ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು (Privacy policy) ಒಪ್ಪಿಕೊಳ್ಳದ ಬಳಕೆದಾರರ ಕಾರ್ಯವನ್ನು ನಿರ್ಬಂಧಿಸುವುದಿಲ್ಲ ಎಂದು 2021ರಲ್ಲಿ ವಾಟ್ಸಾಪ್ (Whatsapp) ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿತ್ತು. ಈ ಮಾಹಿತಿಯನ್ನು ವಾಟ್ಸಾಪ್ ಪ್ರಚಾರಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ನಿರ್ದೇಶಿಸಿದೆ. ಜಸ್ಟೀಸ್ ಕೆ ಎಂ ಜೊಸೇಫ್ ನೇೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ಸರ್ಕಾರಕ್ಕೆ ಈ ಹಿಂದೆ ನೀಡಿದ ಭರವಸೆಯನ್ನು ಐದು ಪತ್ರಿಕೆಗಳಲ್ಲಿ ಪ್ರಚಾರ ನೀಡಬೇಕು ಎಂದು ಸೂಚಿಸಿದೆ.
ತನ್ನ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ಕಾರ್ಯವನ್ನು ಮಿತಿಗೊಳಿಸುವುದಿಲ್ಲ ಎಂದು 2021 ರಲ್ಲಿ ಕೇಂದ್ರಕ್ಕೆ ನೀಡಿರುವ ಭರವಸೆಯನ್ನು ಪ್ರಚಾರ ಮಾಡಲು WhatsApp ಅನ್ನು ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶಿಸಿದೆ.ನಾವು ಪತ್ರದಲ್ಲಿ ಸರ್ಕಾರ ತೆಗೆದುಕೊಂಡ ನಿಲುವನ್ನು ದಾಖಲಿಸುತ್ತೇವೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಪತ್ರದ ಷರತ್ತುಗಳಿಗೆ ಬದ್ಧರಾಗಿರುತ್ತೇವೆ ಎಂದು ವಾಟ್ಸಾಪ್‌ನ ಹಿರಿಯ ವಕೀಲರ ಸಲ್ಲಿಕೆಯನ್ನು ಕೋರ್ಟ್ ಅಂಗೀಕರಿಸಿದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: LIC WhatsApp Services: ವಾಟ್ಸಾಪ್‌ನಲ್ಲೇ ನಿಮ್ಮ ಎಲ್ಐಸಿ ಪ್ರೀಮಿಯಂ ಮಾಹಿತಿ ತಿಳಿದುಕೊಳ್ಳಿ! ನೋಂದಣಿ ಹೇಗೆ?
ಅಲ್ಲದೇ, ಹೊಸ ಗೌಪ್ಯತಾ ನೀತಿಯನ್ನು ಒಪ್ಪದ ಬಳಕೆದಾರರ ಕಾರ್ಯವನ್ನು ಮಿತಿಗೊಳಿಸುವುದಿಲ್ಲ ಎಂಬ ಭರವಸೆಯನ್ನು ವಾಟ್ಸಾಪ್, ಎರಡು ಸಂದರ್ಭಗಳಲ್ಲಿ ಐದು ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು ಎಂದು ಪೀಠ ಹೇಳಿತು. ಜಸ್ಟೀಸ್ ಕೆ ಎಂ ಜೋಸೆಫ್ ನೆತೃತ್ವದ ಪೀಠದಲ್ಲಿ ಜಸ್ಟೀಸ್ ಅಜಯ್ ರಸ್ತೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ ಟಿ ರವಿಕುಮಾರ್ ಇತರ ನ್ಯಾಯಮೂರ್ತಿಗಳಾಗಿದ್ದಾರೆ. ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 11ಕ್ಕೆ ನಿಗದಿ ಪಡಿಸಿದೆ.