Site icon Vistara News

Japanese Surnames: ಜಪಾನ್‌ನ ಅಷ್ಟೂ ಜನರ ಅಡ್ಡ ಹೆಸರು ಒಂದೇ ಆಗಲಿದೆ!

Surname

ಒಂದು ದೇಶದ ಪ್ರಜೆಗಳೆಲ್ಲರೂ ತಮ್ಮ ಹೆಸರಿನ ಜತೆ ಒಂದೇ ಅಡ್ಡ ಹೆಸರನ್ನು (Japanese Surnames) ಹೊಂದುವಂತಿದ್ದರೆ ಹೇಗಿರಬಹುದು? ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಊಹಿಸುವುದು ಕಷ್ಟ. ಆದರೆ 2531ರ ವೇಳೆಗೆ ಅಂದರೆ ಸುಮಾರು 500 ವರ್ಷಗಳ ಬಳಿಕ ಇದು ನಿಜವಾಗಲಿದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ.

ಜಪಾನ್‌ನಲ್ಲಿ ಮುಂದಿನ 500 ವರ್ಷಗಳಲ್ಲಿ ಪ್ರತಿಯೊಬ್ಬರೂ ಒಂದೇ ಸರ್ ನೇಮ್ ಅನ್ನು ಹೊಂದಲಿದ್ದಾರೆ ಎಂದು ಇದು ತಿಳಿಸಿದೆ. ಅಲ್ಲಿನ ತೊಹೊಕು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಹಿರೋಶಿ ಯೋಶಿಡಾ ಅವರು 1800ರ ದಶಕದಿಂದ ಜಾರಿಯಲ್ಲಿರುವ ನಾಗರಿಕ ಸಂಹಿತೆಯನ್ನು ನವೀಕರಿಸುವ ಅಭಿಯಾನದ ಭಾಗವಾಗಿ ಈ ಅಧ್ಯಯನ ನಡೆಸಿದ್ದಾರೆ.

ಇಬ್ಬರಿಗೂ ಒಂದೇ ಸರ್ ನೇಮ್ ಕಡ್ಡಾಯ

ವಿವಾಹವಾದ ಬಳಿಕ ಪ್ರತ್ಯೇಕ ಸರ್ ನೇಮ್ ಗಳನ್ನು ಬಳಸದೆ ಹೋದಲ್ಲಿ ಅಂದರೆ ಇಬ್ಬರೂ ಒಂದೇ ಸರ್ ನೇಮ್ ನಿಂದ ಗುರುತಿಸಿಕೊಳ್ಳುವುದು ಕಡ್ಡಾಯವಾದರೆ 2531ರ ವೇಳೆಗೆ ಪ್ರತಿಯೊಬ್ಬರ ಹೆಸರು ಕೂಡಾ ಸ್ಯಾಟೊ ಸ್ಯಾನ್ ಎಂಬ ಉಪನಾಮದೊಂದಿಗೆ ಕೊನೆಗೊಳ್ಳಬಹುದು ಎಂಬುದನ್ನು ಈ ಸಂಶೋಧನೆ ತಿಳಿಸಿದೆ. ಸದ್ಯ ಜಪಾನಿನಲ್ಲಿ ದಂಪತಿಗಳು ಒಂದೇ ಕುಟುಂಬದ ಹೆಸರನ್ನು ಹೊಂದಿರಬೇಕು ಎಂಬ ನಿಯಮ ಜಾರಿಯಲ್ಲಿದೆ.

ಹಲವಾರು ಸಾಧ್ಯತೆಗಳ ಆಧಾರದ ಮೇಲೆ ನಡೆದ ಈ ಅಧ್ಯಯನವು ಜಪಾನಿನ ಸಮಾಜದ ಮೇಲೆ ಪ್ರಸ್ತುತ ವ್ಯವಸ್ಥೆಗಳು ಬೀರುವ ಪ್ರಭಾವದ ಬಗ್ಗೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ.

ಪ್ರತಿಯೊಬ್ಬರ ದ್ವಿತೀಯ ಹೆಸರು ಸ್ಯಾಟೋ ಆದರೆ ಮೊದಲ ಹೆಸರಿನಿಂದಲೇ ಅಥವಾ ಸಂಖ್ಯೆಗಳಿಂದ ವ್ಯಕ್ತಿಗಳನ್ನು ನಾವು ಗುರುತಿಸಬೇಕಾದೀತು. ಇದು ದೇಶದ ಅಭಿವೃದ್ಧಿಗೆ ಪೂರಕವಲ್ಲ ಎಂದು ಉಪನ್ಯಾಸಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸ್ಯಾಟೊ-ಸುಜುಕಿ ಸರ್ ನೇಮ್

ಇಂದು ಜಪಾನ್ ನಲ್ಲಿ ಸ್ಯಾಟೊ ಎಂಬ ಸರ್ ನೇಮ್ ಹೊಂದಿರುವುದು ತೀರಾ ಸಾಮಾನ್ಯವಾಗಿದೆ. ಇದು 125.1 ಮಿಲಿಯನ್ ಜನಸಂಖ್ಯೆ ಹೊಂದಿರುವ ಜಪಾನ್ ನಲ್ಲಿ ಇದರ ಪ್ರಮಾಣ 1.5 ಪ್ರತಿಶತದಷ್ಟಿದೆ. ಎರಡನೆಯ ಸ್ಥಾನದಲ್ಲಿ ಸುಜುಕಿ ಎಂಬ ಸರ್ ನೇಮ್ ಇದೆ.

ಈ ಅಧ್ಯಯನದ ಅಂಶಗಳು ಏಪ್ರಿಲ್ ಒಂದರಂದು ಪ್ರಕಟವಾದ್ದರಿಂದ ಇದೊಂದು ತಮಾಷೆಯ ಸಂಗತಿ ಎಂದು ಹಲವರು ಭಾವಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ಯೋಶಿದಾ ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಪ್ರತಿಯೊಬ್ಬರೂ ಒಂದೇ ಸರ್ ನೇಮ್ ಅನ್ನು ಹೊಂದಿದ್ದರೆ ಜನರ ಮಧ್ಯೆ ವ್ಯತ್ಯಾಸ ಗುರುತಿಸುವುದು ಕಷ್ಟ. ಅದಕ್ಕಾಗಿ ಮತ್ತೊಂದು ಮಾರ್ಗವನ್ನು ಕಂಡುಹಿಡಿಯಲೂ ಸಾಧ್ಯವಿಲ್ಲ. ಇದರಿಂದ ವೈಯಕ್ತಿಕ ಘನತೆಯೂ ಕುಂದಬಹುದು. ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ:Arvind kejriwal: ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಪಕ್ಕದ ಕೋಣೆಗಳಲ್ಲೇ ಇದ್ದಾರೆ ಭೂಗತ ಪಾತಕಿಗಳು, ಭಯೋತ್ಪಾದಕರು!

ಈ ಎಲ್ಲಾ ತೊಂದರೆಗಳ ಹೊರತಾಗಿಯೂ ಉಪನಾಮಗಳನ್ನು ಕಳೆದುಕೊಳ್ಳುವುದರಿಂದ ತುಂಬಲಾರದ ಸಾಂಸ್ಕೃತಿಕ ಹಾಗೂ ಪ್ರಾದೇಶಿಕತೆಯ ನಷ್ಟ ಉಂಟಾಗುತ್ತದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

2022-23ರ ನಡುವೆ ಸ್ಯಾಟೋ ಸರ್ ನೇಮ್ ಹೊಂದಿರುವವರ ಸಂಖ್ಯೆ 1.0083ಯಷ್ಟು ಹೆಚ್ಚಿದೆ. 2446ರ ವೇಳೆಗೆ ಅರ್ಧದಷ್ಟು ಜನ ಹಾಗೂ 2531ರ ವೇಳೆಗೆ 100 ಪ್ರತಿಶತಕ್ಕೆ ಏರಲಿದೆ. ಜಪಾನ್ ನಲ್ಲಿ ಶೇ.95ರಷ್ಟು ಮದುವೆಗಳಲ್ಲಿ ಮಹಿಳೆ ತನ್ನ ಕೊನೆಯ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಸಂಗಾತಿಗಳು ಒಂದೇ ಕುಟುಂಬದ ಹೆಸರನ್ನು ಬಳಸುವ ಅಗತ್ಯವಿರುವ ವಿಶ್ವದ ಏಕೈಕ ದೇಶ ಇದಾಗಿದೆ. 

Exit mobile version