Site icon Vistara News

Nuh Violence: ಹರಿಯಾಣ ಹಿಂಸೆ; ಸುದರ್ಶನ್‌ ನ್ಯೂಸ್‌ ಸಂಪಾದಕ ಮುಕೇಶ್‌ ಕುಮಾರ್‌ ಬಂಧನ, ವಿದೇಶಿ ನಂಟೇನು?

Sudarshan News Channel Editor Mukesh Kumar

Sudarshan News editor Mukesh Kumar arrested by Gurguram Police over a Tweet on Nuh violence

ಚಂಡೀಗಢ: ಹರಿಯಾಣದ ನುಹ್‌ ಜಿಲ್ಲೆಯಲ್ಲಿ ಜುಲೈ 31ರಂದು ನಡೆದ ಹಿಂಸಾಚಾರ (Nuh Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮ ಪೊಲೀಸರು (Gurugram Police) ಸುದರ್ಶನ್‌ ನ್ಯೂಸ್‌ ಚಾನೆಲ್‌ ರೆಸಿಡೆಂಟ್ ಎಡಿಟರ್‌ (ಸ್ಥಾನಿಕ ಸಂಪಾದಕ) ಮುಕೇಶ್‌ ಕುಮಾರ್‌ (Mukesh Kumar) ಅವರನ್ನು ಬಂಧಿಸಿದ್ದಾರೆ. ನುಹ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಕಲಿ ಮಾಹಿತಿ ಹರಡಿದ, ಆ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮುಕೇಶ್‌ ಕುಮಾರ್‌ ಬಂಧನವಾಗುತ್ತಲೇ ನ್ಯೂಸ್‌ ಚಾನೆಲ್‌ ಆಕ್ರೋಶ ವ್ಯಕ್ತಪಡಿಸಿದೆ. “ಮುಕೇಶ್‌ ಕುಮಾರ್‌ ಅವರನ್ನು ಕೆಲವು ಗೂಂಡಾಗಳು ಅಪಹರಣ ಮಾಡಿದ್ದಾರೆ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಖಂಡಿಸಿದೆ. ಇನ್ನು ಬಂಧನ ಕುರಿತು ಮಾಹಿತಿ ನೀಡಿರುವ ಪೊಲೀಸರು, “ಮುಕೇಶ್‌ ಕುಮಾರ್‌ ಅವರನ್ನು ಈಸ್ಟ್‌ ಪೊಲೀಸ್‌ ಸ್ಟೇಷನ್‌ನ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಬಂಧನ ಕುರಿತು ಪೊಲೀಸರಿಂದ ಮಾಹಿತಿ

ಮುಕೇಶ್‌ ವಿರುದ್ಧದ ಆರೋಪವೇನು?

ನುಹ್‌ ಹಿಂಸಾಚಾರದ ವೇಳೆ ಮುಕೇಶ್‌ ಕುಮಾರ್‌ ಟ್ವೀಟ್‌ (ಈಗ X) ಮಾಡಿರುವ ಅಂಶವು ಪೊಲೀಸರು ಅವರನ್ನು ಬಂಧಿಸಲು ಕಾರಣವಾಗಿದೆ. “ಗುರುಗ್ರಾಮ ಪೊಲೀಸ್‌ ಆಯುಕ್ತರಿಗೆ ವಿದೇಶಿ ಮಾಧ್ಯಮ ಸಂಸ್ಥೆಯಿಂದ ಕರೆ ಬಂದಿದ್ದು, ಕೋಮುಗಲಭೆ ಪ್ರಕರಣದಲ್ಲಿ ಹಿಂದುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ ಎಂಬುದಾಗಿ ಮುಕೇಶ್‌ ಕುಮಾರ್‌ ಟ್ವೀಟ್‌ ಮಾಡಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

ಸುದರ್ಶನ್‌ ನ್ಯೂಸ್‌ ಖಂಡನೆ

ಇದನ್ನೂ ಓದಿ: Nuh Violence: ಕೋಮುಗಲಭೆ, ಹಿಂಸೆಗೆ ಪ್ರಚೋದನೆ; ಮುಸ್ಲಿಮರನ್ನು ಬಹಿಷ್ಕರಿಸಿದ 14 ಗ್ರಾಮಗಳು

ಜುಲೈ 31ರಂದು ಹಿಂದುಗಳು ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಭುಗಿಲೆದ್ದ ಹಿಂಸಾಚಾರವು ಬೃಹತ್‌ ಗಲಭೆಯಾಗಿ ಮಾರ್ಪಟ್ಟು ಬೇರೆ ಜಿಲ್ಲೆಗಳಲ್ಲೂ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ಭಾಗಿಯಾದ 300ಕ್ಕೂ ಅಧಿಕ ಜನರ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ನೆಲಸಮಗೊಳಿಸಲಾಗಿದೆ. ಹಾಗೆಯೇ, 25 ರೋಹಿಂಗ್ಯಾ ಮುಸ್ಲಿಮರನ್ನೂ ಬಂಧಿಸಲಾಗಿದೆ. ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version