ಗಾಂಧಿನಗರ: ಗುಜರಾತ್‌ನ ಜುನಾಗಢದಲ್ಲಿ ಅಕ್ರಮವಾಗಿ ಮಸೀದಿ (Junagadh Violence:) ನಿರ್ಮಿಸಿದ ಕುರಿತು ನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಕ್ಕೆ ರಾತ್ರೋರಾತ್ರಿ ಗಲಾಟೆ ನಡೆದಿದೆ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಮುಸ್ಲಿಮರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ಕೆಲ ವಾಹನಗಳಿಗೂ ಬೆಂಕಿ ಹಚ್ಚಲಾಗಿದ್ದು, ಏಕಾಏಕಿ ದಾಳಿ ಮಾಡಿದ ಕಾರಣ ಹಲವು ಪೊಲೀಸರಿಗೆ ಗಾಯಗಳಾಗಿವೆ. ಹಾಗೆಯೇ, ಗಲಾಟೆಯ ವೇಳೆ ಒಬ್ಬ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಜುನಾಗಢದ ಮಾಜೇವಾಡಿ ಗೇಟ್ ಬಳಿ ಸರ್ಕಾರದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಅಕ್ರಮವಾಗಿ ಮಸೀದಿ ನಿರ್ಮಾಣದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಐದು ದಿನದಲ್ಲಿ ಮಸೀದಿ ನಿರ್ಮಾಣದ ಕುರಿತು ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ. ಒಂದೆಡೆ ಮಸೀದಿ ಆಡಳಿತ ಮಂಡಳಿಯು ಪೊಲೀಸರಿಗೆ ಸಮರ್ಪಕವಾಗಿ ದಾಖಲೆ ನೀಡಿಲ್ಲ. ಮತ್ತೊಂದೆಡೆ, ನೂರಾರು ಮುಸ್ಲಿಮರು ಶುಕ್ರವಾರ ರಾತ್ರಿ ಏಕಾಏಕಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದಾಗಿ ಜುನಾಗಢದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಕಲ್ಲು ತೂರಾಟದ ವಿಡಿಯೊ ಇಲ್ಲಿದೆ
#WATCH | Stones pelted, cops injured after a mob protest against the anti-encroachment drive in Gujarat's Junagadh last night
— ANI (@ANI) June 17, 2023
(Note: Abusive language) pic.twitter.com/8wRw0YgO3z
ಸಕ್ರಮವಾಗಿ ಮಸೀದಿ ನಿರ್ಮಾಣದ ಕುರಿತು ಆಡಳಿತ ಮಂಡಳಿಯು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಮಸೀದಿಯನ್ನು ಕೆಡವಲು ತೀರ್ಮಾನಿಸಲಾಗಿದೆ. ಇದನ್ನು ವಿರೋಧಿಸಿ ನೂರಾರು ಮುಸ್ಲಿಮರು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಗಲಾಟೆಯಲ್ಲಿ ಒಬ್ಬ ಮೃತಪಟ್ಟರೆ, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಆದಾಗ್ಯೂ, ಪೊಲೀಸರು 174 ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಕೇಸ್; ಮಸೀದಿ ಸಮಿತಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಹಿಂದು ಅರ್ಜಿದಾರರು ನಿರಾಳ
ಪೊಲೀಸರು ಹೇಳುವುದೇನು?
“ಐದು ದಿನಗಳ ಹಿಂದೆಯೇ ಮಸೀದಿ ನಿರ್ಮಾಣದ ಕುರಿತು ದಾಖಲೆ ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ, ನೋಟಿಸ್‌ಗೆ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಮಸೀದಿ ಕೆಡವಲು ಮುಂದಾದಾಗ ನೂರಾರು ಜನ ಪೊಲೀಸರು ಹಾಗೂ ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಇದೇ ವೇಳೆ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟದ ವೇಳೆ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ” ಎಂದು ಜುನಾಗಢ ಎಸ್‌ಪಿ ರವಿತೇಜ ವಾಸಮ್‌ಶೆಟ್ಟಿ ಮಾಹಿತಿ ನೀಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ