Site icon Vistara News

ಮಹಿಳೆಯನ್ನು ಅವಮಾನಿಸುವ ಅಫೇರ್, ಹೌಸ್‌ವೈಫ್ ಸೇರಿ ಹಲ ಪದಗಳಿಗೆ ಕೊಕ್! ಸುಪ್ರೀಂ ಕೋರ್ಟ್ ಕೈಪಿಡಿ ಬಿಡುಗಡೆ

8 votes cast in Chandigarh mayoral election were Valid Says Supreme Court

ನವದೆಹಲಿ: ಹೆಣ್ಣಿನ ಸೂಕ್ಷ್ಮತೆಯನ್ನು ಅಗೌರವಿಸುವ ರೂಢಿಗತ ಪದಗಳ (gender stereotypes words) ಬಳಕೆಯ ಬದಲಿಗೆ ಪರ್ಯಾಯ ಪದಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಯಾವೆಲ್ಲ ಪದಗಳಿಗೆ, ಹೇಗೆ ಪರ್ಯಾಯ ವಾಕ್ಯಗಳನ್ನು ಮತ್ತು ಪದಗಳನ್ನು ಬಳಸಬಹುದು (alternative words or phrases) ಎಂದು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದ ಕೈಪಿಡಿಯನ್ನು (Handbook) ಬಿಡುಗಡೆ ಮಾಡಿದೆ. ಹೌಸ್ ವೈಫ್(ಗೃಹಿಣಿ), ಅಫೇರ್(ಅಕ್ರಮ ಸಂಬಂಧ), ಬಾಸ್ಟರ್ಡ್(ಜಾರಿಣಿ ಮಗ), ಚೈಲ್ಡ್ ಪ್ರಾಸ್ಟಿಟ್ಯೂಟ್(ಬಾಲ ವೇಶ್ಯೆ), ಇವ್ ಟೀಸಿಂಗ್(ಚುಡಾಯಿಸುವುದು), ಹೂಕರ್ (ವೇಶ್ಯೆ)… ಈ ರೀತಿಯ ಪದಗಳನ್ನು ಗುರುತಿಸಿ, ಅವುಗಳಿಗೆ ಪರ್ಯಾಯ ಅಥವಾ ವಾಕ್ಯಗಳನ್ನು ಈ ಕೈಪಿಡಿಯಲ್ಲಿ ಸೇರಿಸಲಾಗಿದೆ.

ಲಿಂಗ ರೂಢಿಗತ ಪದಗಳನ್ನು ತೊಡೆದು ಹಾಕುವುದಕ್ಕಾಗಿ ಈ ಕೈಪಿಡಿಯು ನ್ಯಾಯಾಧೀಶರಿಗೆ ನೆರವು ನೀಡುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ರೂಢಿಗತ ಪದಗಳನ್ನು ಗುರುತಿಸಲು ಮತ್ತು ತಿಳಿದುಕೊಳ್ಳಲು ಕಾನೂನು ಸಮುದಾಯಕ್ಕೆ ಈ ಕೈಪಿಡಿ ಸಹಾಯ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಹಿಳೆಯರ ಕುರಿತು ಬಳಸಲಾಗುವ ರೂಢಿಗತ ಪದಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಬಹಳಷ್ಟು ಪದಗಳನ್ನು ನ್ಯಾಯಾಲಯಗಳು ಈ ಹಿಂದಿನಿಂದಲೂ ಬಳಸಿಕೊಂಡು ಬಂದಿವೆ. ಆದರೆ, ಈ ಪದಗಳ ಬಳಕೆ ತಪ್ಪಾಗಿದ್ದು ಮತ್ತು ಕಾನೂನಿನ ಅನ್ವಯವನ್ನು ಹೇಗೆ ವಿರೂಪಗೊಳಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ಹೇಳಿದ್ದಾರೆ.

Supreme Court: ರೂಢಿಗತ ಪದಗಳಿಗೆ ಪರ್ಯಾಯ ಪದ ಅಥವಾ ವಾಕ್ಯಗಳ ಲಿಸ್ಟ್ ಇಲ್ಲಿದೆ

ಇನ್ನೊಂದು ಲಿಸ್ಟ್ ಕೂಡ ಇದೆ ನೋಡಿ

ಈ ಸುದ್ದಿಯನ್ನೂ ಓದಿ: Corruption: ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕಡ್ಡಾಯ ಎಂದ ಸುಪ್ರೀಂ ಕೋರ್ಟ್‌

Exit mobile version