ಚೆನ್ನೈ, ತಮಿಳುನಾಡು: ಕ್ರಿಶ್ಚಿಯನ್ (Christianity) ಧರ್ಮದ ವಿರುದ್ಧ ಅವಹೇಳನಕಾರಿ ಟ್ವೀಟ್ (Tweet) ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡಿನ ಪೊಲೀಸರು(Tamil Nadu Police), ಕನ್ಯಾಕುಮಾರಿಯಲ್ಲಿ (Kanyakumari City) ಸ್ಟಂಟ್ ಕೊರಿಯೋಗ್ರಾಫರ್ ಕನಲ್ ಕಣ್ಣನ್ ಅವರನ್ನು ಬಂಧಿಸಿದ್ದಾರೆ(Kanal Kannan Arrested).
ಡಿಎಂಕೆ ಐಟಿ ವಿಂಗ್‌ನ ಉಪ ಸಂಘಟಕ ಆಸ್ಟಿನ್ ಬೆನೆಟ್ ಅವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ಜುಲೈ 1 ರಂದು ಹಿಂದೂ ಪರ ಸಂಘಟನೆಯಾದ ಹಿಂದೂ ಮುನ್ನಾನಿ, ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪಾದ್ರಿಯೊಬ್ಬರು ಹುಡುಗಿಯೊಂದಿಗೆ ನೃತ್ಯ ಮಾಡುತ್ತಿರುವ ತಿರುಚಿದ ವಿಡಿಯೋವೊಂದನ್ನು ಕಣ್ಣನ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆಸ್ಟಿನ್ ಬೆನೆಟ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕ್ರಿಶ್ಚಿಯನ್ ಧರ್ಮವನ್ನು ಅವಮಾನಗೊಳಿಸುವ ಟೀಕೆಯನ್ನು ಮಾಡಿದ್ದಾರೆಂದು ಆರೋಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಅರೆಸ್ಟ್
ಸೈಬರ್ ಕ್ರೈಂ ಪೊಲೀಸರು ಕಣ್ಣನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸೋಮವಾರ (ಜುಲೈ 10) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅವರು ಹಾಜರಾದ್ದರಿಂದ ಸಂಜೆ 7 ಗಂಟೆಗೆ ಬಂಧಿಸಲಾಯಿತು. ಕನಲ್ ಕಣ್ಣನ್ ಅವರು ಈ ಹಿಂದೆಯೇ ಇಂಥದ್ದೇ ಕಾರಣಕ್ಕೆ ಬಂಧಿತರಾಗಿದ್ದರು. ಕಳೆದ ವರ್ಷ ಕಣ್ಣನ್ ಅವರು ವಿಚಾರವಾದಿ ಪೆರಿಯಾರ್ ಇವಿ ರಾಮಸ್ವಾಮಿ ಅವರ ವಿರುದ್ಧ ಅವಮಾನಕಾರಿ ಟೀಕೆ ಮಾಡಿದ್ದರು. ದ್ರಾವಿಡಿಯನ್ ಸಂಘ ನೀಡಿದ ದೂರಿನ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಸ್ಟಂಟ್ ಕೋರಿಯೋಗ್ರಾಫರ್ ಆಗಿ ಕಣ್ಣನ್ ತಮಿಳು, ಮಲಯಾಳಂ, ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರರಂಗಳಲ್ಲಿ ಕೆಲಸ ಮಾಡಿದ್ದಾರೆ. ಈವರೆಗೆ ಅವರಿಗೆ 16 ಪ್ರಶಸ್ತಿಗಳು ಬಂದಿವೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.