ಚೆನ್ನೈ/ನವದೆಹಲಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಝಡ್ ಶ್ರೇಣಿ ಭದ್ರತೆ (Z Security To Annamalai) ಒದಗಿಸಿದೆ. ಅವರಿಗೆ ಜೀವ ಬೆದರಿಕೆ ಇರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ 33 ಕಮಾಂಡೋಗಳು ಅಣ್ಣಾಮಲೈ ಅವರಿಗೆ ಭದ್ರತೆ ಒದಗಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಿಗೆ ಮಾವೋವಾದಿಗಳು ಹಾಗೂ ಧಾರ್ಮಿಕ ಮೂಲಭೂತವಾದಿಗಳಿಂದ ಬೆದರಿಕೆ ಇರುವುದರಿಂದ ಝಡ್ ಕೆಟಗರಿ ಭದ್ರತೆ ಒದಗಿಸಬೇಕು ಎಂದು ಗುಪ್ತಚರ ಇಲಾಖೆ ಶಿಫಾರಸು ಮಾಡಿತ್ತು.
ಇದುವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ವೈ ಶ್ರೇಣಿ ಭದ್ರತೆ ನೀಡಲಾಗುತ್ತಿತ್ತು. ಇದರ ಅಡಿಯಲ್ಲಿ 11 ಸಿಬ್ಬಂದಿಯು ಅಣ್ಣಾಮಲೈ ಅವರಿಗೆ ಭದ್ರತೆ ಒದಗಿಸುತ್ತಿದ್ದರು. ಝಡ್ ಕೆಟಗರಿ ಭದ್ರತೆ ಅಡಿಯಲ್ಲಿ ಅಣ್ಣಾಮಲೈ, ಅವರ ನಿವಾಸ ಹಾಗೂ ಕಚೇರಿಗೆ ಸಿಆರ್‌ಪಿಎಫ್ ಸಿಬ್ಬಂದಿ ಹೆಚ್ಚಿನ ಭದ್ರತೆ ಒದಗಿಸಲಿದ್ದಾರೆ. ಪ್ರಯಾಣಿಸುವ ವೇಳೆ ಎಸ್ಕಾರ್ಟ್ ವಾಹನದ ಭದ್ರತೆಯೂ ಇರಲಿದೆ.
ಇದನ್ನೂ ಓದಿ | CCTV On Deity Face | ತಮಿಳುನಾಡಿನಲ್ಲಿ ದೇವತೆ ಮುಖಕ್ಕೆ ಸಿಸಿಟಿವಿ ಅಳವಡಿಕೆ, ಡಿಎಂಕೆ ವಿರುದ್ಧ ಅಣ್ಣಾಮಲೈ ಆಕ್ರೋಶ