ಬೆಂಗಳೂರು: ನಟಿ ಸ್ವರಾ ಭಾಸ್ಕರ್ (Swara Bhaskar) ರಾಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿದ್ದಾರೆ. ಇದರ ಬೆನ್ನಲೇ ಇದೀಗ ಸ್ವರಾ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಸಹೋದರ ಎಂದು ಕರೆದವನ ಜತೆ ಸ್ವರಾ ಮದುವೆಯಾಗಿರುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಫಹಾದ್ ಅಹ್ಮದ್ ಜತೆ ನಟಿ ಸ್ವರಾ ಭಾಸ್ಕರ್ ಸೆಲ್ಫಿಯನ್ನು ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್! ಸಹೋದರನ ವಿಶ್ವಾಸವು ಹಾಗೇ ಉಳಿಯಲಿ. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದರುʼʼಈ ಹಳೆಯ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ವಿಶೇಷ ಅಂದರೆ ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಈ ಟ್ವೀಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Swara Bhaskar: ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಸ್ವರಾ ಭಾಸ್ಕರ್: ಫೋಟೊಗಳನ್ನು ಹಂಚಿಕೊಂಡ ಜೋಡಿ
ಈ ಫೋಟೊಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, ನೆಟ್ಟಿಗನೊಬ್ಬ ʻʻಸಹೋದರ, ಸಹೋದರಿ ದಾಂಪತ್ಯ ಜೀವನದ ಶುಭ ಹಾರೈಕೆʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Swara Bhaskar: ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಸ್ವರಾ ಭಾಸ್ಕರ್: ಫೋಟೊಗಳನ್ನು ಹಂಚಿಕೊಂಡ ಜೋಡಿ
ನಟಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗೇಯೇ ನ್ಯಾಯಾಲಯದ ಮುಂದೆ ವಿವಾಹವಾದ ನಂತರ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಜೋಡಿ ಶೇರ್ ಮಾಡಿಕೊಂಡಿದೆ. ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ