Site icon Vistara News

Sudha Murthy: ಸುಧಾ ಮೂರ್ತಿ ನಾನ್-‌ ವೆ‌ಜ್‌ ಹೋಟೆಲ್‌ಗೆ ಹೋಗಲ್ಲ, ಯಾಕಂದ್ರೆ… ಟ್ರೋಲ್ ಆದ ಹೇಳಿಕೆ

sudha murthy cooking

ಹೊಸದಿಲ್ಲಿ: ಲೇಖಕಿ ಮತ್ತು ಇನ್ಫೋಸಿಸ್ (Infosys) ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಅವರು ಇತ್ತೀಚೆಗೆ ತಮ್ಮ ಒಂದು ಸಂದರ್ಶನದಲ್ಲಿ ತಮ್ಮ ಆಹಾರ ಸೇವನೆ ಅಭ್ಯಾಸದ ಕುರಿತು ನೀಡಿದ ಒಂದು ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ (social media) ಹವಾ (viral news) ಎಬ್ಬಿಸಿದೆ. ಪರ- ವಿರೋಧದ ಟ್ರೋಲ್‌ಗಳು ಆರಂಭವಾಗಿವೆ.

ʼಖಾನೆ ಮೇ ಕ್ಯಾ ಹೈ’ ಎಂಬ ಯೂಟ್ಯೂಬ್ ಸಂದರ್ಶನದಲ್ಲಿ ಅವರು ತಮ್ಮ ಆಹಾರ ಮತ್ತು ರೆಸ್ಟೋರೆಂಟ್ ಆಹಾರದ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ತಾವು ಶುದ್ಧ ಸಸ್ಯಾಹಾರಿ. ಸಾಮಾನ್ಯವಾಗಿ ಪ್ರಯಾಣಿಸುವಾಗ ನನ್ನ ಆಹಾರವನ್ನು ನಾನೇ ಒಯ್ಯುತ್ತೇನೆ. ಯಾಕೆಂದರೆ ರೆಸ್ಟುರಾಗಳಲ್ಲಿ ಸಸ್ಯಾಹಾರಿ (vegetarian) ಮತ್ತು ಮಾಂಸಾಹಾರಿ (non vegetarian) ಆಹಾರಕ್ಕೆ ಒಂದೇ ಚಮಚವನ್ನು ಬಳಸಿದರೆ ಎಂಬ ಆತಂಕ ಎಂದು ಅವರು ಹೇಳಿದ್ದರು.

“ನಾನು ನನ್ನ ಕೆಲಸದ ವಿಚಾರದಲ್ಲಿ ರಿಸ್ಕ್‌ ತೆಗೆದುಕೊಳ್ಳುತ್ತೇನೆ. ಆದರೆ ಆಹಾರದ ವಿಚಾರದಲ್ಲಿ ಅಲ್ಲ. ನಾನು ಶುದ್ಧ ಸಸ್ಯಾಹಾರಿ, ಮೊಟ್ಟೆ ಅಥವಾ ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ಒಂದೇ ಚಮಚವನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಎರಡಕ್ಕೂ ಬಳಸಲಾಗುತ್ತದೆ. ಇದು ನನ್ನ ಮನಸ್ಸಿಗೆ ಹಿಡಿಸುವುದಿಲ್ಲ. ಆದ್ದರಿಂದ ನಾನು ಹೊರಗೆ ಹೋದಾಗ, ವೆಜ್ ರೆಸ್ಟೋರೆಂಟ್‌ಗಳನ್ನು ಮಾತ್ರ ಹುಡುಕುತ್ತೇನೆ. ಅಥವಾ, ತಿನ್ನಬಹುದಾದ ಪದಾರ್ಥಗಳನ್ನು ಚೀಲದಲ್ಲಿ ತೆಗೆದುಕೊಂಡು ಹೋಗುತ್ತೇನೆ. ರೆಡಿ ಟು ಈಟ್‌ ಸಾಮಗ್ರಿಗಳನ್ನು ಸಾಮಾನ್ಯವಾಗಿ ಒಯ್ಯುತ್ತೇನೆ. ಉದಾಹರಣೆಗೆ ಅವಲಕ್ಕಿ, ಕೇವಲ ನೀರಿನಲ್ಲಿ ಬಿಸಿ ಮಾಡಿಕೊಂಡು ಸೇವಿಸಬಹುದುʼʼ ಎಂದು ಸುಧಾ ಮೂರ್ತಿ ಸಂದರ್ಶನದಲ್ಲಿ ಹೇಳಿದ್ದರು.

ನನಗೆ ಕೇವಲ ಪ್ರಾಥಮಿಕ ಅಡುಗೆ ಮಾತ್ರ ಗೊತ್ತು. ಪರೋಟಾ, ದಾಲ್‌, ಸಬ್ಜಿ, ಅನ್ನ, ಸಾಂಬಾರ್‌ ಮಾಡಬಲ್ಲೆ. ನಾನು ಯಾವಾಗಲೂ ಹೊರಗೆ ಉದ್ಯೋಗ ಮಾಡುತ್ತಿದ್ದೆ. ಹೀಗಾಗಿ ವಿಶೇಷ ಅಡುಗೆಗಳನ್ನು ಕಲಿತಿಲ್ಲ. ನಾವು ಹೋಟೆಲ್‌ಗೆ ಹೋಗುವುದಿಲ್ಲ ಎಂದ ಸುಧಾ ಮೂರ್ತಿ, ಹೀಗಾಗಿ ನಾರಾಯಣ ಮೂರ್ತಿ ತಮ್ಮ ದೇಹತೂಕ ಕಾಪಾಡಿಕೊಂಡಿದ್ದಾರೆ ಎಂದು ಚಟಾಕಿ ಹಾರಿಸಿದರು.

ಸುಧಾ ಮೂರ್ತಿ ವಿದೇಶಕ್ಕೆ ಹೋದಾಗಲೂ ತಮ್ಮ ಜೊತೆಗೆ ಸಿದ್ಧಪಡಿಸಿದ ಆಹಾರ, ಒಂದು ಕುಕ್ಕರ್‌ ಒಯ್ಯುತ್ತಾರೆ. ತಮ್ಮ ಆಹಾರ ತಾವೇ ಮಾಡಿಕೊಳ್ಳುತ್ತಾರೆ. ಸುಮಾರು 25-30 ಚಪಾತಿ, ಕರಿದ ಸುಜಿ ಜತೆಗಿರುತ್ತದಂತೆ.

ಸುಧಾ ಅವರ ಈ ಮಾತುಗಳನ್ನು ಬಹು ಮಂದಿ ಮೆಚ್ಚಿದ್ದಾರೆ. ಇನ್ನು ಅನೇಕ ಮಂದಿ ಟ್ರೋಲ್‌ ಮಾಡಿದ್ದಾರೆ. ಕೆಲವರು ಅವರ ಅಳಿಯ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಮಾಂಸಾಹಾರ ತುಂಬಿದ ಪ್ಲೇಟ್‌ಗಳನ್ನು ಹಿಡಿದ ಫೋಟೋಗಳನ್ನು ಟ್ಯಾಗ್‌ ಮಾಡಿ, ʼಸುಧಾ ಮೂರ್ತಿ ತಮ್ಮ ಅಳಿಯನ ಮನೆಯಲ್ಲೂ ಪ್ರತ್ಯೇಕ ಚಮಚ ಇಟ್ಟುಕೊಂಡಿದ್ದಾರಾ?ʼ ಎಂದು ಪ್ರಶ್ನಿಸಿದ್ದಾರೆ. ʼʼಸುಧಾ ಮೂರ್ತಿ ಮುಸ್ಲಿಮರ ಮನೆ ಅಥವಾ ಹೋಟೆಲ್‌ನಲ್ಲಿ ೇನೂ ಸೇವಿಸುವುದಿಲ್ವಾ?ʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ʼʼಸುಧಾ ಮೂರ್ತಿ ಕುರಿತ ʼಲಿಬರಲ್‌ʼಗಳ ದ್ವೇಷ ಅವರ ಟ್ವೀಟ್‌ಗಳಲ್ಲಿ ವ್ಯಕ್ತವಾಗಿದೆ. ಅವರು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು, ಸುಧಾ ಮೂರ್ತಿಯವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ ಹಾಗಿದ್ದರೆ?ʼʼ ಎಂದು ಮತ್ತೊಬ್ಬರು ಈ ʼಲಿಬರಲ್‌ʼಗಳನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: Viral Video : ಕರೀನಾ ಕಪೂರ್‌ ವರ್ತನೆ ಬಗ್ಗೆ ನಾರಾಯಣಮೂರ್ತಿ ಗರಂ; ನಟಿ ಪರ ನಿಂತ ಸುಧಾ ಮೂರ್ತಿ!

Exit mobile version