ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಸೆಪ್ಟೆಂಬರ್ನಿಂದ ಭಾರತ್ ಜೋಡೊ ಯಾತ್ರೆ (Bharat Jodo Yatra) ನಡೆಸುತ್ತಿದ್ದಾರೆ. ಕನ್ಯಾಕುಮಾರಿಯಿಂದ ಹಿಡಿದು ಜಮ್ಮು- ಕಾಶ್ಮೀರದ ತನಕ 3500 ಕಿಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಈ ಯೋಜನೆ ಕಾಂಗ್ರೆಸ್ಗೆ ಮತವಾಗಿ ಪರಿವರ್ತನೆಗೊಳ್ಳದು ಎಂದು ಮತದಾರರು ಹೇಳಿದ್ದಾರೆ. ಸಿ ವೋಟರ್ ಸಮೀಕ್ಷೆಯಲ್ಲಿ (Mood Of the nation) ಈ ಅಂಶ ಪ್ರಕಟಗೊಂಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 37ರಷ್ಟು ಮಂದಿ, ಯಾತ್ರೆ ಖ್ಯಾತಿ ತಂದರೂ ಮತ ತರದು ಎಂದು ಹೇಳಿದ್ದಾರೆ.
1,40,917 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಹೆಚ್ಚುವರಿಯಾಗಿ ಸಿ ವೋಟರ್ 1,05,008 ಮಂದಿಯ ಅಭಿಪ್ರಾಯ ಕೇಳಿದೆ. ಅವರ ಪ್ರಕಾರ ಭಾರತ ಜೋಡೋ ಯಾತ್ರೆ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಹೊರತಾಗಿಯೂ ಕಾಂಗ್ರೆಸ್ಗೆ ಪೂರಕ ಮತವಾಗದು.
ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶೇಕಡಾ 29ರಷ್ಟು ಮಂದಿ ಜೋಡೋ ಯಾತ್ರೆ, ಜನರ ನಡುವಿನ ಸಂಪರ್ಕ ಸೇತುವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ. ಶೇಕಡಾ 13ರಷ್ಟು ಮಂದಿ ಇದರಿಂದ ರಾಹುಲ್ ಗಾಂಧಿಯ ವರ್ಚಸ್ಸು ಅಧಿಕವಾಗಿದೆ ಎಂದಿದ್ದಾರೆ. ಶೇಕಡಾ 9ರಷ್ಟು ಮಂದಿ ಇದು ನಿಷ್ಪ್ರಯೋಜಕ ಎಂದಿದ್ದಾರೆ.
ಅಷ್ಟಾಗಿಯೂ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿಯೇ ಉತ್ತಮ ಎಂಬ ಅಭಿಪ್ರಾಯ ಮೂಡಿ ಬಂದಿದೆ. ಶೇಕಡಾ 26ರಷ್ಟು ಮಂದಿ ರಾಹುಲ್ ಬೆನ್ನಿಗೆ ನಿಂತಿದ್ದಾರೆ. ಶೇ 17ರಷ್ಟು ಜನರು ಸಚಿನ್ ಪೈಲೆಟ್ ಆಯ್ಕೆ ಬಯಸಿದ್ದಾರೆ.
ಇದನ್ನೂ ಓದಿ : Bharat Jodo | ರಾಹುಲ್ ಗಾಂಧಿಗೆ ಭಾರತ್ ಜೋಡೊದಲ್ಲಿ ಹೆಜ್ಜೆ ಹಾಕಿದ ದಣಿವಿಗಿಂತ ಪಕ್ಷ ಬಿಕ್ಕಟ್ಟಿನ ದಣಿವೇ ಹೆಚ್ಚು!
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರಿಗಿಂತ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅಥವಾ ಆಪ್ ಮುಖಂಡ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೂಕ್ತ ಎಂದಿದ್ದಾರೆ.