ನವ ದೆಹಲಿ: ಸುಪ್ರೀಂಕೋರ್ಟ್ ಪಿಎಂಎಲ್‌ಎ ಕಾಯಿದೆಯ ( ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ, ೨೦೦೨) ಕುರಿತ ತನ್ನ ತೀರ್ಪಿನ (PMLA) ಕೆಲ ಭಾಗಗಳ ಮರು ಪರಿಶೀಲನೆಗೆ ಒಪ್ಪಿದೆ.
ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಸಿಟಿ ರವಿ ಕುಮಾರ್ ಅವರನ್ನು ಒಳಗೊಂಡಿರುವ ಪೀಠವು ಮರು ಪರಿಶೀಲನೆಗೆ ಒಪ್ಪಿದೆ.
ಮುಖ್ಯವಾಗಿ ಆರೋಪಿಗೆ ಜಾರಿ ನಿರ್ದೇಶನಾಲಯದ ಪ್ರಕರಣ ಕುರಿತ ಮಾಹಿತಿಯ ವರದಿ ( ಕೇಸ್ ಇನ್‌ಫಾರ್ಮೇಶನ್ ರಿಪೋರ್ಟ್- ಇಸಿಐಆರ್) ಒದಗಿಸುವ ಅಗತ್ಯ ಇಲ್ಲ ಎಂಬ ತೀರ್ಪಿನ ಅಂಶದ ಬಗ್ಗೆ ಮರುಪರಿಶೀಲನೆಗೆ ಕೋರ್ಟ್ ಒಪ್ಪಿದೆ.
ಕಳೆದ ಜುಲೈ ೨೭ರಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಆರೋಪಿಗೆ ಇಸಿಐಆರ್ ಅನ್ನು ಕೊಡುವುದು ಕಡ್ಡಾಯವಲ್ಲ. ಏಕೆಂದರೆ ಈ ವರದಿ ಜಾರಿ ನಿರ್ದೇಶನಾಲಯದ ಆಂತರಿಕ ದಾಖಲೆಯಾಗಿರುತ್ತದೆ ಎಂದಿತ್ತು. ಜತೆಗೆ ಪಿಎಂಎಲ್‌ಎ ಕಾಯಿದೆ ಅಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಜಾರಿ ನಿರ್ದೇಶನಾಲಯದ ಅಧಿಕಾರವನ್ನು ಎತ್ತಿ ಹಿಡಿದಿತ್ತು. ಪಿಎಂಎಲ್‌ಎ ತೀರ್ಪಿನ ವಿರುದ್ಧ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು.