ಶಿಮ್ಲಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರು ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಹಿಮಾಚಲ ಪ್ರದೇಶದ ವಿಧಾನಸಭೆಗೆ ನವೆಂಬರ್ 12ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಆಡಳಿತಪಕ್ಷವಾಗಿದ್ದ ಬಿಜೆಪಿಯು 25 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಸೋಲು ಅನುಭವಿಸಿತ್ತು. ಹಿಮಾಚಲದಲ್ಲಿ 1982ರಿಂದಲೂ ಯಾವುದೇ ಪಕ್ಷವು ಸತತವಾಗಿ ಅಧಿಕಾರಕ್ಕೆ ಏರಿಲ್ಲ. ಒಮ್ಮೆ ಕಾಂಗ್ರೆಸ್ ಗೆದ್ದರೆ ಮತ್ತೊಮ್ಮೆ ಬಿಜೆಪಿ ಗೆದ್ದಿದೆ. ಅದೇ ಸಂಪ್ರದಾಯವು ಈಗಲೂ ಮುಂದುವರಿದಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹಲವು ನಾಯಕರು ಆಕ್ಷಾಂಕ್ಷಿಗಳಿದ್ದರು. ಕಾಂಗ್ರೆಸ್ ಅಗ್ರ ನಾಯಕಾರಾಗಿದ್ದ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿಯೂ ಆಗಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್, ಮುಕೇಶ್ ಅಗ್ನಿಹೋತ್ರಿ ಹಾಗೂ ಸುಖ್ವಿಂದರ್ ಸಿಂಗ್ ಸುಖು ಅವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ ವರಿಷ್ಠರು ಸುಖ್ವಿಂದರ್ ಸಿಂಗ್ ಅವರಿಗೆ ಸಿಎಂ ಪಟ್ಟ ಕಟ್ಟುತ್ತಿದ್ದಾರೆ. ಮುಖೇಶ್ ಅಗ್ನಿಹೋತ್ರಿ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನೂ ಓದಿ | Priyanka Gandhi | ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಹೊಸ ‘ಎಲೆಕ್ಷನ್ ಸ್ಟಾರ್’ ಪ್ರಿಯಾಂಕಾ ಗಾಂಧಿ!