Site icon Vistara News

Manish Sisodia: ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಮನೀಷ್ ಸಿಸೋಡಿಯಾಗೆ ಹಿನ್ನಡೆ, ಅರ್ಜಿ ತಿರಸ್ಕಾರ

ED arrests former Delhi deputy CM Manish Sisodia in excise policy case

ಮನೀಷ್‌ ಸಿಸೋಡಿಯಾ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ಮನೀಷ್‌ ಸಿಸೋಡಿಯಾ (Manish Sisodia) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸಿಬಿಐ ಬಂಧನ ಪ್ರಶ್ನಿಸಿ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದು, ಹೈಕೋರ್ಟ್‌ ಮೊರೆ ಹೋಗಲು ಸಲಹೆ ನೀಡಿದೆ.

ಮನೀಷ್‌ ಸಿಸೋಡಿಯಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು, “ದೆಹಲಿಯಲ್ಲಿ ನಡೆದ ಎಲ್ಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಬರುತ್ತೀರಿ. ಮೊದಲು ಹೈಕೋರ್ಟ್‌ಗೆ ಅರ್ಜಿ ಹಾಕಿ. ಅಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ” ಎಂದು ಸ್ಪಷ್ಟವಾಗಿ ಹೇಳಿತು.

“ಸಂವಿಧಾನದ ೩೨ನೇ ಕಲಂ ಪ್ರಕಾರ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದೀರಿ. ಎಫ್‌ಐಆರ್‌ ಪ್ರಶ್ನಿಸಿದ್ದೀರಿ. ಕಸ್ಟಡಿಗೆ ವಹಿಸಿದ್ದನ್ನೂ ಪ್ರಶ್ನಿಸಿದ್ದೀರಿ. ಮೇಲಾಗಿ, ಜಾಮೀನು ಕೇಳುತ್ತಿದ್ದೀರಿ. ಮೊದಲು ದೆಹಲಿ ಕೋರ್ಟ್‌ಗೆ ಅರ್ಜಿ ಹಾಕಿ” ಎಂದು ಹೇಳಿದರು. ನ್ಯಾಯಾಲಯವು ಮನೀಷ್‌ ಸಿಸೋಡಿಯಾ ಅವರನ್ನು ಮಾರ್ಚ್‌ ೪ರವರೆಗೆ ಈಗಾಗಲೇ ಸಿಬಿಐ ಕಸ್ಟಡಿಗೆ ವಹಿಸಿದೆ.

ಇದನ್ನೂ ಓದಿ: Delhi Excise policy case: ಅಬಕಾರಿ ನೀತಿ ಜಾರಿಗೆ ಪ್ರಭಾವ ಬೀರಲು 4000 ಇಮೇಲ್! ಸುಪ್ರೀಂ ಮೊರೆ ಹೋದ ಸಿಸೋಡಿಯಾ

Exit mobile version