ಬೆಂಗಳೂರು: ಸುಪ್ರೀಂ ಕೋರ್ಟ್ನಲ್ಲಿ ಜುಲೈ 23 ರಂದು ನೀಟ್-ಯುಜಿ ಕುರಿತ ಅರ್ಜಿಗಳ ವಿಚಾರಣೆಯ ವೇಳೆ (Supreme Court Argument) ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ ಅವರು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲರಾದ ನರೇಂದ್ರ ಹೂಡಾ ಅವರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾಗ ನೆಡುಂಪರಾ ಮಧ್ಯ ಪ್ರವೇಶಿಸಿದ್ದಕ್ಕೆ ಅವರು ಸಿಟ್ಟಾದರು. ಅಲ್ಲದೆ, ಭದ್ರತಾ ಸಿಬ್ಬಂದಿಯನ್ನು ಕರೆದು ಕೋರ್ಟ್ನಿಂದ ಹೊರಕ್ಕೆ ಹಾಕುವೆ ಎಂದು ಎಚ್ಚರಿಕೆ ನೀಡಿದರು.
#HeatedArguments
— Bar and Bench (@barandbench) July 23, 2024
CJI DY Chandrachud : I have seen judiciary for last 24 years….
Mathew Nedumpara – I am leaving…#NEET_परीक्षा #SupremeCourt #SupremeCourtOfIndia pic.twitter.com/ZJ2PZE7aqA
ಹೂಡಾ ಅವರು ತಮ್ಮ ವಾದ ಮಾಡುತ್ತಿರುವ ನಡುವೆಯೇ ಮಧ್ಯಪ್ರವೇಶಿಸಿದ ನೆಡುಂಪರಾ ನನಗೂ ಮಂಡಿಸುವುದಕ್ಕೆ ಒಂದು ವಿಷಯವಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಅವರು (ಹೂಡಾ) ವಾದಿಸುತ್ತಿದ್ದಾರೆ. ನೀವು ಅವನಿಗೆ ಅಡ್ಡಿಪಡಿಸಬಾರದು ಎಂದು ಹೇಳಿದರು. ಇದಕ್ಕೆ ಸವಾಲು ಹಾಕಿದ ನೆಡಂಪೆರಾ ಅವರು “ನಾನು ಇಲ್ಲಿ ಹಿರಿಯವ” ಎಂದು ಹೇಳಿದರು. ಅವರ ಮಾತು ಸಿಜೆಐ ಅವರನ್ನು ಕೆರಳಿಸಿತು. ಅವರು ನೆಡುಂಪರಾಗೆ ತಕ್ಷಣವೇ ಎಚ್ಚರಿಕೆ ನೀಡಿದರು.
ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ನೀವು ಕೋರ್ಟ್ನ ಗ್ಯಾಲರಿ ಜತೆ ಮಾತನಾಡುತ್ತಿಲ್ಲ. ನೀವು ನನ್ನ ಮಾತನ್ನು ಕೇಳಬೇಕು. ನಾನು ಈ ನ್ಯಾಯಾಲಯದ ಉಸ್ತುವಾರಿ. ತಕ್ಷಣವೇ ಸೆಕ್ಯೂರಿಟಿಯನ್ನು ಕರೆದು ನಿಮ್ಮ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದರು. ಈ ವೇಳೆ ನೆಡುಂಪರಾ, ಇದನ್ನು ನೀವು ಹೇಳುವ ಅಗತ್ಯವಿಲ್ಲ ಹೇಳಿ ಹೊರಡಲು ಅನುವಾದರು.
ಈ ವೇಳೆ ಮುಖ್ಯ ನ್ಯಾಯಮೂರ್ತಿ, ನೀವು ಅದನ್ನು ಹೇಳಬೇಕಾಗಿಲ್ಲ. ನೀವಿನ್ನು ಹೋಗಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗ ವ್ಯವಸ್ಥೆಯನ್ನು ನೋಡಿದ್ದೇನೆ. ಈ ನ್ಯಾಯಾಲಯದಲ್ಲಿ ವಕೀಲರ ಕಾರ್ಯವಿಧಾನವನ್ನು ನನಗೆ ನಿರ್ದೇಶಿಸಲು ನಾನು ಅನುಮತಿ ಕೊಡುವುದಿಲ್ಲ ಎಂದು ಹೇಳಿದರು. ಈ ವೇಳೆ ನೆಡುಂಪರಾ ” ಈ ನ್ಯಾಯಾಲಯವನ್ನು 1979 ರಿಂದ ನೋಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ
ಈ ವೇಳೆ ಮುಖ್ಯ ನ್ಯಾಯಮೂರ್ತಿ ನೆಡುಂಪರಾ ಅವರಿಗೆ. “ದಯವಿಟ್ಟು ಸುಮ್ಮನಿರಿ. ಅಥವಾ ಕುಳಿತುಕೊಳ್ಳಿ. ನೀವು ಹೊರಡಲು ಬಯಸುತ್ತೀರಿ ಎಂದಾದರೆ ಹೋಗಬಹುದು. ಅದು ನಿಮ್ಮ ಆಯ್ಕೆ. ನೀವು ವಿಚಾರಣೆ ಮಧ್ಯಪ್ರವೇಶಿಸಬೇಕಾಗಿಲ್ಲ” ಎಂದು ಸಿಜೆಐ ಹೇಳಿದರು.
ನಾನೇ ನಿಮಗೆ ಕ್ಷಮೆ ನೀಡುತ್ತಿದ್ದೇನೆ ಎಂದ ನೆಡುಂಪರಾ
ಅಲ್ಲಿಗೂ ಸುಮ್ಮನಾಗದ ಮ್ಯಾಥ್ಯೂಸ್ ನೆಡುಂಪರಾ, ಬಳಿಕ “ನಾನು ಒಂದು ವಾಕ್ಯವನ್ನು ಹೇಳುವ ಮೂಲಕ ಮುಕ್ತಾಯಗೊಳಿಸುತ್ತೇನೆ. ನನಗೆ ಮಾಡಿದ ಎಲ್ಲಾ ಅವಮಾನಕ್ಕಾಗಿ ನಾನು ನ್ಯಾಯಾಂಗದ ಪ್ರಭುತ್ವವನ್ನು ಕ್ಷಮಿಸುತ್ತಿದ್ದೇನೆ. ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ನಿಮಗೆ ತಿಳಿದಿಲ್ಲ. ನನ್ನ ಮನಸ್ಸಿನಲ್ಲಿ ಏನೂ ಇಲ್ಲ, ಪ್ರಭುತ್ವದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿ ಹೊರಟರು.
ವಿಚಾರಣೆಯಲ್ಲಿ ಎನ್ಟಿಎಯನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೆಡುಂಪರಾ ಅವರ ನಡವಳಿಕೆಯನ್ನು ಅಗೌರವ ಎಂದು ಕರೆದಿದ್ದಾರೆ.
ಶಿಕ್ಷೆಗೆ ಒಳಗಾಗಿದ್ದ ನೆಡುಂಪಾರಾ?
2019ರಲ್ಲಿ, ಸುಪ್ರೀಂ ಕೋರ್ಟ್ ನೆಡುಂಪರಾ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ. ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆ ವೇಳೆ ಅವರು ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರ ತಂದೆ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ಹೆಸರನ್ನು ಅನಗತ್ಯವಾಗಿ ಕೋರ್ಟ್ನಲ್ಲಿ ಉಲ್ಲೇಖಿಸಿದ್ದರು. ಬಳಿಕ ನೆಡುಂಪರಾ ಅವರು ಬೇಷರತ್ ಕ್ಷಮೆಯಾಚನೆ ಕೋರಿದ ಬಳಿಕ ಶಿಕ್ಷೆಯನ್ನು ಅಮಾನತುಗೊಳಿಸಿತ್ತು.