ಲಕ್ನೋ: ಆಮ್ ಆದ್ಮಿ ಪಕ್ಷದ(AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್(Swati Maliwal) ಮೇಲೆ ಹಲ್ಲೆ ಆರೋಪ ಎದುರಿಸುತ್ತಿರುವ ವಿಭವ್ ಕುಮಾರ್(Bibhav Kumar) ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಜೊತೆ ಕಾಣಿಸಿಕೊಂಡಿದ್ದಾನೆ. ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೇಜ್ರಿವಾಲ್ ಜೊತೆ ವಿಭವ್ ಕುಮಾರ್ ಕೂಡ ಕಾಣಿಸಿಕೊಂಡಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ಬಿಜೆಪಿ ನಾಯಕರು ಸೇರಿದಂತೆ ಅನೇಕ ಕಿಡಿ ಕಾರಿದ್ದಾರೆ.
ಬುಧವಾರ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸಭೆಯಲ್ಲಿ ಭಾಗಿಯಾಗಲೆಂದು ಲಕ್ನೋಗೆ ಆಗಮಿಸಿದ್ದ ಕೇಜ್ರಿವಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆಗ ಅವರ ಜೊತೆಗೆ ವಿಭವ್ ಕುಮಾರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಸ್ವಾಮಿ ಮೇಲೆ ಹಲ್ಲೆ ನಡೆದು ಎರಡು ಮೂರು ದಿನಗಳು ಕಳೆದಿದೆ ಅಷ್ಟೇ. ಅಷ್ಟರೊಳಗೆ ಕೇಜ್ರಿವಾಲ್ ಜೊತೆಗೆ ಕಾಣಿಸಿಕೊಂಡಿರುವುದು ಎಲ್ಲರ ಆಕ್ರೋಶಕ್ಕೆ ಕಾಣವಾಗಿದೆ.
ಬಿಜೆಪಿ ಕಿಡಿ:
ಕೇಜ್ರಿವಾಲ್ ಜೊತೆ ವಿಭವ್ ಕುಮಾರ್ ಕಾಣಿಸಿಕೊಂಡಿರುವುದಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಬಿಜೆಪಿ ನಾಯಕ ತಾಜಿಂದರ್ ಬಗ್ಗಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಸ್ವಾತಿ ಮಲಿವಾಲ್ ಜೊತೆಗೆ ಅನುಚಿತವಾಗಿ ವರ್ತಿಸಿರುವ ವೈಭವ್ ಕುಮಾರ್‌ನನ್ನು ಶಿಕ್ಷೆಯಾಗಿಲ್ಲ. ವೈಭವ್‌ಗೆ ಶಿಕ್ಷಿ ವಿಧಿಸಲಾಗುತ್ತದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. ಆದರೆ ಮಾತ್ರ ಸಿಎಂ ಜೊತೆಗೇ ಇಡೀ ದೇಶ ಸುತ್ತುತ್ತಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.
बहुत कड़ी सजा दी हैं एक महिला सांसद @SwatiJaiHind पर हमला करने वाले बिभव कुमार को @ArvindKejriwal जी ? संजय सिंह जी तो कह रहे थे की आप बिभव पर कड़ी कार्यवाई करेंगे लेकिन आपने तो पूरे देश में दौरा करवाना शुरू कर दिया। pic.twitter.com/veTbCMUjcj
— Tajinder Bagga (Modi Ka Parivar) (@TajinderBagga) May 15, 2024
ಇನ್ನು ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದ ಕುರಿತು ವರದಿಗಾರರು ಅರವಿಂದ್ ಕೇಜ್ರಿವಾಲ್‌ಗೆ ಪ್ರಶ್ನೆಗಳನ್ನು ಕೇಳಿದಾಗ, ಕೇಜ್ರಿವಾಲ್ ಯಾವುದೇ ಉತ್ತರವನ್ನು ನೀಡದೇ, ಮೈಕ್ ಅನ್ನು ಅಖಿಲೇಶ್ ಯಾದವ್‌ರತ್ತ ತಿರುಗಿಸಿದ ಘಟನೆಯೂ ನಡೆದಿದೆ. ಮೈಕ್ ಪಡೆದ ಅಖಿಲೇಶ್ ಅದಕ್ಕಿಂತಲೂ ಮುಖ್ಯವಾದ ವಿಚಾರ ಬೇರೆ ಇದೆ ಎಂದು ಹೇಳುವ ಮೂಲಕ ವಿಷಯಾಂತರ ಮಾಡಿದ್ದಾರೆ. ಈ ವಿಡಿಯೋವನ್ನು ಕೂಡ ತಾಜಿಂದ್ ಬಗ್ಗಾ ಹಂಚಿಕೊಂಡಿದ್ದಾರೆ.
आज INDI अलायंस द्वारा बयान दिया गया की स्वाति मालीवाल,एक महिला सांसद की की पिटाई से ज़्यादा ज़रूरी और भी विषय हैं । ये बयान दर्शाता हैं की महिलायों के प्रति इंडी अलायंस की क्या सोच हैं
— Tajinder Bagga (Modi Ka Parivar) (@TajinderBagga) May 16, 2024
pic.twitter.com/OvPDEdgQuA
Just 2 days ago, Sanjay Singh promised action against Bibhav Kumar, who assaulted Swati Maliwal at CM Kejriwal's residence.
— Vishnu Vardhan Reddy (Modi ka Parivar) (@SVishnuReddy) May 16, 2024
And today, Arvind Kejriwal and Sanjay Singh were seen with Bibhav Kumar at Lucknow airport. It's clear Bibhav Kumar will face no consequences, and it also… pic.twitter.com/fsscy7Nz8G
ಇದನ್ನೂ ಓದಿ:Kannada New Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಚಿತ್ರೀಕರಣ ಮುಕ್ತಾಯ
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ತಮ್ಮ ಮೇಲೆ ಸಿಎಂ ನಿವಾಸದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್ ವಿರುದ್ಧ ಅವರು ಈ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ವಾತಿ ಮಲಿವಾಲ್ ಅವರ ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಅವರು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ನಂತರ ಹೇಳಿದ್ದರು.ಸಿಎಂ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಸ್ವಾತಿ ಮಲಿವಾಲ್ ಬಂದಿದ್ದರು ಡ್ರಾಯಿಂಗ್ ರೂಮಿನಲ್ಲಿ ಕಾಯುತ್ತಿದ್ದಳು. ಆಗ ವಿಭವ್ ಕುಮಾರ್ ಅಲ್ಲಿಗೆ ಆಗಮಿಸಿ ಸ್ವಾತಿ ಮಲಿವಾಲ್ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.