Site icon Vistara News

Suprestar Rajnikanth : ಅಯೋಧ್ಯೆಯ ಹನುಮಾನ್​ ಮಂದಿರ ದರ್ಶನ ಮಾಡಿದ ಸೂಪರ್​ಸ್ಟಾರ್​ ರಜನಿಕಾಂತ್​

Rajnikanth

ಲಖನೌ: ಸೂಪರ್​ಸ್ಟಾರ್ ರಜನಿಕಾಂತ್​ (Suprestar Rajnikanth) ಭಾನುವಾರ ಅಯೋಧ್ಯೆಯ ಶ್ರೀ ಹನುಮಾನ್​ ಗರ್ಹಿ ದೇವಸ್ಥಾನಕ್ಕೆ (Ayodhya Hanumana Temple) ಭೇಟಿ ನೀಡಿ ದೇವರ ದರ್ಶನ ಪಡೆದಕೊಂಡಿದ್ದಾರೆ. ಜೈಲರ್ ಸಿನಿಮಾದ ಬಿಡುಗಡೆಗೊಂಡ ಬಳಿಕ ಇದೀಗ ದೇಶದ ನಾನಾ ತೀರ್ಥ ಕ್ಷೇತ್ರಗಳಿಗೆ ಅವರು ಪ್ರವಾಸ ಮಾಡುತ್ತಿದ್ದಾರೆ. ಜತೆಗೆ ಆಯಾ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು ಹಾಗೂ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಅಂತೆಯೇ ಉತ್ತರ ಪ್ರದೇಶದಲ್ಲಿ (Uttar Pradesh) ಸುತ್ತಾಟ ನಡೆಸುತ್ತಿರುವ ಅವರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಹನುಮಾನ್​ ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರವನ್ನು ಸುದ್ದಿ ಸಂಸ್ಥೆ ಎಎನ್ಐ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ರಜನಿಕಾಂತ್​ ಅವರು, ನಾನು ಇಲ್ಲಿ ಭೇಟಿ ನೀಡಲು ಅದೃಷ್ಟ ಮಾಡಿದ್ದೇನೆ. ಪ್ರತಿ ಬಾರಿಯೂ ಇಲ್ಲಿಗೆ ಭೇಟಿ ಮಾಡಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಯೋಗಿ ಆದಿತ್ಯನಾಥರ ಕಾಲಿಗೆರಗಿದ ‘ಜೈಲರ್’ ರಜನಿಕಾಂತ್!

ರಜನಿಕಾಂತ್ (Super Star Rajinikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (UP CM Yogi Adityanath) ಅವರನ್ನು ಭೇಟಿ ಮಾಡಿದರು. ಶುಕ್ರವಾರ ರಾತ್ರಿ ಲಕ್ನೋಗೆ (Lucknow City) ಆಗಮಿಸಿದ ರಜನಿಕಾಂತ್ ಅವರು ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ಯೋಗಿ ಆದಿತ್ಯನಾಥ ಅವರ ಜತೆಗೆ ರಜನಿಕಾಂತ್ ಅವರು ಜೈಲರ್ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗತ್ತು. ಈ ವೇಳೆ, ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಕೂಡ ಜತೆಗಿದ್ದರು.

ಇದನ್ನೂ ಓದಿ : Rajinikanth: ಜೈಲರ್‌ ಸಿನಿಮಾ ಬಿಡುಗಡೆಗೆ ಮುನ್ನವೇ ನೆಚ್ಚಿನ ಸ್ಥಳಕ್ಕೆ ಪ್ರವಾಸ ಹೋದ ರಜನಿಕಾಂತ್‌

ಲಕ್ನೋದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ರಜನಿಕಾಂತ್ ಅವರು ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೆ ಎರಗಿ, ನಮಸ್ಕರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಧ್ಯೆ, ರಜನಿಕಾಂತ್ ಅವರು, ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿ ಕುರಿತು ಸಂತೋಷ ಹೆಚ್ಚಿಕೊಂಡಿದ್ದಾರೆ. ಇದೆಲ್ಲ ದೇವರ ಆಶೀರ್ವಾದ. ಹಾಗಾಗಿ, ಸಿನಿಮಾ ಯಶಸ್ವಿಯಾಗಿ ಪ್ರದರ್ಶವಾಗುತ್ತಿದೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಹಿಂದೆ ರಜನಿಕಾಂತ್ ರಾಂಚಿಯಲ್ಲಿದ್ದರು. ಆಗಸ್ಟ್‌ 18ರಂದು ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ರಾಂಚಿಯ ಯಗೋಡಾ ಆಶ್ರಮದಲ್ಲಿ ಒಂದು ಗಂಟೆ ಧ್ಯಾನ ಮಾಡಿ ಬಳಿಕ ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದರು.

ಸಿನಿಮಾ ರಿಲೀಸ್ ಆಗಿ ಶುಕ್ರವಾರ 9ನೇ ದಿನ. ಅಂದು ಸಿನಿಮಾ ಭಾರತದಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ವಾರದ ಜೈಲರ್ ಕಲೆಕ್ಷನ್ 235.65 ಕೋಟಿ ಇದ್ದು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ದು ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ಈ ಸಿನಿಮಾದ ಸದ್ಯದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ.

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಜತೆ ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲರ್‌ ಮುಂದುವರಿದ (jailer 2) ಭಾಗಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ಕಾಲಿವುಡ್ ಪವರ್ ಸ್ಟಾರ್ ದಳಪತಿ ವಿಜಯ್ (thalapathy Vijay) ಕೂಡ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Exit mobile version