ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ವಿವಿಧ ರಾಜ್ಯಗಳು ಸಮಿತಿಗಳನ್ನು ರಚಿಸಿವೆ. ಇದನ್ನು ವಿರೋಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂ ಕೋರ್ಟ್(Supreme Court), ಸೋಮವಾರ ವಜಾ ಮಾಡಿದೆ.
ಸಮಿತಿಗಳನ್ನು ರಚಿಸುವ ಅಧಿಕಾರವು ರಾಜ್ಯಗಳಿಗಳಿರುತ್ತದೆ. ರಾಜ್ಯ ಸರ್ಕಾರಗಳ ಈ ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದೆ.
ಈ ಪಿಐಎಲ್ ಅರ್ಜಿಯನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾ ಮಾಡಿದೆ. ಸಂವಿಧಾನ ಆರ್ಟಿಕಲ್ 162ರ ಅಡಿಯಲ್ಲಿ ಸರ್ಕಾರಗಳು ಸಮಿತಿ ರಚನೆ ಮಾಡಿವೆ. ಅದರಲ್ಲಿ ತಪ್ಪೇನಿದೆ ಎಂದ ನ್ಯಾಯಪೀಠ ಪ್ರಶ್ನಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳು ಸೇರಿ ಅನೇಕ ರಾಜ್ಯಗಳು ಸಮಿತಿ ರಚಿಸಿವೆ.
ಇದನ್ನೂ ಓದಿ | Supreme Court | ಸಿನಿಮಾ ಥಿಯೇಟರ್ ಜಿಮ್ ಅಲ್ಲ! ಆಹಾರ ನಿರ್ಬಂಧಿಸುವುದು ಮಾಲೀಕರ ಹಕ್ಕು ಎಂದ ಸುಪ್ರೀಂ ಕೋರ್ಟ್