Site icon Vistara News

Supreme Court: ಬೆಂಕಿಯೊಂದಿಗೆ ಆಟ ಬೇಡ! ಪಂಜಾಬ್, ತಮಿಳು ನಾಡು ರಾಜ್ಯಪಾಲರ ವಿರುದ್ಧ ಕೋರ್ಟ್ ಕೆಂಡ

America tortured Nikhil Gupta, Petition to the Supreme Court

ನವದೆಹಲಿ: ರಾಜ್ಯ ವಿಧಾನಸಭೆಗಳು ಪಾಸು ಮಾಡಿರುವ ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿರುವ ಪಂಜಾಬ್ (Punjab Governor) ಮತ್ತು ತಮಿಳುನಾಡು ರಾಜ್ಯಪಾಲರ (Tamil Nadu Governor) ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಹರಿಹಾಯ್ದಿದೆ. ನೀವು ಬೆಂಕಿಯ ಜತೆ ಆಟವಾಡುತ್ತಿದ್ದೀರಿ (Plying with Fire) ಎಂದು ಎಚ್ಚರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ (Chief Justice DY Chandrachud) ನೇತೃತ್ವದ ಪೀಠವು, ಚುನಾಯಿತ ವಿಧಾನಸಭೆಯು ಪಾಸು ಮಾಡಿರುವ ವಿಧೇಯಕಗಳನ್ನು ವಿಳಂಬ ಮಾಡಬೇಡಿ ಎಂದು ಇಬ್ಬರು ರಾಜ್ಯಪಾಲರಿಗೆ ತಿಳಿಸಿದೆ.

ದಯವಿಟ್ಟು ಸರಿಯಾಗಿ ಚುನಾಯಿತ ಸಭೆಯು ಅಂಗೀಕರಿಸಿದ ವಿಧೇಯಕಗಳನ್ನು ಹಿಂದಿರುಗಿಸಬೇಡಿ. ಇದು ಅತ್ಯಂತ ಗಂಭೀರ ಆತಂಕಕಾರಿ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ಹೇಳಿದ್ದಾರೆ.

ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ. ರಾಜ್ಯಪಾಲರು ಹೇಳಲು ಹೇಗೆ ಸಾಧ್ಯ? ಪಂಜಾಬ್‌ನಲ್ಲಿ ಈಗ ಏನಾಗುತ್ತಿದೆ ಆ ಬಗ್ಗೆ ನಮಗೆ ಸಂತೋಷವಿಲ್ಲ. ನಾವು ಸಂಸದೀಯ ಪ್ರಜಾಪ್ರಭುತ್ವದೊಂದಿಗೆ ಮುಂದುರಿಯಲು ಸಾಧ್ಯವೇ? ಎಂದು ಸುಪ್ರೀಂ ಕೋರ್ಟ್ ಪೀಠವು, ಭಾರತವು ಪ್ರತಿಷ್ಠಾಪಿತ ಸಂಪ್ರದಾಯಗಳು ಮತ್ತು ಒಪ್ಪಂದಗಳ ಮೇಲೆ ನಡೆಯುತ್ತಿದೆ ಮತ್ತು ಈ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿತು.

ರಾಜ್ಯ ವಿಧಾನಸಭೆ ಪಾಸು ಮಾಡಿದ ವಿಧೇಯಕಗಳಿಗೆ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

ಇಂತಹ “ಅಸಂವಿಧಾನಿಕ ನಿಷ್ಕ್ರಿಯತೆ” ಇಡೀ ಆಡಳಿತವನ್ನು “ಗ್ರೈಂಡಿಂಗ್ ಸ್ಟಾಪ್”ಗೆ ತಂದು ನಿಲ್ಲಿಸಿದೆ ಎಂದು ಪಂಜಾಬ್ ಸರ್ಕಾರವು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ. ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಹಣಕಾಸು ನಿರ್ವಹಣೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಏಳು ವಿಧೇಯಕಗಳನ್ನು ರಾಜ್ಯಪಾಲರು ಹಿಂಪಡೆದಿದ್ದಾರೆ ಎಂದು ಹೇಳಿದರು. ಜುಲೈನಲ್ಲಿ ರಾಜ್ಯಪಾಲರ ಒಪ್ಪಿಗೆಗಾಗಿ ವಿಧೇಯಕಗಳನ್ನು ಕಳುಹಿಸಲಾಗಿದೆ ಮತ್ತು ಅವರ ನಿಷ್ಕ್ರಿಯತೆಯು ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ರಾಜ್ಯ ವಿಧಾನಸಭೆ ಪಾಸು ಮಾಡಿದ ವಿಧೇಯಕಗಳ ಕುರಿತು ರಾಜ್ಯಪಾಲರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. ಆಮ್ ಆದ್ಮಿ ಪಾರ್ಟಿ ಪಕ್ಷದ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಪಂಜಾಬ್ ರಾಜ್ಯಪಾಲರು ದೀರ್ಘ ಅವಧಿಯಿಂದ ಸಂಘರ್ಷಕ್ಕೆ ಇಳಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court: ಆಪ್‌ ಸಂಸದ ರಾಘವ್ ಚಡ್ಡಾಗೆ ಸುಪ್ರೀಂ ಕೋರ್ಟ್‌ ತಪರಾಕಿ, ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಯಾಚಿಸಲು ಸೂಚನೆ

Exit mobile version