ಹೊಸದಿಲ್ಲಿ: ಅಲ್ಪಸಂಖ್ಯಾತ ಮೋರ್ಚಾ(Minority Morcha)ವನ್ನು ರದ್ದುಗೊಳಿಸಬೇಕೆಂದು ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ(Suvendu Adhikari Control) ನೀಡಿರುವ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಸ್ವಪಕ್ಷದಲ್ಲೇ ಸುವೇಂದು ಅಧಿಕಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ(Jamal Siddiqui) ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದಿಕಿ, ಸುವೇಂದು ಅಧಿಕಾರಿ ಬಿಜೆಪಿಗೆ ಹೊಸಬರು, ಕೆಲವೇ ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರಿದ್ದಾರೆ ಮತ್ತು ಟಿಎಂಸಿಯಲ್ಲಿ ಅವರ ಹಿಂದಿನ ರಾಜಕೀಯ ಅನುಭವಗಳಿಂದ ಪ್ರಭಾವಿತರಾಗಬಹುದು, ಅಲ್ಲಿ ಕೇವಲ ಅಧಿಕಾರವನ್ನು ಗಳಿಸುವತ್ತ ಗಮನ ಹರಿಸಲಾಗಿದೆ. ಅಧಿಕಾರಿ ಬಿಜೆಪಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಂತೆ, ಪಕ್ಷವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಅರಿತುಕೊಳ್ಳುತ್ತಾರೆ. ಅವರ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಸುವೇಂದು ಅಧಿಕಾರಿಯವರ ಹೇಳಿಕೆಯು ಭಾವನಾತ್ಮಕ ಯಾತನೆ ಮತ್ತು ನಿರಾಶೆಯ ಕ್ಷಣದಲ್ಲಿ ಮಾಡಲ್ಪಟ್ಟಿದೆ, ಆದರೆ ಬಿಜೆಪಿ ಅಂತಹ ಭಾವನಾತ್ಮಕ ಪ್ರಚೋದನೆಗಳ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಬಿಜೆಪಿಯ ಆತ್ಮವಾಗಿದೆ. ಹೇಗೆ ಆತ್ಮವಿಲ್ಲದೆ ದೇಹವು ನಿಷ್ಪ್ರಯೋಜಕವಾಗಿದೆಯೋ ಹಾಗೆಯೇ ಭಾರತೀಯ ಜನತಾ ಪಕ್ಷವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಇಲ್ಲದೇ ಇಲ್ಲ ಎಂದಿದ್ದಾರೆ.
#WATCH | Delhi: On Suvendu Adhikari's statement, "Jo humare saath, hum unke saath, National president of the BJP Minority Morcha, Jamal Siddiqui says, "Suvendu Adhikari is new to the BJP, joined only a few years ago, and may still be influenced by his past political experiences… pic.twitter.com/5dkyuSZAAL
— ANI (@ANI) July 20, 2024
ಸುವೇಂದು ಅಧಿಕಾರಿ ಹೇಳಿಕೆ ಏನು?
ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ(BJP) ಕಳಪೆ ಪ್ರದರ್ಶನಕ್ಕೆ ಅಲ್ಪಸಂಖ್ಯಾತರ ಬೆಂಬಲದ ಕೊರತೆಯೇ ಪ್ರಮುಖ ಕಾರಣ. ಹೀಗಾಗಿ ಅಲ್ಪಸಂಖ್ಯಾತ ಮೋರ್ಚಾವನ್ನು ರದ್ದುಗೊಳಿಸಬೇಕೆಂದು ಸುವೇಂದು ಕರೆ ನೀಡಿದ್ದರು. ನಮ್ಮ ಪಕ್ಷದ ಮೂಲ ಗುರಿ ಸಬ್ಕಾ ಸಾಥ್ ಸಬ್ಕಾ ವಿಕಾಸ್. ನಾನು ರಾಷ್ಟ್ರೀಯವಾದಿ ಮುಸ್ಲಿಮರ ಜೊತೆಗೂ ಮಾತನಾಡಿದ್ದೇನೆ. ಇನ್ನು ಮುಂದೆ ನಮ್ಮ ಪಕ್ಷದ ಗುರಿ ನಮ್ಮ ಜೊತೆ ಯಾರು ಇರುತ್ತಾರೋ ನಾವು ಅವರ ಜೊತೆ ಇರುತ್ತೇವೆ ಎಂಬುದಾಗಿ ಬದಲಾಗಬೇಕು. ಇನ್ನು ಮುಂದೆ ಅಲ್ಪ ಸಂಖ್ಯಾತ ಮೋರ್ಚಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.
ಇನ್ನು ಸುವೆಂಧು ಅಧಿಕಾರಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಪಕ್ಷ ಎಂದು ಕಿಡಿಕಾರಿವೆ. ಇದರ ಬೆನ್ನಲ್ಲೇ ಸುವೆಂಧು ಅಧಿಕಾರಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಟ್ಟು ನೋಡಲಾಗ್ತಿದೆ. ಅದು ಅಲ್ಲದೇ ತಪ್ಪಾಗಿ ಅರ್ಥೈಸಲಾಗುತ್ತಿದೆ. ರಾಷ್ಟ್ರೀಯವಾದಿಗಳು ಈ ರಾಷ್ಟ್ರ ಮತ್ತು ಬಂಗಾಳದ ಪರವಾಗಿ ನಿಲ್ಲುತ್ತಾರೆ ಮತ್ತು ನಾವು ಅವರೊಂದಿಗೆ ಇರಬೇಕು ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಮ್ಮೊಂದಿಗೆ ನಿಲ್ಲದವರು ರಾಷ್ಟ್ರ ಮತ್ತು ಬಂಗಾಳದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಮಮತಾ ಬ್ಯಾನರ್ಜಿಯವರಂತೆ ನಾವು ಜನರನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜಿಸಬಾರದು. ಎಲ್ಲರನ್ನೂ ಭಾರತೀಯರು ಎಂಬಂತೆ ಕಾಣಬೇಕು. ಪ್ರಧಾನಿ ನರೇಂದ್ರ ಮೋದಿ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ಪ್ರಯಾಸ್ ಎಂಬುದಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ಎಲ್ಲರೂ ನಡೆಕೊಳ್ಳಬೇಕಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ