Site icon Vistara News

Jacqueline Boyfriend | ದಿಲ್ಲಿ ಸಚಿವ ಜೈನ್‌ಗೆ ಜಾಕ್ವೆಲಿನ್ ಬಾಯ್‌ಫ್ರೆಂಡ್‌ನಿಂದ 10 ಕೋಟಿ ರೂ. ಪ್ರೊಟೆಕ್ಷನ್ ಮನಿ!

Sukesh

ನವದೆಹಲಿ: ಭ್ರಷ್ಟಾಚಾರದಲ್ಲಿ ಜೈಲು ಕಂಬಿ ಎಣಿಸುತ್ತಿರುವ ಆಪ್‌ ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ಪ್ರೊಟೆಕ್ಷನ್ ಮನಿ’ಯಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಾಯ್‌ಫ್ರೆಂಡ್ ಸುಕೇಶ್ (Jacqueline Boyfriend) 10 ಕೋಟಿ ರೂಪಾಯಿ ನೀಡಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಬಗ್ಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸೆಕ್ಸೆನಾ ಅವರಿಗೆ ಪತ್ರ ಬರೆದು ಸ್ವತಃ ಸುಕೇಶ್ ಮಾಹಿತಿ ನೀಡಿದ್ದಾನೆ. ಏತನ್ಮಧ್ಯೆ, ಈ ಬಗ್ಗೆ ತಿರುಗೇಟು ನೀಡಿರುವ ದಿಲ್ಲಿ ಸಿಎಂ ಅರಿವಿಂದ್ ಕೇಜ್ರಿವಾಲ್ ಅವರು, ಬಿಜೆಪಿಯು ವಂಚಕನ ಮಾತು ನಂಬುವ ಸ್ಥಿತಿಗೆ ಬಂದು ತಲುಪಿದೆ. ಇದು ಗಮನವನ್ನು ಬೇರೇಡೆಗೆ ಸೆಳೆಯುವ ತಂತ್ರ ಎಂದು ಅವರು ಆರೋಪಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ಈ ಪತ್ರ ಬರೆದಿದ್ದು, ಜೈಲುಪಾಲಾಗಿರುವ ಸತ್ಯೇಂದ್ರ ಜೈನ್ ಅವರನ್ನು 2005ರಿಂದ ಬಲ್ಲೆ. ಆಪ್ ಪಕ್ಷಕ್ಕೆ ಒಟ್ಟಾರೆ 50 ಕೋಟಿ ರೂಪಾಯಿ ನೀಡಲಾಗಿದೆ. ಇದಕ್ಕೆ ಬದಲಾಗಿ ದಕ್ಷಿಣ ಭಾರತದಲ್ಲಿ ಪಕ್ಷದಲ್ಲಿ ಉತ್ತಮ ಹುದ್ದೆ ನೀಡುವ ವಾಗ್ದಾನ ನೀಡಲಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸುಕೇಶ್ ಪತ್ರದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶಾನಲಯವು ತನಿಖೆಯನ್ನು ಕೈಗೊಳ್ಳುವ ಸಾಧ್ಯತೆ ಇದೆ.

2007ರಲ್ಲಿ ನನ್ನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಆಗ, ಜೈಲು ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರು ಅನೇಕ ಬಾರಿ ನನ್ನನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ. 2019ರಲ್ಲೂ ಸತ್ಯೇಂದ್ರ ಜೈನ್ ಅವರು ನನ್ನನ್ನು ಭೇಟಿಯಾದರು. ಅವರ ಕಾರ್ಯದರ್ಶಿ ನನಗೆ ಪ್ರೋಟಕ್ಷನ್ ಮನಿಯಾಗಿ ಪ್ರತಿ ತಿಂಗಳು 2 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟರು. ಪ್ರೊಟೆಕ್ಷನ್ ಜತೆಗೆ ಜೈಲಿನೊಳಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ವಾಗ್ದಾನ ಕೂಡ ಮಾಡಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Jacqueline Fernandez | ರಕ್ಕಮ್ಮ ಜಾಕ್ವೆಲಿನ್‌ಗೆ ಸುಕೇಶ್‌ ಬಗ್ಗೆ ಎಲ್ಲವೂ ಗೊತ್ತಿತ್ತಾ? ಇ.ಡಿ ಹೇಳುವುದೇನು?

Exit mobile version