Site icon Vistara News

ಸುಪ್ರೀಂಕೋರ್ಟ್‌ನಲ್ಲಿ ಇಂದು ಏಕನಾಥ್‌ ಶಿಂಧೆ ಸರ್ಕಾರದ ಭವಿಷ್ಯ ನಿರ್ಧಾರ ನಿರೀಕ್ಷೆ

supreme court

ನವ ದೆಹಲಿ: ಮಹಾರಾಷ್ಟ್ರ ರಾಜಕೀಯದಲ್ಲಿ ಇತ್ತೀಚೆಗೆ ಸಂಭವಿಸಿದ ಹಲವಾರು ಘಟನೆಗಳು, ಕಾನೂನು ಸಂಘರ್ಷ ಕುರಿತ ವಿವಾದಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಇಂದು ಬಾಕಿ ಇರುವ ಅರ್ಜಿಗಳ ವಿಚಾರಣೆ ನಡೆಸುವ ನಿರೀಕ್ಷೆ ಇದೆ.

ವಿಶ್ವಾಸ ಮತ, ಹೊಸತಾಗಿ ಆಯ್ಕೆಯಾದ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರಿಂದ ಮುಖ್ಯ ಸಚೇತಕರ ನೇಮಕ, ಶಿವ ಸೇನಾದ ೧೬ ರೆಬೆಲ್‌ ಶಾಸಕರ ಅನರ್ಹತೆ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದುವರಿಸಲಿದೆ.

ಠಾಕ್ರೆ ಬಣದ ಪರ ಸುನಿಲ್‌ ಪ್ರಭು ಸುಪ್ರೀಂಕೋರ್ಟ್‌ನಲ್ಲಿ ವಾದಿಸಲಿದ್ದು, ಶಿಂಧೆ ಬಣದ ಭರತ್‌ ಗೋಗ್ವಾಳೆ ಅವರನ್ನು ಮುಖ್ಯ ಸಚೇತರನ್ನಾಗಿ ನೇಮಿಸಿದ ನೂತನ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಶಿವಸೇನಾದ ೧೬ ರೆಬೆಲ್‌ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ನಿರೀಕ್ಷಿಸಿರುವ ಅರ್ಜಿಯ ವಿಚಾರಣೆ ಕೂಡ ಬಾಕಿ ಇದೆ. ಇದೇ ವೇಳೆ ಶಿಂಧೆ ಬಣ ಕೂಡ ತಮ್ಮ ೧೬ ಶಾಸಕರಿಗೆ ಅನಹತೆ ನೋಟಿಸ್‌ ಕಳಿಸಿರುವುದನ್ನು ಪ್ರಶ್ನಿಸಿದೆ.

ರಾಜ್ಯಪಾಲ ಬಿಎಸ್‌ ಕೋಶ್ಯಾರಿ ಅವರು ಶಿಂಧೆ ಅವರಿಗೆ ಸಿಎಂ ಆಗಿ ಪ್ರಮಾಣವಚನ ಕೈಗೊಳ್ಳಲು ಅವಕಾಶ ನೀಡಿದ ಕ್ರಮವನ್ನು ಕಳೆದ ಶುಕ್ರವಾರ ಠಾಕ್ರೆ ಪಾಳೆಯ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಎಲ್ಲ ಅರ್ಜಿಗಳ ವಿಚಾರಣೆ ಒಟ್ಟಿಗೆ ಇಂದು ನಡೆಯುವ ನಿರೀಕ್ಷೆ ಇದೆ.

“ಸೋಮವಾರ ಮಹತ್ವದ ದಿನ. ನ್ಯಾಯದೇವತೆ ನ್ಯಾಯವನ್ನು ಎತ್ತಿ ಹಿಡಿಯುವ ಭರವಸೆ ಇದೆʼʼ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಇದನ್ನೂ ಓದಿ:Maha politics | ಮಹಾರಾಷ್ಟ್ರ ಸಂಪುಟ ವಿಸ್ತರಣೆಗೆ ದಿಲ್ಲಿ ನಾಯಕರ ಜತೆ ಶಿಂಧೆ, ಫಡ್ನವಿಸ್‌ ಫೈನಲ್‌ ಪ್ಲ್ಯಾನಿಂಗ್

Exit mobile version