Site icon Vistara News

Rapido Bike Taxi: ದೆಹಲಿಯಲ್ಲಿ ರ‍್ಯಾಪಿಡೋ ಬೈಕ್‌ ಓಡೋ ಹಾಗಿಲ್ಲ ಎಂದ ಸುಪ್ರೀಂ; ಕರ್ನಾಟಕದಲ್ಲೂ ಇದೇ ಬೇಡಿಕೆ

Rapido Bike Taxi Row In Delhi

Supreme Court stays bike taxi operations of Rapido, Uber in Delhi

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರ‍್ಯಾಪಿಡೋ ಹಾಗೂ ಊಬರ್‌ ಬೈಕ್‌ ಟ್ಯಾಕ್ಸಿಗಳ ಓಡಾಟಕ್ಕೆ ಸುಪ್ರೀಂ ಕೋರ್ಟ್‌ ಕಡಿವಾಣ ಹಾಕಿದೆ. ಇದರಿಂದ ಬೈಕ್‌-ಟ್ಯಾಕ್ಸಿ ಅಗ್ರಿಗೇಟರ್‌ಗಳಿಗೆ (Rapido Bike Taxi) ಭಾರಿ ಹಿನ್ನಡೆಯಾಗಿದೆ. ದೆಹಲಿಯಲ್ಲಿ ಬೈಕ್‌-ಟ್ಯಾಕ್ಸಿಗಳ ಓಡಾಟಕ್ಕೆ ನೀತಿ ಜಾರಿಯಾಗುವವರೆಗೆ ಬೈಕ್‌-ಟ್ಯಾಕ್ಸಿಗಳು ಸಂಚಾರ ನಡೆಸಲಿ ಎಂದು ದೆಹಲಿ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರಿಂದಾಗಿ, ಮುಂದಿನ ನೀತಿ ಜಾರಿಯಾಗುವವರೆಗೆ ದೆಹಲಿಯಲ್ಲಿ ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳು ಓಡಾಡುವುದಿಲ್ಲ.

ಮೊದಲಿಗೆ ನೀತಿ ಜಾರಿಯಾಗುವವರೆಗೆ ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳು ಓಡಾಡುವಂತಿಲ್ಲ ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ದೆಹಲಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ, ಸುಪ್ರೀಂ ಕೋರ್ಟ್‌ ಈಗ ದೆಹಲಿ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಾಗೆಯೇ, ಬೈಕ್‌-ಟ್ಯಾಕ್ಸಿ ಅಗ್ರಿಗೇಟರ್‌ಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆಯೂ ಸೂಚಿಸಿದೆ.

ಬೈಕ್‌-ಟ್ಯಾಕ್ಸಿ ಅಗ್ರಿಗೇಟರ್‌ಗಳ ಸಂಚಾರ ಸೇರಿ ಹಲವು ವಿಷಯಗಳ ಕುರಿತು ಇದುವರೆಗೆ ಯಾವುದೇ ನಿಯಮಗಳು ಜಾರಿಗೆ ಬಂದಿಲ್ಲ. ಇದಕ್ಕಾಗಿ ದೆಹಲಿ ಸರ್ಕಾರವು ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳ ಸಂಚಾರಕ್ಕೆ ನಿಷೇಧ ಜಾರಿಗೊಳಿಸಿದೆ. ಜುಲೈ ಅಂತ್ಯದ ವೇಳೆಗೆ ನೀತಿ ಜಾರಿಗೆ ಬರುತ್ತದೆ. ಇದಾದ ನಂತರ ಬೇಕಾದರೆ ಓಡಾಟ ನಡೆಸಲಿ ಎಂಬುದು ದೆಹಲಿ ಸರ್ಕಾರದ ವಾದವಾಗಿದೆ.

ಇದನ್ನೂ ಓದಿ: Rapido Bike Vs Auto: ಕಂಡ ಕಂಡಲ್ಲಿ ರ‍್ಯಾಪಿಡೋ ಬೈಕ್‌ ಚಾಲಕರ ಮೇಲೆ ಹಲ್ಲೆ ಯತ್ನ; ಆಟೋ ಚಾಲಕರ ಕಿರುಕುಳಕ್ಕೆ ಕಂಗಾಲು

ಕರ್ನಾಟದಲ್ಲೂ ಇದೇ ಬೇಡಿಕೆ

ಕರ್ನಾಟಕದಲ್ಲಿ ಕೂಡ ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳ ಓಡಾಟ ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳಿಂದ ಆಟೋ ಚಾಲಕರಿಗೆ ಭಾರಿ ತೊಂದರೆಯಾಗುತ್ತದೆ. ಇದರಿಂದ ಆಟೋ ಚಾಲಕರ ಬದುಕು ಬೀದಿಗೆ ಬರುತ್ತದೆ. ಹಾಗಾಗಿ, ರ‍್ಯಾಪಿಡೋ, ಓಲಾ ಬೈಕ್‌-ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ಕೂಡ ನಡೆಸಲಾಗಿದೆ. ಇನ್ನು, ಮಹಾರಾಷ್ಟ್ರದಲ್ಲೂ ಅನುಮತಿ ಇಲ್ಲದೆ ರ‍್ಯಾಪಿಡೋ ಟ್ಯಾಕ್ಸಿಗಳ ಸಂಚಾರ ಆರಂಭಿಸಲಾಗಿತ್ತು. ಹಾಗಾಗಿ, ಅವುಗಳ ಸಂಚಾರ ನಿಷೇಧಿಸಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version