Site icon Vistara News

RTI Online | ಇನ್ನು ಸುಪ್ರೀಂ ಕೋರ್ಟ್‌ ಆರ್‌ಟಿಐಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

Justice D Y Chandrachud

ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತನ್ನ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮಾಹಿತಿ ಹಕ್ಕು ಕಾಯ್ದೆ(RTI online) ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ. ನ್ಯಾಯಾಲಯದಲ್ಲೇ ಈ ಕುರಿತು ಘೋಷಣೆ ಮಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು, ಆರ್‌ಟಿಇ ಪೋರ್ಟಲ್ ಸಿದ್ಧವಾಗಿದೆ. ಬಳಸಿಕೊಳ್ಳಬಹುದು ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ಜಾಲತಾಣದಲ್ಲಿ ಈ ಬಗ್ಗೆ ಲಿಂಕ್ ಕೊಡಲಾಗಿದ್ದು, ಮಂಗಳವಾರದಿಂದಲೇ ಈ ಪರೀಕ್ಷಿಸಲಾಗುತ್ತಿತ್ತು. ಅಂತಿಮವಾಗಿ ಶುಕ್ರವಾರ ಆರ್‌ಟಿಐ ಪೋರ್ಟಲ್ ಸಿದ್ಧವಾಗಿ, ಕಾರ್ಯನಿರ್ವಹಿಸುತ್ತಿದೆ.

ಆನ್ಲೈನ್ ಮೂಲಕ ಆರ್‌ಟಿಐ ಅರ್ಜಿ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೋರ್ಟ್ ನವೆಂಬರ್ 11ರಂದು ಘೋಷಣೆ ಮಾಡಿತ್ತು. ಈ ಮೊದಲು ಅರ್ಜಿಗಳನ್ನು ಮುಖ್ಯ ಮಾಹಿತಿ ಅಧಿಕಾರಿಗೆ ಭೌತಿಕವಾಗಿ ಸಲ್ಲಿಸಬೇಕಾಗುತ್ತಿತ್ತು. ಕೋರ್ಟ್‌ಗೆ ಸಂಬಂಧಿಸಿದ ಆರ್‌ಟಿಐ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕೋರಿ ಕಾನೂನು ವಿದ್ಯಾರ್ಥಿ ಆಕೃತಿ ಅಗರ್ವಾಲ್ ಮತ್ತು ಲಕ್ಷ್ಯ ಪುರೋಹಿತ್ ಅವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ | RTI | ದುಡ್ಡು ಕಾಸು, ಆದಾಯ ವಿವರ ನೀಡದ ಪತಿ, ಆರ್‌ಟಿಐ ಮೂಲಕ ಪ್ರಶ್ನಿಸಿ ಉತ್ತರ ಪಡೆದ ಪತ್ನಿ!

Exit mobile version