Site icon Vistara News

Godhra Train Burning Case: ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಜಾಮೀನು; ನಾಲ್ವರ ಅರ್ಜಿ ತಿರಸ್ಕಾರ

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: 2002 ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ (Godhra Train Burning Case) ಶಿಕ್ಷೆಗೆ ಗುರಿಯಾಗಿದ್ದ 8 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಜಾಮೀನು ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಿದ್ದ ಇತರ ನಾಲ್ವರಿಗೆ ಜಾಮೀನು ದೊರೆತಿಲ್ಲ. ಹತ್ಯಾಕಾಂಡದಲ್ಲಿ ಅವರ ಪಾತ್ರದ ಆಧಾರದ ಮೇಲೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈಗ ಜಾಮೀನು ಪಡೆದುಕೊಂಡಿರುವ 8 ಅಪರಾಧಿಗಳು ಈಗಾಗಲೇ 17 ವರ್ಷಗಳಲ್ಲಿ ಜೈಲಿನಲ್ಲಿ ಕಳೆದಿರುವುದರಿಂದ ಅವರಿಗೆ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಬೇಲ್ ದಯಪಾಲಿಸಿದೆ.

2002 ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಈ ಎಂಟು ಜನರನ್ನು ದೋಷಿ ಎಂದು ತೀರ್ಪು ನೀಡಿದ್ದ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಗುಜರಾತ್ ಹೈಕೋರ್ಟ್ ಕೂಡ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.

ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ ಗುಜರಾತ್ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದನ್ನು ಎತ್ತಿ ಹಿಡಿದಿದೆ. ಹೀಗಿದ್ದಾಗ್ಯೂ, ಅಪರಾಧಿಗಳ ಪರವಾಗಿ ವಕೀಲರು, ಅವರು(ಶಿಕ್ಷೆಗೊಳಗಾದವರು) ಈಗಾಗಲೇ ಜೈಲಿನಲ್ಲಿ 17 ವರ್ಷಗಳನ್ನು ಕಳೆದಿದ್ದಾರೆಂಬ ಸಂಗತಿಯನ್ನು ಕೋರ್ಟ್ ಗಮನಕ್ಕೆ ತಂದರು.

ಇದನ್ನೂ ಓದಿ: Post Godhra Case : ಗೋಧ್ರೋತ್ತರ ಗಲಭೆ ಪ್ರಕರಣ: 17 ಜನರ ಕೊಲೆ ಆರೋಪ ಹೊತ್ತ 22 ಆರೋಪಿಗಳು ಖುಲಾಸೆ

2002 ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಕನಿಷ್ಠ 58 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಪರಿಣಾಮ ಗುಜರಾತ್‌ನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಕೋಮು ದಂಗೆ ನಡೆದಿತ್ತು. 2011ರಲ್ಲಿ ವಿಚಾರಣಾ ಕೋರ್ಟ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಜನರನ್ನು ದೋಷಿಗಳೆಂದು ತೀರ್ಪು ನೀಡಿ, 63 ಜನರನ್ನು ಖುಲಾಸೆಗೊಳಿಸಿತ್ತು. 31 ದೋಷಿಗಳ ಪೈಕಿ 11 ಜನರಿಗೆ ಮರಣ ದಂಡನೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.

Exit mobile version