ನವದೆಹಲಿ: ಬೇಸಿಗೆ ರಜೆ ಮುಗಿದು ಸುಪ್ರೀಂ ಕೋರ್ಟ್ (Supreme Court) ಮರಳಿ ಜುಲೈ 3ರಂದು ಆರಂಭವಾಗಲಿದೆ. ಈ ವೇಳೆ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಸರನ್ನು ನೇಮಕ ಮಾಡುವ ಸಂಬಂಧ ಹೊಸ ವ್ಯವಸ್ಥೆಯು ಜಾರಿಗೆ ಬರಲಿದೆ (new roster system) ಎಂದು ತಿಳಿದು ಬಂದಿದೆ. ಫೈಲಿಂಗ್ ಹಂತದಲ್ಲಿ ನಿಗದಿಪಡಿಸಲಾದ ಕೇಸ್ ವಿಭಾಗಗಳ ಆಧಾರದ ಮೇಲೆ ವೈಜ್ಞಾನಿಕವಾದ ರೋಸ್ಟರ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಹೊಸ ರೋಸ್ಟರ್ ವ್ಯವಸ್ಥೆಯು ಪ್ರಕರಣಗಳ ಒಳಹರಿವು ಮತ್ತು ಬಾಕಿಯನ್ನು ಆಧರಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಪರಿಣತಿಯನ್ನು ಪರಿಗಣಿಸಿ ಅವರಿಗೆ ಅದೇ ರೀತಿಯ ಪ್ರಕರಣಗಳನ್ನು ವಿಚಾರಣೆಗೆ ಒಪ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಬಾರ್ ಆ್ಯಂಚ್ ಬೆಂಚ್ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸಾಮಾನ್ಯ ಸಿವಿಲ್, ಕ್ರಿಮಿನಲ್ ಮತ್ತು ಸೇವಾ ಕೇಸ್‌ಗಳೇ ಹೆಚ್ಚಾಗಿ ಬರುವುದರಿಂದ ಮತ್ತು ಅದೇ ಕೇಸುಗಳು ಬಾರಿ ಇರುವುದಿಂದ ಈ ವರ್ಗದ ಪ್ರಕರಣಗಳ ವಿಚಾರಣೆಗೆ ಹೆಚ್ಚಿನ ನ್ಯಾಯಮೂರ್ತಿಗಳನ್ನು ನೇಮಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಪ್ರಕರಣಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿಲಿದ್ದಾರೆ. ಅಲ್ಲದೇ, ಹಳೆಯ ಪ್ರಕರಣಗಳನ್ನು ತ್ವರೀತವಾಗಿ ವಿಲೇವಾರಿ ಮಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: Supreme Court: ಕಂಬಳ, ಜಲ್ಲಿಕಟ್ಟು, ಚಕ್ಕಡಿ ಸ್ಪರ್ಧೆಗೆ ಅನುಮತಿಸುವ ಕಾನೂನು ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಈ ಹೊಸ ವ್ಯವಸ್ಥೆಯಲ್ಲಿ ತಜ್ಞ ಪೀಠಗಳು ಇರಲಿವೆ. ಪ್ರತ್ಯೇಕ್ಷ ಮತ್ತು ಪರೋಕ್ಷ ತೆರಿಗೆ, ಭೂಸ್ವಾಧೀನ, ಪರಿಹಾರ, ದಿವಾಳಿ, ಕಾರ್ಪೊರೇಟ್ ಕಾನೂನು ಸೇರಿದಂತೆ ಹಲವು ವಿಷಯಗಳಗಳ ಪ್ರಕರಣಗಳನ್ನು ತಜ್ಞ ಪೀಠಗಳು ವಿಚಾರಣೆ ನಡೆಸಲಿವೆ. ಕ್ರಿಮಿನಲ್ ಪ್ರಕರಣಗಳನ್ನು ಬಹು ನ್ಯಾಯಮೂರ್ತಿಗಳು ನಿರ್ವಹಣೆ ಮಾಡಲಿದ್ದಾರೆ. ಪ್ರಕರಣಗಳ ವಿಚಾರಣೆಯಲ್ಲಿ ಪಾರದರ್ಶಕತೆ ಮತ್ತು ಖಚಿತತೆಯನ್ನು ತರಲು ಈ ಹೊಸ ರೋಸ್ಟರ್ ವ್ಯವಸ್ಥೆ ನೆರವು ಒದಗಿಸಲಿದೆ. ರೋಸ್ಟರ್ ಜೊತೆಗೆ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮುಂದೆ ಹೊಸ ಪ್ರಕರಣಗಳ ಪಟ್ಟಿ ಮತ್ತು ಉಲ್ಲೇಖಕ್ಕಾಗಿ ಹೊಸ ಪ್ರಕ್ರಿಯೆ ಕೂಡ ಜುಲೈ 3 ರಿಂದ ಕಾರ್ಯನಿರ್ವಹಿಸಲಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.