Site icon Vistara News

New Parliament Building: ರಾಷ್ಟ್ರಪತಿ ಅವರಿಂದಲೇ ಸಂಸತ್‌ ಭವನ ಉದ್ಘಾಟನೆ ಕೋರಿ ಅರ್ಜಿ; ತಿರಸ್ಕರಿಸಿದ ಕೋರ್ಟ್

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ನೂತನ ಸಂಸತ್‌ ಭವನದ ಉದ್ಘಾಟನೆ (New Parliament Building) ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಹಾಗೂ ಪಿ.ಎಸ್.ನರಸಿಂಹ ಅವರ ಪೀಠವು, “ಏಕೆ ಈ ಅರ್ಜಿ ಸಲ್ಲಿಸಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಸಂವಿಧಾನದ 32ನೇ ವಿಧಿ ಅನ್ವಯ ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ” ಎಂದು ತಿಳಿಸಿತು

ಅಡ್ವೊಕೇಟ್ ಸಿ.ಆರ್‌. ಜಯಾ ಸುಕಿನ್‌ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದರು. “ಸಂವಿಧಾನದ 79ನೇ ವಿಧಿ ಪ್ರಕಾರ, ಸಂಸತ್ತಿನಲ್ಲಿ ಎರಡು ಸದನಗಳು ಇರಬೇಕು ಹಾಗೂ ಒಬ್ಬ ರಾಷ್ಟ್ರಪತಿ ಇರಬೇಕು ಎಂಬ ನಿಯಮವಿದೆ. ಆದರೆ, ಲೋಕಸಭೆ ಸಚಿವಾಲಯ ಹಾಗೂ ಕೇಂದ್ರ ಸರ್ಕಾರವು 79ನೇ ವಿಧಿಯನ್ನು ಉಲ್ಲಂಘಿಸಿವೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಹೇಗಿದೆ ನೋಡಿ ನೂತನ ಸಂಸತ್‌ ಭವನ

“ನೂತನ ಸಂಸತ್‌ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಅವರನ್ನು ಆಹ್ವಾನಿಸದಿರುವ ಮೂಲಕ ಕೇಂದ್ರ ಸರ್ಕಾರವು ಮಹೋನ್ನತ ಹುದ್ದೆಗೆ ಅವಮಾನ ಮಾಡಲಾಗಿದೆ” ಎಂದು ಜಯಾ ಸುಕಿನ್‌ ವಾದ ಮಂಡಿಸಿದರು. ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಅರ್ಜಿಯನ್ನು ವಜಾಗೊಳಿಸಬೇಕು. ಹಾಗೊಂದು ವೇಳೆ, ಅರ್ಜಿದಾರರೇ ಹಿಂಪಡೆಯಲು ಅವಕಾಶ ನೀಡಿದರೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ” ಎಂದರು. ಕೊನೆಗೆ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

60 ಸಾವಿರ ಕಾರ್ಮಿಕರಿಗೆ ಸನ್ಮಾನ

ನೂತನ ಸಂಸತ್‌ ಭವನದ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 60 ಸಾವಿರ ಕಾರ್ಮಿಕರನ್ನು ಸನ್ಮಾನಿಸಲಿದ್ದಾರೆ. “ಸುಮಾರು 60,000 ಶ್ರಮ ಯೋಗಿಗಳು ಈ ಸಂಸತ್ ಭವನದ ನಿರ್ಮಾಣವನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲು ಕೊಡುಗೆ ನೀಡಿದ್ದಾರೆ. ಮೇ 28ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಈ ಕಾರ್ಮಿಕರನ್ನು (ಶ್ರಮ ಯೋಗಿಗಳು) ಗೌರವಿಸಲಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ…

ಮೇ 28ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರ ಉಪಸ್ಥಿತಿಯಲ್ಲಿ ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದ ಕಾರಣ ಸುಮಾರು 20 ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.

Exit mobile version