Site icon Vistara News

Swara Bhaskar: ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಸ್ವರಾ ಭಾಸ್ಕರ್: ಫೋಟೊಗಳನ್ನು ಹಂಚಿಕೊಂಡ ಜೋಡಿ

Swara Bhaskar shares pictures from her court marriage with Fahad Ahmad

ಬೆಂಗಳೂರು: ನಟಿ ಸ್ವರಾ ಭಾಸ್ಕರ್ (Swara Bhaskar) ರಾಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ (ಫೆಬ್ರವರಿ 16) ತನ್ನ ಟ್ವೀಟ್‌ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡರು. ಇದೀಗ ನಟಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗೇಯೇ ನ್ಯಾಯಾಲಯದ ಮುಂದೆ ವಿವಾಹವಾದ ನಂತರ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಜೋಡಿ ಶೇರ್‌ ಮಾಡಿಕೊಂಡಿದೆ.

ಜೋಡಿ ಮದುವೆಯ ಸಂಭ್ರಮಾಚರಣೆಯಲ್ಲಿರುವ ಕ್ಷಣಗಳನ್ನು ಟ್ವೀಟ್‌ ಮೂಲಕ ಶೇರ್‌ ಮಾಡಿಕೊಂಡಿದೆ. ಫಹಾದ್ ಟ್ವೀಟ್‌ನಲ್ಲಿ ಡ್ಯಾನ್ಸ್‌ ಮಾಡುತ್ತಿರವ ಫೋಟೊ ಹಂಚಿಕೊಂಡು ʻಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು.ʼʼ ಎಂದು ಬರೆದುಕೊಂಡಿದ್ದಾರೆ. ಸ್ವರಾ ಭಾಸ್ಕರ್ ಮೆರೂನ್ ಸೀರೆಯಲ್ಲಿ ಮಿಂಚಿದರೆ, ಅಹ್ಮದ್ ಬಿಳಿ ಕುರ್ತಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Rahul Gandhi | ಕೈ ಆಡಳಿತದ ರಾಜಸ್ಥಾನದಲ್ಲಿ ರೈತನ ಮನೆಗೆ ಚಹಾ ಕುಡಿಯಲು ಹೋದ ರಾಹುಲ್‌ಗೆ ವಿದ್ಯುತ್‌ ಬಿಲ್‌ ದೂರು

ಸ್ವರಾ ಭಾಸ್ಕರ್ ಕೂಡ ಇದೆ ಫೋಟೊವನ್ನು ಶೇರ್‌ ಮಾಡಿಕೊಂಡು ʻʻಅಮ್ಮನ ಮದುವೆಯ ಸಾರಿ,ಕಾನೂನು ಬದ್ಧವಾಗಿ ಮದುವೆಯಾಗಿದ್ದೇವೆ. ವಿಶೇಷ ವಿವಾಹ ಕಾಯಿದೆ ಅಡಿ, ಪ್ರೀತಿಸುವ ಹಕ್ಕು, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು, ಮದುವೆಯಾಗುವ ಹಕ್ಕುʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ನಟಿ ತನ್ನ ತಲೆಯನ್ನು ಯಾರೊಬ್ಬರ ತೋಳುಗಳಲ್ಲಿ ಆರಾಮದಾಯಕವಾಗಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇದು ಪ್ರೀತಿ ಆಗಿರಬಹುದು” ಎಂದು ಸ್ವರಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.

ಇದನ್ನೂ ಓದಿ: Swara Bhaskar: ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್

ಈ ಹಿಂದೆ, ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಇತ್ತು.

Exit mobile version