Site icon Vistara News

Viral News: ವೃದ್ಧನನ್ನು ಎಳೆದುಕೊಂಡು ಹೋದ ಉದ್ರಿಕ್ತ ಬಿಡಾಡಿ ದನ! ಪಾಪ… ಆ ಮುದುಕ ಸತ್ತೇ ಹೋದರು

Stray Cow Drags older Man and he dies

ಮೊಹಾಲಿ, ಪಂಜಾಬ್: ಬಿಡಾಡಿ ದನವೊಂದು (Stray Cow) ವೃದ್ಧ ವ್ಯಕ್ತಿಯನ್ನು ದೂರದವರೆಗೆ ಎಳೆದುಕೊಂಡ ಹೋದ ಪರಿಣಾಮ, ಆ ವ್ಯಕ್ತಿ ಮೃತಪಟ್ಟಿರುವ(older Man dies) ಘಟನೆ ಪಂಜಾಬ್‌ನ (Punjab State) ಮೊಹಾಲಿಯಲ್ಲಿ (Mohali city) ನಡೆದಿದೆ. ಈ ಕುರಿತಾದ ಸಿಸಿಟಿವಿ (CCTV) ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿವೆ. ಮೃತ ವೃದ್ಧನನ್ನು ಸರೂಪ್ ಸಿಂಗ್ ಎಂದು ಗುರುತಿಸಲಾಗಿದೆ.

ಈ ದುರದೃಷ್ಟಕರ ಘಟನೆಯಲ್ಲಿ ಪಂಜಾಬ್‌ನ ಮೊಹಾಲಿಯ 83 ವರ್ಷದ ಸರೂಪ್ ಸಿಂಗ್ ಅವರನ್ನು ಸುಮಾರು 100 ಮೀಟರ್‌ಗಳವರೆಗೆ ಬಿಡಾಡಿ ದನವೊಂದು ಎಳೆದುಕೊಂಡು ಹೋದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಹನಗಳ ದಟ್ಟಣೆ ರಸ್ತೆಯ ಮಧ್ಯೆಯೇ ಬಿಡಾಡಿ ದನ ಆತನನ್ನು ಎಳೆದುಕೊಂಡ ಹೋದ್ದರಿಂದ ಮಾರಣಾಂತಿಕ ಪರಿಸ್ಥಿತಿ ನಿರ್ಮಾಣವಾಯಿತು. ಉದ್ರಿಕ್ತವಾಗಿ ಓಡುತ್ತಿದ್ದ ದನದಿಂದಾಗಿ ಸಿಂಗ್ ಅವರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದರು. ಅಡ್ಡಾದಿಡ್ಡಿಯಾಗಿ ಉದ್ರಿಕ್ತಗೊಂಡ ಬಿಡಾಡಿ ದನವೊಂದು ಸಿಂಗ್ ಅವರ ಮನೆಗೆ ನುಗ್ಗಿತ್ತು. ಅದನ್ನು ನಿಯಂತ್ರಿಸಲು ಹೋದ ಸಿಂಗ್ ಅವರನ್ನು ಎಳೆದುಕೊಂಡ ಹೋದ ಪರಿಣಾಮ ಈ ದುರ್ಘಟನೆ ನಡೆದಿದೆ.

25 ವರ್ಷದ ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು!

ಹೆಬ್ಬಾವುಗಳು (Python Snake) ಆಡು, ಕೋಳಿ, ಕುರಿಗಳನ್ನು ಒಂದೇ ಏಟಿಗೆ ನುಂಗಿ ನೀರು ಕುಡಿಯುವುದು ಗೊತ್ತು. ಆದರೆ, ಮನುಷ್ಯನೊಬ್ಬನನ್ನು ಹೆಬ್ಬಾವು (25 Year old Former) ಒಂದೇ ಏಟಿಗೆ ನುಂಗಿರುವುದು ಬಹುಶಃ ಅಪರೂಪ. ಈ ರೀತಿಯ ಘಟನೆ ವರ್ಷಗಳ ಹಿಂದೆ ವರದಿಯಾಗಿತ್ತು. ಈ ಸುದ್ದಿಯೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ(Viral News). ವರದಿಗಳ ಪ್ರಕಾರ, 25 ವರ್ಷದ ಇಂಡೋನೇಷ್ಯನ್ ರೈತ ಅಕ್ಬರ್ ಸಲುಬಿರೋ ಎಂಬಾತ 2017ರಲ್ಲಿ ಕಾಣೆಯಾಗಿದ್ದ. ಬಳಿಕ ಆತ, ಇಂಡೋನೇಷ್ಯಾದ ವೆಸ್ಟ್ ಸುಲವೇಶಿಯಲ್ಲಿ (Indonesia’s West Sulawesi) 23 ಅಡಿಯ ಹೆಬ್ಬಾವು ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದ!

ಈ ವೈರಲ್ ಸುದ್ದಿಯನ್ನೂ ಓದಿ: Viral Video: ಕಪ್ಪು ವರ್ಣದ ಗರ್ಭಿಣಿ ಯುವತಿಗೆ ಗುಂಡು ಹೊಡೆದ ಕೊಂದ ಅಮೆರಿಕ ಪೊಲೀಸ್! ಆಕೆಯ ತಪ್ಪಾದರೂ ಏನು?

ರೈತ ಸುಲವೇಶಿ ದ್ವೀಪದಲ್ಲಿರುವ ತನ್ನ ಹೊಲಕ್ಕೆ ಹೋಗಿದ್ದ. ಆಗ ಆತ ಕಣ್ಮರೆಯಾಗಿದ್ದ. 24 ಗಂಟೆಗಳ ಕಾಲ ಹುಡುಕಿದ ಬಳಿಕವೂ ಆತ ಪತ್ತೆಯಾಗದ ಕಾರಣ ಹಳ್ಳಿಗರು ಪೊಲೀಸರಿಗೆ ದೂರು ನೀಡಿದ್ದರು. ಅಕ್ಬರ್‌ನನ್ನು ಹುಡುಕಲು ಪೊಲೀಸರು ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅಕ್ಬರ್‌ನ ಗೆಳೆಯ, ಕುಟುಂಬದ ಪಾಮ್ ತೋಟದ ಪಕ್ಕದಲ್ಲಿ ಹೆಬ್ಬಾವೊಂದನ್ನು ಪತ್ತೆ ಹಚ್ಚಿದರು. ಈ ಹೆಬ್ಬಾವು ಸಾಮಾನ್ಯಕ್ಕಿಂತಲೂ ಗಾತ್ರದಲ್ಲಿ ತುಸು ದೊಡ್ಡದಾಗಿತ್ತು. ಆಗ ಅನುಮಾನ ಬಂದು ಹೆಬ್ಬಾವು ಹೊಟ್ಟೆಯನ್ನು ಬಗೆದಾಗ ಅದರ ಒಳಗಡೆ ಅಕ್ಬರ್ ದೇಹ ಕಂಡು ಬಂತು. ಹಾವಿನ ದೇಹದಿಂದ ಅಕ್ಬರ್‌ನ ದೇಹವನ್ನು ಹೊರ ತೆಗೆದು ಫೋಟೋ ತೆಗೆದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದವು.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version