಷೇರು ಮಾರುಕಟ್ಟೆಗೆ ಶನಿವಾರ ಹಾಗೂ ಭಾನುವಾರ ರಜೆ ಇರುತ್ತದೆ. ಆದರೆ, ರಜಾ ದಿನವಾದ ಶನಿವಾರವೂ ಷೇರು ಮಾರುಕಟ್ಟೆಯಲ್ಲಿ (Stock Market) ವಿಶೇಷ ಟ್ರೇಡಿಂಗ್ ಸೆಷನ್ ನಡೆದಿದ್ದು, ಬಿಎಸ್‌ಇ ಸೆನ್ಸಕ್ಸ್ ಹಾಗೂ ನಿಫ್ಟಿಯು ಭರ್ಜರಿ ಪ್ರದರ್ಶನ ತೋರಿವೆ. ವಿಶೇಷ ಲೈವ್ ಟ್ರೇಡಿಂಗ್ ಸೆಷನ್‌ನ (Special Live Trading Session) ಎರಡು ಗಂಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ (BSE Sensex) 128.7 ಅಂಕ ಮೇಲೇರಿ ಒಟ್ಟು 73,879.58 ಅಂಕ ಗಳಿಸಿತು. ಇನ್ನು ನಿಫ್ಟಿ (Nifty) ಕೂಡ 58.15 ಪಾಯಿಂಟ್ಸ್ ಮೇಲೇರಿ ಒಟ್ಟು 22,396.90 ಪಾಯಿಂಟ್ಸ್ ಸಾಧನೆ ಮಾಡಿತು.
ಶನಿವಾರ ಬೆಳಗ್ಗೆ ಎರಡು ವಿಶೇಷ ಸೆಷನ್‌ಗಳಲ್ಲಿ ಲೈವ್ ಟ್ರೇಡಿಂಗ್ ನಡೆಯಿತು. ಬೆಳಗ್ಗೆ 9.15ರಿಂದ 10 ಗಂಟೆ ಹಾಗೂ ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ಅವಧಿಯಲ್ಲಿ ವಿಶೇಷ ಟ್ರೇಡಿಂಗ್ ನಡೆಯಿತು. ಯಾವುದೇ ತುರ್ತು ಸಂದರ್ಭಗಳಲ್ಲಿ ಷೇರು ಮಾರುಕಟ್ಟೆಯ ಸನ್ನದ್ಧತೆಯನ್ನು ಪರೀಕ್ಷಿಸುವ ದಿಸೆಯಲ್ಲಿ ವಿಶೇಷ ಲೈವ್ ಟ್ರೇಡಿಂಗ್ ನಡೆದಿದ್ದು, ಸಕಾರಾತ್ಮಕ ಬೆಳವಣಿಗೆಯು ಹೂಡಿಕೆದಾರರಲ್ಲಿ ಹೊಸ ಆಶಾಭಾವ ಮೂಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
NSE and BSE special live trading sessions with no Decay, traded Nifty Options Short Strangle but No decay. #nifty #zerodha #banknifty #OptionsTrading pic.twitter.com/uWgIF3ctv6
— Deedon Chaudhari (@deedon_01) March 2, 2024
ಪ್ರೈಮರಿ ಸೈಟ್‌ನಿಂದ (Primary Site) ಡಿಸಾಸ್ಟರ್ ರಿಕವರಿ ಸೈಟ್‌ಗೆ (Disaster Recovery) ಇಂಟ್ರಾಡೇ ಸ್ವಿಚ್ ಓವರ್ ಕೈಗೊಳ್ಳುವ ದಿಸೆಯಲ್ಲಿ ಶನಿವಾರವೂ ಎರಡು ಗಂಟೆ ವಿಶೇಷ ಟ್ರೇಡಿಂಗ್ ಇರಲಿದೆ ಎಂಬುದಾಗಿ ಮೊದಲೇ ಸೂಚಿಸಲಾಗಿತ್ತು. ಅದರಂತೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ” ಎಂದು ಬಿಎಸ್‌ಇ ಹಾಗೂ ಎನ್‌ಎಸ್‌ಇ ಪ್ರತ್ಯೇಕ ಪ್ರಕಟಣೆಗಳ ಮೂಲಕ ಮಾಹಿತಿ ನೀಡಿವೆ. ಇದರೊಂದಿಗೆ ಶನಿವಾರ ಎರಡೇ ಗಂಟೆಗಳಲ್ಲಿ ಎನ್‌ಎಸ್‌ಇ ಹಾಗೂ ಬಿಎಸ್‌ಇ ದಾಖಲೆ ಬರೆದಿವೆ.
ಇದನ್ನೂ ಓದಿ: Money plus : ಸ್ಟಾಕ್ ಮಾರ್ಕೆಟ್‌ನಲ್ಲಿ ದುಡ್ಡು ಕಳೆದುಕೊಳ್ಳದೆ ಲಾಭ ಮಾಡೋದು ಹೇಗೆ?
ಷೇರು ಪೇಟೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಏಷ್ಯನ್ ಪೇಂಟ್ಸ್, ಐಟಿಸಿ, ವಿಪ್ರೋ ಲಾರ್ಸೆನ್ & ಟರ್ಬೋ ಕಂಪನಿಗಳು ಉತ್ತಮ ಲಾಭ ಗಳಿಸಿದವು. ಇನ್ನು ಮಹೀಂದ್ರಾ & ಮಹೀಂದ್ರಾ, ಎನ್‌ಟಿಪಿಸಿ, ಕೊಟಕ್ ಮಹೀಂದ್ರಾ ಬ್ಯಾಮಕ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿದವು. ಭಾರತದ ಜಿಡಿಪಿ ಏರಿಕೆಯಾಗಲಿದೆ ಎಂಬ ವರದಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಕಾಣಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ