ಹೈದರಾಬಾದ್: ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವ, ಸರ್ಕಾರದ ಯೋಜನೆಗಳು, ಮೂಲ ಸೌಕರ್ಯಗಳು, ರೈಲು, ಬಸ್‌ಗಳಿಗೆ ಹಾನಿ ಮಾಡುವ ದೇಶ ಇದ್ದರೆ ಅದು ಭಾರತ ಮಾತ್ರ. ಇದಕ್ಕೆ ನಿದರ್ಶನ ಎಂಬಂತೆ ಆಂಧ್ರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಬೇಕಿದ್ದ ವಂದೇ ಭಾರತ್ ರೈಲಿಗೆ (Vande Bharat Train) ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.
ವಿಶಾಖಪಟ್ಟಣಂನ ಕಂಚಾರಪಲೇಂನಲ್ಲಿ ರೈಲು ಸಿಬ್ಬಂದಿಯು ವಂದೇ ಭಾರತ್ ರೈಲಿನ ನಿರ್ವಹಣೆ ಪರಿಶೀಲಿಸುವಾಗ ಒಂದಷ್ಟು ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಇದರಿಂದ ಬೋಗಿಯ ಎರಡು ಕಿಟಕಿಗಳ ಗಾಜುಗಳು ಪುಡಿ ಪುಡಿಯಾಗಿವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ” ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಅನೂಪ್ ಕುಮಾರ್ ಸತ್ಪತಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಕೂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿ ಹಲವು ರೈಲುಗಳಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದರು.
ಕೆಲ ದಿನಗಳ ಹಿಂದಷ್ಟೇ ಹೌರಾ-ನ್ಯೂ ಜಲಪೈಗುರಿ ಸೆಮಿ ಹೈ ಸ್ಪೀಡ್ ರೈಲಿಗೆ ಕೆಲವು ದುಷ್ಕರ್ಮಿಗಳು ಕಲ್ಲೆಸೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಿ ಎರಡೇ ದಿನದಲ್ಲಿ ಇಂತಹ ಕೃತ್ಯ ಎಸಗಿದ್ದರು. ಈಗ ಮತ್ತೊಂದು ರೈಲಿಗೆ ಹಾನಿ ಮಾಡಲಾಗಿದೆ.
ಇದನ್ನೂ ಓದಿ | Vande Bharat Express | ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; ಹೊಸ ಟ್ರೇನ್ ಗಾಜು ಪುಡಿಪುಡಿ